Oily Skin : ನಿಮ್ಮದು ಎಣ್ಣೆಯುಕ್ತ ತ್ವಚೆನಾ; ಹಾಗಾದರೆ ಇದನ್ನು ಮಾಡಿ ನೋಡಿ, ಒಂದೇ ವಾರದಲ್ಲಿ ಸಮಸ್ಯೆ ದೂರವಾಗುವುದು

ಈಗ ಪ್ರತಿಯೊಬ್ಬರಿಗೂ ಬ್ಯೂಟಿ ಕಾನ್ಷಿಯಸ್‌ ಹೆಚ್ಚು. ಸುಂದರವಾಗಿ ಕಾಣಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್‌ (Cream) ಗಳನ್ನು ಉಪಯೋಗಿಸುತ್ತಲೇ ಇರುತ್ತಾರೆ. ಒಂದು ವೇಳೆ ತ್ವಚೆ ಎಣ್ಣೆಯುಕ್ತವಾಗಿದ್ದರೆ ಅದಕ್ಕೆ ಬಹಳಷ್ಟು ಚಿಂತೆಯನ್ನೂ ಮಾಡುತ್ತಾರೆ. ಏಕೆಂದರೆ ಅದರಿಂದ ಮೊಡವೆ (Pimple) ಗಳು ಏಳುತ್ತವೆ ಮತ್ತು ಮುಖದ ಅಂದ ಹಾಳಾಗುತ್ತದೆ. ಹುಡುಗಿಯರಿಗಂತೂ ಇದೊಂದು ದೊಡ್ಡ ಸಮಸ್ಯೆ. ಬೇರೇ ಬೇರೆ ಕ್ರೀಮ್‌ಗಳನ್ನು ಉಪಯೋಗಿಸುವ ಬದಲು ಮನೆಯಲ್ಲಿಯೇ ಸಿಗುವ ವಸ್ತುಗಳು ಬಹಳ ಪರಿಣಾಮಕಾರಿಯಾಗಿರುತ್ತವೆ. ಎಣ್ಣೆಯುಕ್ತ ತ್ವಚೆಗೆ (Oily Skin) ಅಕ್ಕಿಯ ನೀರು (Rice water) ಉತ್ತಮವಾಗಿದೆ. ಈ ಅಕ್ಕಿಯ ನೀರಿನಿಂದ ಮುಖದ ತ್ವಚೆಯನ್ನು ಟೋನ್‌ ಮಾಡಿ. ಒಂದೇ ವಾರದಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗುವುದು.

Oily Skin : ಅಕ್ಕಿಯ ನೀರು:

ಅನ್ನ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಆದರೆ, ಅಕ್ಕಿಯನ್ನು ತೊಳೆದ ನಂತರ ಆ ನೀರುನ್ನು ನಾವು ಎಸೆದುಬಿಡುತ್ತೇವೆ. ಅದರ ಬದಲಿಗೆ ಅಕ್ಕಿಯನ್ನು ತೊಳೆದ ನೀರನ್ನು ಉಪಯೋಗಿಸಿಕೊಂಡು ತ್ವಚೆಯ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಅಕ್ಕಿಯ ನೀರನ್ನು ಟೋನರ್‌ ರೀತಿಯಲ್ಲಿ ಬಳಸಬಹುದು. ಏಕೆಂದರೆ ಸ್ಕಿನ್‌ಕೇರ್‌ ರೂಟೀನ್‌ನಲ್ಲಿಯೂ ಅಕ್ಕಿಯ ನೀರು ಜಾದೂವನ್ನೇ ಮಾಡುತ್ತದೆ.

ಅಕ್ಕಿಯ ನೀರಿನ ಪ್ರಯೋಜನಗಳು:

  • ಅಕ್ಕಿಯ ನೀರು ಚರ್ಮವನ್ನು ಬಿಗಿಗೊಳಿಸುತ್ತದೆ.
  • ಇದು ಚರ್ಮದಲ್ಲಿರುವ ಎಣ್ಣೆಯನ್ನು ತೆಗೆದುಹಾಕುತ್ತದೆ.
  • ಚಳಿಗಾಲದಲ್ಲಿ ಒಣ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸಲು ಅಕ್ಕಿ ನೀರು ತುಂಬಾ ಪರಿಣಾಮಕಾರಿಯಾಗಿದೆ.
  • ಚರ್ಮದ ಟೋನ್ ಅನ್ನು ಹಗುರಗೊಳಿಸಲು ನೀವು ರಾಯ್ ಸ್ವೆಟರ್ ಅನ್ನು ಬಳಸಬಹುದು.
  • ಇದು ಮುಖದ ಮೇಲಿರು ಡೆಡ್‌ ಸೆಲ್ಸ್‌ ಅನ್ನು ಹೋಗಲಾಡಿಸುತ್ತದೆ.
  • ಸಡಿಲವಾದ ಚರ್ಮ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಅಕ್ಕಿ ನೀರನ್ನು ಬಳಸಬಹುದು.
  • ಇದು ಚರ್ಮ ಕಳೆಗುಂದುವುದನ್ನು ತಪ್ಪಿಸುತ್ತದೆ.

ಅಕ್ಕಿಯ ನೀರು ತಯಾರಿಸುವುದು ಹೇಗೆ?

  • ಒಂದು ಚಿಕ್ಕ ಬೌಲ್‌ನಲ್ಲಿ ಅಕ್ಕಿ ಹಾಕಿ. ಅದನ್ನೂ ಚೆನ್ನಾಗಿ ತೊಳೆಯಿರಿ.
  • ನಂತರ ಅಕ್ಕಿಯ ಬೌಲ್‌ಗೆ ನೀರು ಹಾಕಿ.
  • ರಾತ್ರಿಯಿಡೀ ನೆನೆಯಲು ಬಿಡಿ.
  • ಮರುದಿನ ಬೆಳಿಗ್ಗೆ ಆ ನೀರನ್ನು ಸೋಸಿಕೊಳ್ಳಿ.
  • ಒಂದು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ.
  • ಅದನ್ನು ದಿನಕ್ಕೆ ಎರಡು ಬಾರಿ ಮುಖಕ್ಕೆ ಹಚ್ಚಿಕೊಳ್ಳಿ. ಅದಕ್ಕೂ ಮೊದಲು ಮುಖವನ್ನು ಚೆನ್ನಾಗಿ ತೊಳೆಯಿರಿ.

ಇದನ್ನೂ ಓದಿ : Dates Fruit : ಖರ್ಜೂರ ತಿನ್ನುವಾಗ ನೀವು ಈ ತಪ್ಪುಗಳನ್ನು ಮಾಡ್ಲೇಬೇಡಿ

ಇದನ್ನೂ ಓದಿ : Peas Paratha: ಚಳಿಗಾಲದ ಬೆಳಗ್ಗಿನ ತಿಂಡಿಗೆ ಮಾಡಿ ಬಿಸಿ ಬಿಸಿ ಬಟಾಣಿ ಪರಾಠ

(Oily Skin use rice water daily oily skin problem will go away in a week)

Comments are closed.