Dry Dates Benefits : ಒರಟಾಗಿದ್ದರೂ ಹಲವಾರು ಪ್ರಯೋಜನಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ ‘ಉತ್ತುತ್ತಿ’

ಇಂದಿನ ಕಾಲದಲ್ಲಿ ಜನರು ತುಂಬಾ ಆರೋಗ್ಯದ (Health) ಕಡೆಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಫಿಟ್ (Fit) ಆಗಿರಲು ಹೊಸ ಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಒಣ ಹಣ್ಣುಗಳ (Dry Fruits) ಸೇವನೆಯು ಇಂತಹ ವಿಧಾನಗಳಲ್ಲಿ ಒಂದಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ, ಒಣ ಹಣ್ಣುಗಳನ್ನು ತಿನ್ನುವುದು ಆರೋಗ್ಯ ಪ್ರಜ್ಞೆಯ ಜನರು ಆಯ್ದುಕೊಳ್ಳುವ ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಡ್ರೈ ಫ್ರುಟ್ಸ್‌ ಎಂದರೆ ನಮಗೆ ತಕ್ಷಣಕ್ಕೆ ನೆನಪಾಗುವುದು ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ, ಖರ್ಜೂರಗಳು. ಆದರೆ ಒಣ ಹಣ್ಣುಗಳ ಸಾಲಿಗೆ ಸೇರುವ ಮತ್ತೊಂದು ಹಣ್ಣು ಉತ್ತುತ್ತಿ (Dry Dates Benefits). ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ಈಗ ನಾವು ಹೇಳಲು ಹೊರಟಿರುವುದು ಉತ್ತುತ್ತಿಯ ಬಗ್ಗೆ. ಡ್ರೈ ಡೇಟ್ಸ್‌ (Dry Dates Benefits) ಎಂದು ಕರೆಯುವ ಉತ್ತುತ್ತಿಯನ್ನು ಜನರು ಬಹಳ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ಈ ಒಣ ಹಣ್ಣು ಪೋಷಕಾಂಶಗಳ ಖಜಾನೆಯಾಗಿದೆ. ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಕ್ಯಾನ್ಸರ್, ತೂಕ ನಷ್ಟದಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಇದು ನಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಉತ್ತುತ್ತಿ ತಿನ್ನುವುದರಿಂದ ಆಗುವ ಪ್ರಯೋಜನಗಳು:

ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ:
ನೀವು ಹೊಟ್ಟೆಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ, ಉತ್ತುತ್ತಿಯನ್ನು ಸೇವಿಸುವುದು ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಅತಿಸಾರ ನಿವಾರಕ ಗುಣವಿದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ:
ಉತ್ತುತ್ತಿಗಳನ್ನು ಸಕ್ಕರೆಯ ಬದಲಿಯಾಗಿ ಬಳಸಬಹುದು. ಉತ್ತುತ್ತಿ ಮಧುಮೇಹ ಸಮಸ್ಯೆಗೂ ಉತ್ತಮವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಇದನ್ನೂ ಓದಿ : Winter Drink : ತಲೆನೋವು ಓಡಿಸುವ ಸೂಪರ್‌ ಡ್ರಿಂಕ್‌; ಇದನ್ನು ಕುಡಿಯದೇ ನಿಮ್ಮ ದಿನ ಪ್ರಾರಂಭಿಸಲೇ ಬೇಡಿ

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:
ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ, ಉತ್ತುತ್ತಿಯನ್ನು ಬಳಸಲು ಪ್ರಾರಂಭಿಸಿ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಮೂಲವ್ಯಾದಿಗೆ ಹೋಗಲಾಡಿಸುತ್ತದೆ:
ಉತ್ತುತ್ತಿಯು ಮೂಲವ್ಯಾದಿ ಸಮಸ್ಯೆಗೂ ಉತ್ತಮವಾಗಿದೆ. ಪ್ರತಿದಿನ ನೆನೆಸಿದ ಉತ್ತುತ್ತಿಯನ್ನು ತಿನ್ನುವುದರಿಂದ ಮೂಲವ್ಯಾದಿ ಸಮಸ್ಯೆ ದೂರವಾಗುತ್ತದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ:
ಉತ್ತುತ್ತಿಯು ದೇಹದಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ಪಾದಿಸುತ್ತದೆ. ಇದು ರೋಗದ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ಪ್ರತಿನಿತ್ಯ ಉತ್ತುತ್ತಿಯನ್ನು ತಿಂದರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಇದರಿಂದ ಉತ್ತುತ್ತಿ ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಗಮನಿಸಿ : ಉತ್ತುತ್ತಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮಾರನೇ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೇವಿಸಿ.

ಇದನ್ನೂ ಓದಿ : Oily Skin : ನಿಮ್ಮದು ಎಣ್ಣೆಯುಕ್ತ ತ್ವಚೆನಾ; ಹಾಗಾದರೆ ಇದನ್ನು ಮಾಡಿ ನೋಡಿ, ಒಂದೇ ವಾರದಲ್ಲಿ ಸಮಸ್ಯೆ ದೂರವಾಗುವುದು

(Dry Dates Benefits eat this dry fruit in the winter every day)

Comments are closed.