Summer Skincare : ಬೆವರಿನ ದುರ್ಗಂಧದಿಂದ ಅವಮಾನ ಎದುರಿಸುತ್ತಿದ್ದೀರಾ? ಅದರಿಂದ ಪಾರಾಗಲು ಹೀಗೆ ಮಾಡಿ

ಬೆವರು (Sweating) ದೇಹದಲ್ಲಿಯ ಕಲ್ಮಶಗಳನ್ನು ಹೊರ ಹಾಕಿ, ದೇಹವನ್ನು ತಂಪುಗೊಳಿಸುವ ಒಂದು ಮಾರ್ಗ. ಆದರೆ ಆ ಬೆವರಿನಿಂದ ಬರುವ ದುರ್ಗಂಧ ಮಾತ್ರ ಸಹಿಸಲಸಾಧ್ಯ. ಬೆವರು ಮತ್ತು ಅದರಿಂದ ಬರುವ ದುರ್ಗಂಧ (Summer Skincare) ದೇಹದಲ್ಲಿಯ ಯಾವುದೇ ಭಾಗದಲ್ಲಾದರೂ ಕಾಣಿಸಿಕೊಳ್ಳಬಹುದು. ಇದಕ್ಕೆ ವಯಸ್ಸಿನ ಯಾವುದೇ ಇತಿಮಿತಿಯಿಲ್ಲ. ಇದಕ್ಕೆಂದೇ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ವಿವಿಧ ಬಗೆಯ ಡಿಯೋಡ್ರಂಟ್‌ಗಳು ಬೇರೆ ಬೇರೆ ಪರಿಮಳದಲ್ಲಿ ಸಿಗುತ್ತವೆ. ಆದರೆ ಅದರಲ್ಲಿಯ ರಾಸಾಯನಿಕಗಳು ಜನರು ನೈಸರ್ಗಿಕ ಮಾರ್ಗಗಳಿಗೆ ಬದಲಾಗುವಂತೆ ಮಾಡಿದೆ. ನೀವು ಅವರಂತೆಯೇ ದೇಹದ ದುರ್ಗಂಧದಿಂದ ಚಿಂತತರಾಗಿದ್ದು, ರಾಸಾಯನಿಕ ವಸ್ತುಗಳಿಲ್ಲದ ನೈಸರ್ಗಿಕ ದಾರಿಗಳನ್ನು ಹುಡುಕುತ್ತಿದ್ದರೆ ಇದನ್ನು ಓದಿ.

  • ಆ್ಯಪಲ್‌ ಸೀಡರ್‌ ವಿನೇಗಾರ್‌
    ಇದರ ಆಂಟಿ ಮೈಕ್ರೋಬೈಲ್‌ ಗುಣವು ಬ್ಯಾಕ್ಟೀರಿಯಾದಿಂದ ಉಂಟಾಗುವ ದೇಹದ ದುರ್ಗಂಧ ತೆಗೆಯಲು ಸಹಾಯಮಾಡುತ್ತದೆ. ಒಂದು ಕಾಟನ್‌ (ಹತ್ತಿಯ) ಉಂಡೆ ತೆಗದುಕೊಂಡು ಆ್ಯಪಲ್‌ ಸೀಡರ್‌ವಿನೇಗಾರಲ್ಲಿ ಅದ್ದಿ ಡೈರೆಕ್ಟ್ ಆಗಿಯೇ ಅಂಡರ್‌ಆರ್ಮ್‌ ಜಾಗಕ್ಕೆ ಹಚ್ಚಿ. ಇದನ್ನು ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ ಮತ್ತು ರಾತ್ರಿ ಹಚ್ಚುವುದರಿಂದ ನೀವು ಬಯಸಿದ ಫಲಿತಾಂಶ ಬಹಳ ಬೇಗನೆ ದೊರಕುತ್ತದೆ.
  • ಲ್ಯಾವೆಂಡರ್‌ ಎಸೆನ್ಶಿಯಲ್‌ ಆಯಿಲ್‌
    ಲ್ಯಾವೆಂಡರ್‌ ಎಸೆನ್ಶಿಯಲ್‌ ಆಯಿಲ್‌ನಿಮ್ಮ ದೇಹದ ದುರ್ಗಂಧವನ್ನು ಸುಲಭಾಗಿ ತಡೆದು, ಆಹ್ಲಾದಕರ ಮತ್ತು ಪರಿಮಳದ ಬೀರುವುದಕ್ಕೆ ಹೆಸರುವಾಸಿಯಾಗಿದೆ. ಇದರಲ್ಲಿಯ ಆಂಟಿಬ್ಯಾಕ್ಟೀರಿಯಲ್‌ ಗುಣವು ದೇಹದಲ್ಲಿ ಅತಿಯಾಗಿ ಬೆವರು ಉತ್ಪತ್ತಿಯಾಗಿವ ಜಾಗವನ್ನುಬ್ಯಾಕ್ಟಿರಿಯಾದ ದೂರವಿರಿಸುತ್ತದೆ. ಒಂದು ಗ್ಲಾಸ್‌ ನೀರಿಗೆ ಲ್ಯಾವೆಂಡರ್‌ ಹನಿಗಳನ್ನು ಹಾಕಿ. ಅದನ್ನು ಒಂದು ಸ್ಪ್ರೇ ಬಾಟಲ್‌ನಲ್ಲಿ ಹಾಕಿಟ್ಟುಕೊಳ್ಳಿ. ಅದನ್ನು ನಿಮ್ಮ ಅಂಡರ ಆರ್ಮ್‌ಗಳಿಗೆ ಹಚ್ಚಿಕೊಳ್ಳಿ. ಮತ್ತು ಇತರೆ ಭಾಗಗಳಿಗೂ ಹಚ್ಚಿ. ಇದನ್ನು ದಿನಕ್ಕೆ ಎರಡುಬಾರಿ ಹಚ್ಚಿ, ದೇಹದ ದುರ್ಗಂಧವನ್ನು ಸಂಪೂರ್ಣವಾಗಿ ತೊಡೆದುಹಾಕವುದು.

ಇದನ್ನೂ ಓದಿ :skin in summer : ಬೇಸಿಗೆ ಕಾಲದಲ್ಲಿ ಹೀಗಿರಲಿ ನಿಮ್ಮ ತ್ವಚೆಯ ಆರೈಕೆ

  • ಬೇಕಿಂಗ್‌ ಸೋಡಾ
    ಬೇಕಿಂಗ್‌ ಸೋಡಾವನ್ನು ಅಂಡರ್‌ಆರ್ಮಗೆ ಹಚ್ಚುವುದರಿಂದ ಆ ಜಾಗವು ಒಣಗಿ, ಅತಿಯಾಗಿ ಬೆವರುವುದನ್ನು ತಡೆಯುತ್ತದೆ. ಬೇಕಿಂಗ್‌ ಸೋಡಾ ಹೆಚ್ಚಿನ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಬೆವರಿನ ಉತ್ಪತ್ತಿ ತಡೆಯುತ್ತದೆ. ಇದರಲ್ಲಿಯ ಆಂಟಿಬ್ಯಾಕ್ಟೀರಿಯಲ್‌ ಗುಣವು ಬ್ಯಾಕ್ಟೀರಿಯಾದಿಂದ ಉಂಟಾಗುವ ಕೆಟ್ಟ ವಾಸನೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಒಂದು ಚಮಚ ಬೇಕಿಂಗ್‌ ಸೋಡಾವನ್ನು ಒಂದು ಚಮಚ ಲಿಂಬ ರಸದೊಂದಿಗೆ ಬೆರೆಸಿ. ಆ ಪೇಸ್ಟ್‌ ಅನ್ನು ಅಂಡರ್‌ಆರ್ಮ್‌ಗೆ ಹಚ್ಚಿಕೊಳ್ಳಿ. ಎರಡರಿಂದ ಮೂರು ನಿಮಿಷಗಳ ವರೆಗೆ ಹಾಗೆ ಇಡಿ. ನಂತರ ಅದರ ಮ್ಯಾಜಿಕ್‌ ನೋಡಿ.
  • ಮೆಂತೆಯ ಟೀ
    ಆಂಟಿಒಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಮೆಂತೆ ಬೀಜಗಳು ದೇಹದಲ್ಲಿಯ ಕಲ್ಮಶಗಳನ್ನು ತೆಗೆಯಲು ಸಹಾಯಮಾಡುತ್ತದೆ. ಇದು ಆಂಟಿಬ್ಯಾಕ್ಟೀರಿಯಲ್‌ ಗುಣ ಹೊಂದಿದೆ ಮತ್ತು ಬ್ಯಾಕ್ಟೀರಿಯಾದ ಸೋಂಕು ಹರಡದಂತೆ ತಡೆಗಟ್ಟುತ್ತದೆ. ಮೆಂತೆಯ ಟೀ ನೈಸರ್ಗಿಕವಾಗಿ ದೇಹದ ದುರ್ಗಂಧವನ್ನು ಬೇರು ಸಹಿತ ತಡೆದು ಹಾಕಬಲ್ಲದು ಎಂದು ನಂಬಲಾಗಿದೆ. ಸ್ವಲ್ಪ ಮೆಂತೆಯ ಕಾಳುಗಳನ್ನು ತೆಗದುಕೊಂಡು ನೀರಿನಲ್ಲಿ ಕುದಿಸಿ. ನೀರು ಅರ್ಧ ಆಗುವವರೆಗೆ ಕುದಿಸಿ. ಇದನ್ನು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಇದು ದೇಹ ಶುದ್ದೀಕರಿಸಲು ಸಹಾಯ ಮಾಡುತ್ತದೆ.
  • ರೋಸ್‌ ವಾಟರ್‌
    ರೋಸ್‌ವಾಟರ್‌ ತೆರೆದಿರುವ ಚರ್ಮದ ರಂದ್ರಗಳನ್ನು ಮುಚ್ಚಲು ಸಹಾಯಮಾಡುತ್ತದೆ. ಇದರಿಂದ ಬೆವರುವುದು ಕಡಿಮೆಯಾಗಿ, ಒಂದು ಸುಗಂಧವುನ್ನು ಹೊರಸೂಸುವುದು. ರೋಸ್‌ ವಾಟರ್‌ ಮತ್ತು ಆ್ಯಪಲ್‌ ಸೀಡ್‌ ವಿನೇಗಾರ್‌ ಇವೆರಡನ್ನೂ ಮಿಕ್ಸ್‌ ಮಾಡಿ ಈ ದ್ರಾವಣ ತಯಾರಿಸಿಕೊಳ್ಳಿ. ಇದನ್ನು ಸ್ಪ್ರೇ ಬಾಟಲ್‌ನಲ್ಲಿ ಶೇಖರಿಸಿಟ್ಟುಕೊಳ್ಳಿ. ನಿಮ್ಮ ಅಂಡರ್‌ಆರ್ಮ್‌ ಮತ್ತು ಉಳಿದ ಭಾಗಗಳಿಗೆ ಸ್ಪ್ರೇ ಮಾಡಿಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಸ್ನಾನದ ನಂತರ ಹಚ್ಚಿಕೊಳ್ಳಿ.

ಇದನ್ನೂ ಓದಿ : beat the heat : ಬೇಸಿಗೆಯಿಂದ ಪಾರಾಗಲು ಟ್ರೈಮಾಡಿ ನೋಡಿ ಈ ಆರ್ಯುವೇದಿಕ್​​ ಜ್ಯೂಸ್​​..!

(Summer Skincare 5 home remedies to get rid of body odor)

Comments are closed.