Sunglasses : ಸನ್‌ಗ್ಲಾಸ್‌ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಇಲ್ಲಿ ಹೇಳಿದವುಗಳನ್ನು ಒಮ್ಮೆ ಗಮನಿಸಿ!!

ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಮತ್ತು ನೀವು ಧರಿಸಿದ ಉಡುಪಿನೊಂದಿಗೆ ಮ್ಯಾಚ್‌ ಆಗುವಂತೆ ವಿನ್ಯಾಸಗೊಳಿಸಲಾದ ವ್ಯಾಪಕ ಶ್ರೇಣಿಯ ಸನ್‌ಗ್ಲಾಸ್‌ಗಳು (Sunglasses) ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಎಂದಿಗೂ ನೀವು ಸಾಕಷ್ಟು ಜೋಡಿ ಸನ್‌ಗ್ಲಾಸ್‌ಗಳನ್ನು ಹೊಂದಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವ ಹೆಚ್ಚಿನ ಶೈಲಿಗಳು ಹಿಂದಿನ ಕಾಲದ ಕೈಪಿಡಿಯಿಂದ ಪುನರುಜ್ಜೀವನಗೊಂಡಿವೆ ಅಥವಾ ಮರುಶೋಧಿಸಲ್ಪಟ್ಟಿದ್ದೇ ಆಗಿದೆ . ಇದನ್ನು ಫ್ಯಾಶನ್‌ ಪ್ರಿಯರು ಸಹ ಇಷ್ಟಪಡುತ್ತಾರೆ. 80 ರ ದಶಕದ ನೀವು ನೋಡಿದ ಅಥವಾ ನಿಮ್ಮ ಮೆಚ್ಚಿನ ಫ್ಯಾಶನ್‌ ಮ್ಯಾಗಜಿನ್‌ಗಳಲ್ಲಿನ ಮುಖಪುಟದಲ್ಲಿಯ ಏವಿಯೇಟರ್‌ ಫ್ರೇಮ್‌ಗಳು ಅಥವಾ 1950 ರ ದಶಕದ ನಂತರದ ಕ್ಯಾಟ್‌–ಐ ಶೇಡ್‌ಗಳನ್ನು ಹುಡುಕುತ್ತೀರಲ್ಲವೇ?

ಎಲ್ಲರೂ ನಿಮ್ಮ ಸನ್‌ಗ್ಲಾಸ್‌ ಇಷ್ಟಪಡುವಂತಹದ್ದನ್ನೇ ನೀವು ಆಯ್ದುಕೊಳ್ಳಲು ಬಯಸುತ್ತೀರಿ. ಅದಕ್ಕಾಗಿಯೇ ನಾವು ಇಲ್ಲಿ ಅಂತಹ ಕೆಲವು ವಿಶೇಷ ಫ್ರೇಮ್‌ ಗಳ ಸನ್‌ಗ್ಲಾಸ್‌ ಬಗ್ಗೆ ಹೇಳಿದ್ದೇವೆ. ಖರೀದಿಸಬೇಂಕೆಂದುಕೊಂಡವರು ಇದನ್ನೊಮ್ಮೆ ಗಮನಿಸಿ.

  • M&S ರಿಮ್‌ಲೆಸ್‌ ಸನ್‌ಗ್ಲಾಸ್‌:
    ಈ ಋತುವಿನಲ್ಲಿ ಮನಮೋಹಕವಾಗಿ ಕಾಣಿಸುತ್ತವೆ M&S ರಿಮ್‌ಲೆಸ್‌ ಸನ್‌ಗ್ಲಾಸ್‌ಗಳು. ತೆಳುವಾದ ಚೌಕಟ್ಟಿನ ಏವಿಯೇಟರ್‌ಗಳು ಯಾವುದೇ ಮುಖದ ಆಕಾರಕ್ಕೆ ಸರಿಹೊಂದುತ್ತವೆ. ಈ ಸನ್‌ಗ್ಲಾಸ್‌ಗಳು ಚಿಕ್‌ ಟೋನ್‌ನಲ್ಲಿ ಬರುತ್ತವೆ. ತೆಳುವಾದ ಮೆಟಲ್‌ ಆರ್ಮ್‌ ಮತ್ತು ಟಿಂಟೆಡ್‌ ಲೆನ್ಸ್‌ ಹೊಂದಿದೆ.
  • ಲೆವಿಸ್‌ 204331 ಫುಲ್‌ ರಿಮ್‌ ಓವರ್‌ಸೈಜ್ಡ್‌ ಸನ್‌ಗ್ಲಾಸ್‌ಗಳು:
    ಕಂದು ಬಣ್ಣದ ಆಮೆ ಮಾದರಿಯ ದಪ್ಪ ಫ್ರೇಮ್‌ನ ಲೆವಿಸ್‌ ಸನ್‌ಗ್ಲಾಸ್‌ಗಳು ನೊಡಲು ಬೆಸ್ಟ್‌ ಆಗಿ ಕಾಣಿಸುತ್ತವೆ. ಅದರ ಗಾಢವಾದ ಟೋನ್‌ ಯಾವುದೇ ಬಟ್ಟೆಯೊಂದಿಗೆ ಧರಿಸಿದರೆ ಉತ್ತಮವಾಗಿ ಕಾಣುತ್ತದೆ.
  • ಫೋಸಿಲ್‌ 202410 ಫುಲ್‌ ರಿಮ್‌ ಕ್ಯಾಟ್‌ ಐ ಸನ್‌ಗ್ಲಾಸ್‌ಗಳು :
    ಕ್ಯಾಟ್‌ ಐ ಸನ್‌ಗ್ಲಾಸ್‌ಗಳು 1950 ದಶಕದಲ್ಲಿ ಹೊಸದಾಗಿ ಜನಪ್ರಿಯವಾಗಿತ್ತು ಮತ್ತು ಆಧುನಿಕವಾಗಿ ಸೌಂದರ್ಯದೊಂದಿಗೆ ಖ್ಯಾತಿಗೆ ಏರಿತ್ತು. ಇವುಗಳು ಫುಲ್‌ ರಿಮ್‌ ಹೊಂದಿದ್ದು, ಆರ್ಮ್‌ಗಳು ಸ್ವಲ್ಪ ದಪ್ಪವಾಗಿವೆ. ಫ್ಯಾಶನ್‌ ಪ್ರಿಯರು ಇಷ್ಟ ಪಡುವಂತಹ ಸನ್‌ಗ್ಲಾಸ್‌ ಆಗಿದೆ.
  • ಎಲಿಗೇಟರ್‌ ಬ್ಲಾಕ್‌ ಲೆನ್ಸ್‌ ಮತ್ತು ಬ್ಲಾಕ್‌ UV ಪ್ರಾಟೆಕ್ಟೆಡ್‌ ಆಯಾತಾಕಾರದ ಸನ್‌ಗ್ಲಾಸ್‌ಗಳು :
    ಆಯತಾಕಾರದ ದಪ್ಪ ಶೇಡ್‌ ಇರುವ ಎಲಿಗೇಟರ್‌ ಬ್ಲಾಕ್‌ ಲೆನ್ಸ್‌ ಮತ್ತು ಬ್ಲಾಕ್‌ UV ಪ್ರಾಟೆಕ್ಟೆಡ್‌ ಸನ್‌ಗ್ಲಾಸ್‌ಗಳು 50ರ ದಶಕದಲ್ಲಿ ಬಹಳ ಜನಪ್ರಿಯವಾಗಿದ್ದವು. ಇವುಗಳು ಕ್ಯಾಟ್‌–ಐ ಸನ್‌ಗ್ಲಾಸ್‌ಗಳಷ್ಟು ಜನಪ್ರಿಯವಾಗಿಲ್ಲವಾದರೂ ತನ್ನದೇ ಆದ ಛಾಪು ಮೂಡಿಸಿದೆ.

ಇದನ್ನೂ ಓದಿ : Best Oil For Face: ಮುಖಕ್ಕೆ ಈ ಫೇಸ್ ಆಯಿಲ್ ಬಳಸಿ ಚಮತ್ಕಾರ ನೋಡಿ

ಇದನ್ನೂ ಓದಿ : Best Summer Dresses : ಬೇಸಿಗೆ ಕಾಲದಲ್ಲಿ ಹೀಗಿರಲಿ ಮಹಿಳೆಯರ ಉಡುಪಿನ ಆಯ್ಕೆ

(Sunglasses look at these best sunglasses to buy)

Comments are closed.