Health Benefits of White Onion : ಬಿಳಿ ಈರುಳ್ಳಿಯ ಆರೋಗ್ಯ ಪ್ರಯೋಜನಗಳು ಏನು ಎಂಬುದು ನಿಮಗೆ ಗೊತ್ತಾ?

ಕಾಲಕ್ಕೆ ಅನುಗುಣವಾಗಿ ನಾವು ಆಹಾರ ಮತ್ತು ಆರೋಗ್ಯದ (Food And Health) ಕಾಳಜಿವಹಿಸತ್ತಲೇ ಇರುತ್ತೇವೆ. ಡಯಟ್‌, ವ್ಯಾಯಾಮ ಎಂದೆಲ್ಲಾ ಯೋಚಿಸುತ್ತಲೇ ಇರುತ್ತೇವೆ. ಡಯಟ್‌ ಮಾಡುವವರಿಗೆ ಕೊಡುವ ಸಲಹೆ ಏನೆಂದರೆ ಅವರು ಅನುಸರಿಸುವ ಕ್ರಮ ಬಹಳ ದಿನಗಳವರೆಗೆ ಪ್ರಯೋಜನಗಳನ್ನು ನೀಡಬೇಕು ಎಂಬುದು. ಅಂತಹವುಗಳಲ್ಲಿ ಬಿಳಿ ಈರುಳ್ಳಿ (White Onion)ಬಹಳಷ್ಟು ಆರೋಗ್ಯದ ಪ್ರಯೋಜನಗಳನ್ನು (Health Benefits of White Onion) ನೀಡುತ್ತದೆ. ಜನಪ್ರಿಯ ಈರುಳ್ಳಿಯ ಬಗೆಗಳಲ್ಲಿ ಬಿಳಿ ಬಣ್ಣದ ಈರುಳ್ಳಿಯು ಒಂದು. ಅದರ ರುಚಿಯೂ ಸಹ ಸ್ವಲ್ಪ ಬೇರೇಯೇ ಇದೆ. ಸಲಾಡ್ ಸ್ಯಾಂಡ್‌ವಿಚ್‌ ಮುಂತಾದವುಗಳಲ್ಲಿ ಇದರ ಬಳಕೆ ಹೆಚ್ಚು.

ಪಾಕಶಾಲೆಯಲ್ಲಿ ಬಿಳಿ ಈರುಳ್ಳಿಗೆ ಅದರದೇ ಆದ ವಿಶೇಷ ಸ್ಥಾನವಿದೆ. ದೇಹದ ಉಷ್ಣತೆಯನ್ನು ಶಮನಗೊಳಿಸುವ ಗುಣವಿದೆ ಮತ್ತು ಆರೋಗ್ಯದ ಹಲವಾರು ಪ್ರಯೋಜನಗಳೂ ಇದರಲ್ಲಿದೆ. ಬಿಳಿ ಈರುಳ್ಳಿಯ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆ ಇಲ್ಲಿದೆ ಓದಿ.

ಫೈಬರ್‌ನ ಅತ್ಯುತ್ತಮ ಮೂಲ :
ಬಿಳಿ ಈರುಳ್ಳಿಯು ಸುಲಭವಾಗಿ ಕರಗುವ ಫೈಬರ್‌ ಆದ ಫ್ರುಕ್ಟಾನ್ಸ್‌ ಗಳಿಂದ ಸಮೃದ್ಧವಾಗಿದೆ. ಈ ಫೈಬರ್‌ಗಳು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಕರುಳಿಗೆ ಉತ್ತಮವಾಗಿರುವ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸುತ್ತದೆ. ಇದರಿಂದ ಕರುಳಿನ ಚಲನೆಯು ಕ್ರಮಬದ್ಧವಾಗಿ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ.

ದೇಹ ತಂಪು ನೀಡುತ್ತದೆ :
ಬಿಳಿ ಈರುಳ್ಳಿಯನ್ನು ಕೂಲಿಂಗ್‌ ಏಜಂಟ್‌ ಎಂದು ಪರಿಗಣಿಸಲಾಗಿದೆ. ಇದು ನೈಸರ್ಗಿಕವಾಗಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅದಲ್ಲದೇ ಬೇಸಿಗೆಯಲ್ಲಾಗುವ ಸನ್‌ಬರ್ನ್‌ ಅನ್ನೂ ತಡೆಯುತ್ತದೆ.

ಹೃದಯದ ಆರೋಗ್ಯ ಕಾಪಾಡಲು :
ಆಂಟಿಇನ್‌ಫ್ಲಾಮೆಟರಿ ಗುಣ ಹೊಂದಿರುವ ಬಿಳಿ ಈರುಳ್ಳಿಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಪಧಮಿನಿಗಳಲ್ಲಿ ರಚನೆಯಾಗುವ ಫ್ಲೆಕ್ಸ್‌ಗಳನ್ನು ತಡೆಯುತ್ತದೆ ಮತ್ತು ಇದು ಶ್ರವಣ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಆಂಟಿಒಕ್ಸಿಡೆಂಟ್‌ನ ಖಜಾನೆ:
ಆಂಟಿಒಕ್ಸಿಡೆಂಟ್‌ನ ಖಜಾನೆಯಾಗಿರುವ ಬಿಳಿ ಈರುಳ್ಳಿಯು ದೇಹ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಸರಿಯಾದ ದೇಹ ಶುದ್ಧೀಕರಣವು ಸಂಪೂರ್ಣ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಇದಲ್ಲದೇ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

ಆಂಟಿಬ್ಯಾಕ್ಟೀರಿಯಲ್‌ ಗುಣ ಹೊಂದಿದೆ:
ಬಿಳಿ ಈರುಳ್ಳಿಯಲ್ಲಿರುವ ಆಂಟಿಬ್ಯಾಕ್ಟೀರಿಯಲ್‌ ಗುಣವು ಅದನ್ನು ಬೇಸಿಗೆಯ ಡಯಟ್‌ನಲ್ಲಿ ಸೇರಿಸಿಕೊಳ್ಳಲು ಉತ್ತಮವಾಗಿದೆ. ಇದು ಬೇಸಿಗೆಯ ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ :
ಬಿಳಿ ಈರುಳ್ಳಿಯು ಆಂಟಿಒಕ್ಸಿಡೆಂಟ್‌, ಆಂಟಿ–ಇನ್‌ಫ್ಲಾಮೆಟರಿ, ಆಂಟಿಬ್ಯಾಕ್ಟೀರಿಯಲ್‌ ಮತ್ತು ಆಂಟಿವೈರಲ್‌ ಗುಣಗಳ ಆಗರವಾಗಿದೆ. ಈ ಅಂಶಗಳು ನಮ್ಮ ಕರುಳನ್ನು ಸ್ವಚ್ಛವಾಗಿಡಲು ಉತ್ತಮ ಘಟಕವಾಗಿದೆ. ಇದು ನಮ್ಮ ರೋಗ ನಿರೋಧಕ ಶಕ್ರಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Black Pepper: ಕಾಳು ಮೆಣಸಿನ ಈ ಭಾರಿ ಪ್ರಯೋಜನ ತಿಳಿದರೆ ನೀವೂ ಡಯಟ್‌ನಲ್ಲಿ ಇದನ್ನು ಖಂಡಿತ ಸೇರಿಸಿಕೊಳ್ತೀರಾ!

ಇದನ್ನೂ ಓದಿ : Potato Health Benefits : ಆಲೂಗಡ್ಡೆ ಎಂದು ದೂರುವ ಮುನ್ನ ಇದನ್ನೊಮ್ಮೆ ಓದಿ

(Health Benefits of White Onion and know its special properties)

Comments are closed.