ಮಡಿಕೇರಿ : ತಲಕಾವೇರಿಯಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನ ನೀಡಿದ್ದಾರೆ.ಕನ್ಯಾಲಗ್ನದಲ್ಲಿಂದು ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ ತೀರ್ಥೋದ್ಭವವಾಗಿದೆ. ಬ್ರಹ್ಮಕುಂಡಿಕೆಯ ಬಳಿ ಗೋಪಾಲ್ ಕೃಷ್ಣ ಆಚಾರ್ ನೃತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನೆರವೇರಿತು. ಬೆಳಗ್ಗೆ 8 ಗಂಟೆಯಿಂದ ತೀರ್ಥ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕಾವೇರಿ ತೀರ್ಥೋದ್ಬವದ ಹಿನ್ನೆಲೆಯಲ್ಲಿ ಬ್ರಹ್ಮ ಕುಂಡಿಕೆ, ಅಗಸ್ತೇಶ್ವರ ದೇವಾಲಯ ಮತ್ತು ಭಾಗಮಂಡಲ ದೇವಾಲಯಗಳಿಗೆ ವಿದ್ಯುತ್ ದೀಪ ಮತ್ತು ಪುಷ್ಪಾಲಂಕಾರ ಮಾಡಲಾಗಿದೆ.

ಕೋವಿಡ್ ಮಿತಿ ಮೀರುತ್ತಿರುವುದರಿಂದ ತೀರ್ಥೋಧ್ಭವ ಸಂದರ್ಭದಲ್ಲಿ ದೇವಾಲಯ ಅರ್ಚಕರು, ಸಿಬ್ಬಂದಿ ಮತ್ತು ಉಸ್ತುವಾರಿ ಸಚಿವರು ಹಾಗೂ ಕೆಲವೇ ಅಧಿಕಾರಿಗಳಿಗೆ ಮಾತ್ರವೇ ಭಾಗಿಯಾಗಲು ಅವಕಾಶ ಕಲ್ಪಿಸಲಾಗಿದ್ದ, ತೀರ್ಥೋಧ್ಭವದ ಬಳಿಕ ಭಕ್ತರಿಗೆ ತೀರ್ಥ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ತೀರ್ಥ ಪಡೆದುಕೊಳ್ಳಲು ನೂಕುನುಗ್ಗಲು ಆಗದಂತೆ ಕೊಳದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ತೀರ್ಥ ವಿತರಣೆಗೆ ಐದು ಕೌಂಟರ್ ತೆರಯಾಗಿದ್ದು, ಪ್ರತೀ ಕೌಂಟರ್ ಬಳಿ ತಲಾ ಎರಡು ಮೂರು ಕೊಳಾಯಿಗಳನ್ನು ಇಟ್ಟು ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರಿಗೆ ಕೋವಿಡ್ ಟೆಸ್ಟ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ.
ತಲಕಾವೇರಿಯಲ್ಲಿ ತೀರ್ಥೋದ್ಭವ – ತೀರ್ಥ ಸ್ವರೂಪಿಣಿಯಾಗಿ ದರ್ಶನ ನೀಡಿದ ಕಾವೇರಿ
ಮಡಿಕೇರಿ : ತಲಕಾವೇರಿಯಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನ ನೀಡಿದ್ದಾರೆ.
ಕನ್ಯಾಲಗ್ನದಲ್ಲಿಂದು ಬೆಳಗ್ಗೆ 7 ಗಂಟೆ 3 ನಿಮಿಷಕ್ಕೆ ತೀರ್ಥೋದ್ಭವವಾಗಿದೆ. ಬ್ರಹ್ಮಕುಂಡಿಕೆಯ ಬಳಿ ಗೋಪಾಲ್ ಕೃಷ್ಣ ಆಚಾರ್ ನೃತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನೆರವೇರಿತು. ಬೆಳಗ್ಗೆ 8 ಗಂಟೆಯಿಂದ ತೀರ್ಥ ಪಡೆಯಲು ಅವಕಾಶ ಕಲ್ಪಿಸಲಾಗಿದೆ.