Makar Sankranti 2023 : ಮಕರ ಸಂಕ್ರಾಂತಿ 2023; ದಿನ ಮತ್ತು ಆಚರಣೆ

ಸಾಮಾನ್ಯವಾಗಿ ಪ್ರತಿ ವರ್ಷ ಮಕರ ಸಂಕ್ರಾಂತಿಯನ್ನು (Makar Sankranti 2023) ಜನವರಿ 14 ರಂದು ಆಚರಿಸಲಾಗುತ್ತದೆ. ಆದರೆ ಕೆಲವು ವರ್ಷ ಹಾಗಾಗುವುದಿಲ್ಲ. ಮಕರ ಸಂಕ್ರಾತಿಯ ತಿಥಿಯಲ್ಲಿನ ಬದಲಾವಣೆಯಿಂದ ಸಂಕ್ರಾಂತಿಯನ್ನು ಜನವರಿ 15 ಕ್ಕೆ ಆಚರಿಸಲಾಗುತ್ತದೆ. ಅದೇ ರೀತಿ ಈ ವರ್ಷ ಸಂಕ್ರಾಂತಿ ಆಚರಣೆಯ ದಿನದ ಬಗ್ಗೆ ಜನರಲ್ಲಿ ಗೊಂದಲವಿದೆ. ಕೆಲವರು ಜನವರಿ 14 ಕ್ಕೆ ಆಚರಿಸಬೇಕು ಎಂದು ಹೇಳಿದರೆ ಇನ್ನು ಕೆಲವರು ಜನವರಿ 15 ಎಂದು ಹೇಳುತ್ತಿದ್ದಾರೆ. ಆದರೆ ಹಿಂದೂ ಧರ್ಮದ ಪಂಚಾಂಗದ ಪ್ರಕಾರ ಯಾವ ದಿನದಂದು ಮಕರ ಸಂಕ್ರಾಂತಿಯನ್ನು ಆಚರಣೆಯಿರುತ್ತದೆ. ಇದರ ಬಗ್ಗೆ ಇಲ್ಲಿದೆ ಮಾಹಿತಿ.

ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗುತ್ತಾನೆ. ಅಂದರೆ ಧನು ರಾಶಿಯಿಂದ ಮಕರ ರಾಶಿಗೆ ಹೋಗುತ್ತಾನೆ. ಇದನ್ನು ಕತ್ತಲೆಯಿಂದ ಬೆಳಕಿನಡೆಗೆ ಸೂರ್ಯನ ಪಯಣ ಎಂದು ಹೇಳಲಾಗುತ್ತದೆ. ಇಷ್ಟು ದಿನ ರಾತ್ರಿ ದೀರ್ಘವಾಗಿದ್ದು, ಹಗಲಿನ ಸಮಯ ಕಡಿಮೆಯಿತ್ತು. ಮಕರ ಸಂಕ್ರಾಂತಿಯ ನಂತರ ಹಗಲು ದೀರ್ಘವಾಗಿ, ರಾತ್ರಿ ಕಡಿಮೆಯಾಗುತ್ತದೆ.

ಮಕರ ಸಂಕ್ರಾಂತಿ 2023 : ದಿನ ಮತ್ತು ಶುಭ ಸಮಯ :
ಪಂಚಾಗದ ಪ್ರಕಾರ, ಈ ವರ್ಷ ಮಕರ ಸಂಕ್ರಾಂತಿಯು ಜನವರಿ 15 ರಂದು ಆಚರಿಸಲಾಗುತ್ತದೆ. ಏಕೆಂದರೆ ಸೂರ್ಯನು ಜನವರಿ 14 ರ ರಾತ್ರಿ 08 ಗಂಟೆ 43 ನಿಮಿಷಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ ಉದಯ ತಿಥಿಯ ಪ್ರಕಾರ ಮಕರ ಸಂಕ್ರಾಂತಿಯನ್ನು ಮರುದಿನ ಜನವರಿ 15, ರಂದು ಆಚರಿಸಲಾಗುತ್ತಿದೆ. ಮಕರ ಸಂಕ್ರಾಂತಿಯು ಮಂಗಳಕರ ಸಮಯವಾಗಿದೆ ಎಂದು ಪಂಚಾಗ ಹೇಳುತ್ತದೆ. ಪುಷ್ಯ ಮಾಸದಲ್ಲಿ ಯಾವುದೇ ಶುಭಕಾರ್ಯ, ಒಳ್ಳೆಯ ಕೆಲಸದ ಪ್ರಾರಂಭವನ್ನು ಮಾಡುವುದಿಲ್ಲ. ಮಕರ ಸಂಕ್ರಾಂತಿಯ ನಂತರ ಶುಭಕಾರ್ಯಗಳನ್ನು ಮಾಡಬಹುದು ಎಂದು ಪಂಚಾಗ ಹೇಳುತ್ತದೆ.

ಸಂಕ್ರಾಂತಿಯ ಆಚರಣೆ ಹೇಗೆ?
ಸಂಕ್ರಾಂತಿಯ ಆಚರಣೆಯು ವಿವಿಧ ಭಾಗದಲ್ಲಿ ವಿವಿಧ ರೀತಿಯಾಗಿದೆ. ಆದರೆ ಸಂಕ್ರಾಂತಿ ಸಂತೋಷದ ಹಬ್ಬ. ಚಳಿಗಾಲದಲ್ಲಿ ಬರುವ ಹಬ್ಬವಾದ್ದರಿಂದ ಶೇಂಗಾ, ಎಳ್ಳು, ಬೆಲ್ಲದಿಂದ ಸಿಹಿ ತಿನಿಸುಗಳನ್ನು ತಯಾರಿಸುತ್ತಾರೆ. ಎಳ್ಳು–ಬೆಲ್ಲ, ಸಿಹಿ ಅಥವಾ ಖಾರ ಪೊಂಗಲ್‌ ಈ ಹಬ್ಬದ ವಿಶೇಷ. ಮನೆಯ ಮುಂದೆ ಚೆಂದದ ರಂಗೋಲಿ, ಬಣ್ಣ ಬಣ್ಣದ ಗಾಳಿಪಟವನ್ನು ಹಾರಿಸುವುದು ಸಂಕ್ರಾಂತಿಯ ಆಕರ್ಷಣೆಗಳಲ್ಲಿ ಒಂದು.

ಇದನ್ನೂ ಓದಿ : Peanut-Til Barfi: ಸಂಕ್ರಾಂತಿಗೆ ಮನೆಯಲ್ಲಿಯೇ ತಯಾರಿಸಿ ಶೇಂಗಾ–ಎಳ್ಳು ಬರ್ಫಿ

ಇದನ್ನೂ ಓದಿ : Yashtimadhu Benefits : ಶೀತ, ಕೆಮ್ಮಿಗೆ ರಾಮಬಾಣ ಯಷ್ಟಿಮಧು; ಇದರ ಕಷಾಯ ಮಾಡುವುದು ಹೇಗೆ ಗೊತ್ತಾ…

(Makar Sankranti 2023 when will be celebrated, on January 14 or 15)

Comments are closed.