ಕತ್ತಲ ರಾತ್ರಿ ಆ ನಾಡಲ್ಲಿ ನಡೆಯುತ್ತೆ ‘ಬೆತ್ತಲೆ ಹಬ್ಬ’ !

ದೇಶದಿಂದ ದೇಶಕ್ಕೆ ಜನರ ಆಚಾರ ವಿಚಾರ, ಸಂಪ್ರದಾಯ ಬೇರೆಯಾಗಿರುತ್ತೆ. ಭಿನ್ನ,..ವಿಭಿನ್ನ ರೀತಿಯಲ್ಲಿ ಜನರು ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ಅದ್ರಲ್ಲೂ ಕೆಲವೊಂದು ಸಮುದಾಯಗಳ ಆಚರಣೆಗಳೇ ಕೊಂಚ ವಿಚಿತ್ರವೆಂದೆನಿಸುತ್ತೆ. ಇಂತಹ ಆಚರಣೆಗಳ ಸಾಲಿಗೆ ಸೇರಿರೋದೆ ‘ಬೆತ್ತಲೆ ಹಬ್ಬ’.

ಅಲ್ಲಿನ ಜನ ಕತ್ತಲಾಗುತ್ತಿದ್ದಂತೆಯೇ ದೇವಾಲಯಕ್ಕೆ ಬರುತ್ತಾರೆ. ದೇವಾಲಯದ ಬಾಗಿಲು ತೆರೆದು ಸಂಪೂರ್ಣ ದೇವಾಲಯವನ್ನು ಸ್ವಚ್ಚಗೊಳಿಸುತ್ತಾರೆ.

ನಂತರ ತಣ್ಣೀರಿನಲ್ಲಿ ಸ್ನಾನ ಮಾಡಿ, ಪುಂದೇಶಿ ಹಾಗೂ ತಬೀ (ತುಂಡು ಬಟ್ಟೆ) ಸುತ್ತಿಕೊಂಡು ಬೆತ್ತಲೆಯಾಗಿ ದೇಗುಲದ ಮುಖ್ಯ ಆವರಣಕ್ಕೆ ತೆರಳುತ್ತಾರೆ. ನಂತರ ಅಲ್ಲಿರೋ ದೇವರಿಗೆ ಬೆತ್ತಲೆಯಾಗಿಯೇ ಪೂಜೆ ಸಲ್ಲಿಸುತ್ತಾರೆ.

ಅಷ್ಟಕ್ಕೂ ಇಂತಹ ಈ ವಿಚಿತ್ರ ಆಚರಣೆ ನಡೆಯೋದು ಸೂರ್ಯೋದಯದ ನಾಡು ಅಂತಾನೇ ಕರೆಯಿಸಿಕೊಳ್ಳೋ ಜಪಾನ್ ದೇಶದಲ್ಲಿ.

ಜಪಾನಿಯರ ಆಚರಣೆಗಳೇ ವಿಚಿತ್ರ ಹಾಗೂ ವಿಭಿನ್ನ. ಜಪಾನಿಯರು ವರ್ಷಂಪ್ರತಿ ಹತ್ತಾರು ಹಬ್ಬಗಳನ್ನು ಆಚರಣೆ ಮಾಡ್ತಾರೆ. ಆದ್ರೆ ಎಲ್ಲಾ ಹಬ್ಬಗಳಿಗಿಂತಲೂ ಹೆಚ್ಚು ಪ್ರಖ್ಯಾತಿಯಾಗಿರೋದು ಬೆತ್ತಲೆ ಹಬ್ಬ.

ಜಪಾನ್ ದೇಶದ ಹೊನ್ನು ದ್ವೀಪದಲ್ಲಿ ವರ್ಷಂಪ್ರತಿ ಬೆತ್ತಲೆ ಹಬ್ಬ ಅಥವಾ ನೇಕೆಡ್ ಫೆಸ್ಟಿವಲ್ ಅನ್ನು ಆಚರಿಸಲಾಗುತ್ತದೆ. ಜಪಾನಿಯರು ಈ ಹಬ್ಬವನ್ನು ಹಡಕಾ ಮಾಸ್ತೂರಿ ಅಂತಾ ಕರೆಯುತ್ತಾರೆ.

ಜಪಾನಿನ ಹೊನ್ನುದ್ವೀಪದಲ್ಲಿರೋ ಸೈದಾಯೀಜಿ ಕಾನೌನೀನ್ ದೇಗುಲದಲ್ಲಿ ಈ ಆಚರಣೆಯನ್ನು ನಡೆಸಲಾಗುತ್ತದೆ. ಈ ಹಬ್ಬದ ವಿಶೇಷವೆಂದ್ರೆ ಪುರುಷರು ಬೆತ್ತಲೆಯಾಗಿ ಸೈದಾಯೀಜಿ ಕಾನೌನೀನ್ ದೇವರಿಗೆ ಪೂಜೆ ಸಲ್ಲಿಸೋದು.

ಜಪಾನಿಯರ ಪಾಲಿಗೆ ಹಡಕಾ ಮಾಸ್ತೂರಿ ಹಬ್ಬ ಅತ್ಯಂತ ಪವಿತ್ರವಾದುದು ಅನ್ನೋ ನಂಬಿಕೆಯಿದೆ. ಹೀಗಾಗಿಯೇ ವರ್ಷಂಪ್ರತಿ ನಡೆಯೋ ಈ ಹಬ್ಬದಲ್ಲಿ ಬರೋಬ್ಬರಿ 10,000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುತ್ತಾರೆ.

ಹೊನ್ನು ದ್ವೀಪದ ಸೈದಾಯೀಜಿ ಕಾನೌಜೀನ್ ದೇಗುಲದಲ್ಲಿ ಬೆತ್ತಲೆಯಾಗಿ ಪೂಜೆಗೆ ಕುಳಿತುಕೊಳ್ಳುವ ಭಕ್ತರಿಗೆ ದೇಗುವ ಅರ್ಚಕರು ಮಹಡಿಯಿಂದ ಕಿಟಕಿ ಮೂಲಕ ಧ್ವಜವನ್ನು ಎಸೆಯುತ್ತಾರೆ. ಈ ಧ್ವಜ ಯಾರಿಗೆ ಸಿಗುತ್ತೋ ಅವರಿಗೆ ವರ್ಷವಿಡೀ ಒಳಿತಾಗುತ್ತೆ ಅನ್ನೋ ನಂಬಿಕೆ ಜಪಾನಿಯರದ್ದು.

ಸುಮಾರು 30 ನಿಮಿಷಗಳ ಕಾಲ ನಡೆಯೋ ಈ ಹಬ್ಬದಲ್ಲಿ ಧ್ವಜವನ್ನು ಪಡೆದುಕೊಳ್ಳಲು ನೂಕುನುಗ್ಗಲು ಉಂಟಾಗುತ್ತದೆ. ಹಬ್ಬಕ್ಕೆ ಬರೋ ಭಕ್ತರಿಗೆ ಗಾಯಗಳೂ ಆಗುತ್ತೆ. ಆದ್ರೂ ಜಪಾನಿಯರು ಈ ಹಬ್ಬವನ್ನು ಮಾತ್ರ ಮಿಸ್ ಮಾಡಿಕೊಳ್ಳೋದಿಲ್ಲ.

ಪೂಜೆಯಲ್ಲಿ ಪಾಲ್ಗೊಳ್ಳುವವರು ಬೆತ್ತಲೆಯಾದ್ರೆ, ಹಬ್ಬವನ್ನು ನೋಡುವವರು ಕೂಡ ತುಂಡುಡುಗೆಯನ್ನೇ ತೊಡಬೇಕು. ಕೇವಲ ಪುರುಷರಷ್ಟೇ ಅಲ್ಲಾ ಮಹಿಳೆಯರೂ ಕೂಡ ಈ ಹಬ್ಬದಲ್ಲಿ ಭಾಗಿಯಾಗ್ತಾರೆ.

ತಂತ್ರಜ್ಞಾನದಲ್ಲಿ ವಿಶ್ವ ವಿಖ್ಯಾತಿಯನ್ನು ಪಡೆದಿರೊ ಜಪಾನ್ ದೇಶದಲ್ಲಿ ಇಂತಹ ಆಚರಣೆಗಳು ಇಂದಿಗೂ ಜೀವಂತವಾಗಿರೋ ನಿಜಕ್ಕೂ ಅಚ್ಚರಿ ಮೂಡಿಸಿದೆ.

https://kannada.newsnext.live/lady-escape-highschool-student-diffrent-love/

ಜಪಾನಿಯರು ನಡೆಸೋ ಬೆತ್ತಲೆ ಹಬ್ಬ ಹೇಗಿರುತ್ತೆ ನೀವೇ ನೋಡಿ…

Comments are closed.