National Youth Day 2022: ಸ್ಮಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನ ಎಂದು ಆಚರಿಸಲು ಕಾರಣವೇನು?

ನಮ್ಮೆಲ್ಲ ಓದುಗರಿಗೂ ಸ್ವಾಮಿ ವಿವೇಕಾನಂದರ ಜನ್ಮದಿನದ ಶುಭಾಶಯಗಳು. ಇಡೀ ವಿಶ್ವವನ್ನೇ ನಿಬ್ಬೆರಗುಗೊಳಿಸಿದ ತರುಣ ವಿವೇಕಾನಂದರು ಭಾರತದ ಪಾಲಿಗೆ ಎಂದಿಗೂ ತರುಣ ವೀರ ಸನ್ಯಾಸಿಯೇ. ಸನ್ಯಾಸ ಧರ್ಮಕ್ಕೆ ಹೊಸ ಅರ್ಥವನ್ನೇ ವ್ಯಾಖ್ಯಾನಿಸಿದ ಅವರು ಯುವ ಜನಾಂಗದ ಸ್ಪೂರ್ತಿ. ಅಂದಹಾಗೆ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು (Swami Vivekananda Birthday 2022) ರಾಷ್ಟ್ರೀಯ ಯುವ ದಿನವನ್ನಾಗಿ (National Youth Day 2022) ಆಚರಿಸಲಾಗುತ್ತದೆ. ಯುವ ಪೀಳಿಗೆ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ, ಅಲ್ಲದೇ ಸ್ವಯಂ ಆಗಿಯೂ ಹಲವು ಉದಾತ್ತ ಕಾರ್ಯಗಳನ್ನು ಈ ದಿನ ನೆರವೇರಿಸುತ್ತಾರೆ. ಉತ್ತಮ ಕಾರ್ಯ ಎಸಗುವ ಕೈಂಕರ್ಯ ತೊಡುತ್ತಾರೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಜನಿಸಿದರು. ಸ್ವಾಮಿ ವಿವೇಕಾನಂದರ ನಿಜವಾದ ಹೆಸರು ನರೇಂದ್ರನಾಥ. ಚಿಕ್ಕ ವಯಸ್ಸಿನಿಂದಲೇ ಅಧ್ಯಾತ್ಮದತ್ತ ಒಲವು ಅವರಿಗೆ ಮೂಡಿತು. ಅಧ್ಯಯನದಲ್ಲಿ ಅಪಾರ ಆಸಕ್ತಿ ಜ್ಞಾನ ಹೊಂದಿದ್ದರು. ತಮ್ಮ 25ನೇ ವಯಸ್ಸಿನಲ್ಲಿ ನರೇಂದ್ರ ತಮ್ಮ ಗುರುಗಳಿಂದ ಪ್ರಭಾವಿತರಾಗಿ ಲೌಕಿಕ ಬಾಂಧವ್ಯವನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿದರು. ಆನಂತರವೇ ಅವರು ಸ್ವಾಮಿ ವಿವೇಕಾನಂದ ಎಂದು ಗುರುತಿಸಲ್ಪಟ್ಟರು. ಅವರ ಜೀವನ ಇನ್ನೊಂದು ಘಟ್ಟ ತಲುಪಿದ್ದು  ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಭೇಟಿಯಾದ ನಂತರ.

ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಅವರ ಗುರು-ಶಿಷ್ಯ ಪರಂಪರೆ ಅತ್ಯಂತ ಅನನ್ಯವಾಗಿತ್ತು. ದೇವರನ್ನು ಕಾಣುವ ಬಗ್ಗೆ ರಾಮಕೃಷ್ಣ ಪರಮಹಂಸರುಉ ವಿವಕಾನಂದರಿಗೆ ಉನ್ನತ ಅನುಭವ ಒದಗಿಸಿದರು. ಸ್ವಾಮಿ ವಿವೇಕಾನಂದರು ತಮ್ಮ ಗುರು ರಾಮಕೃಷ್ಣ ಪರಮಹಂಸರ ಸ್ಮರಣೆಗಾಗಿ 1987ರಲ್ಲಿ ರಾಮಕೃಷ್ಣ ಮಿಶನ್ ಸ್ಥಾಪಿಸಿದರು. ಇಂದು ಇಡೀ ಭಾರತದಲ್ಲೊಂದೇ ಅಲ್ಲದೇ ವಿದೇಶಗಳಲ್ಲಿಯೂ ರಾಮಕೃಷ್ಣ ಮಿಶನ್ ಹಲವು ಸತ್ಕಾರ್ಯಗಳಲ್ಲಿ ನಿರತವಾಗಿದೆ.

1898 ರಲ್ಲಿ ಗಂಗಾ ನದಿಯ ದಡದಲ್ಲಿ ಬೇಲೂರಿನಲ್ಲಿ ರಾಮಕೃಷ್ಣ ಮಠವನ್ನು ಸ್ಥಾಪಿಸಲಾಯಿತು. ಸೆಪ್ಟೆಂಬರ್ 11, 1893 ರಂದು, ಅಮೆರಿಕದಲ್ಲಿ ಆಯೋಜಿಸಲಾಗಿದ್ದ ಧರ್ಮಗಳ ಸಂಸತ್‌ನಲ್ಲಿ ಹಿಂದೂ ಧರ್ಮದ ಪರವಾಗಿ ಭಾಗವಹಿಸಿದ್ದ ಸ್ವಾಮಿ ವಿವೇಕಾನಂದರ ಅಮೆರಿಕದ  ಸಹೋದರ ಸಹೋದರಿಯರೇ’ ಎಂಬ ಭಾಷಣರ ಅವರ ಕೀರ್ತಿಯನ್ನು ಇಡೀ ವಿಶ್ವದಾದ್ಯಂತ ಪಸರಿಸಿತು. ಅಲ್ಲದೇ ಪರಧರ್ಮಗಳ ಕುರಿತು ಅವರ ಸಂದೇಶ ಇಂತಿದೆ: ಒಂದು ಧರ್ಮವು ಸತ್ಯವಾದರೆ ಎಲ್ಲ ಧರ್ಮಗಳು ಸತ್ಯವಾಗಿರಲೇಬೇಕು. ಹಿಂದೂಗಳಾದ ನಾವು ಕೇವಲ ಪರಧರ್ಮ ಸಹಿಷ್ಣುಗಳು ಮಾತ್ರವಲ್ಲ, ಇತರ ಧರ್ಮಗಳೊಡನೆ ನಾವು ಒಂದಾಗುತ್ತೇವೆ. ಮಸೀದಿಯಲ್ಲಿ ಮಹಮ್ಮದೀಯನೊಡನೆ ಪ್ರಾರ್ಥಿಸುತ್ತೇವೆ, ಪಾರ್ಸಿಗಳೊಡನೆ ಅಗ್ನಿಯನ್ನು ಪೂಜಿಸುತ್ತೇವೆ, ಕ್ರೈಸ್ತರೊಡನೆ ಶಿಲುಬೆಯ ಮುಂದೆ ತಲೆ ಬಾಗುತ್ತೇವೆ.

.ಸ್ವಾಮಿ ವಿವೇಕಾನಂದರು ಇಡೀ ಯುವಜನಾಂಗಕ್ಕೆ ಸದಾ ಸ್ಪೂರ್ತಿಯಾಗಿರುವ ಕಾರಣ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(National Youth Day 2022 Swami Vivekananda Birthday January 12 history importance and significance)

Comments are closed.