ಮಾ.13 ರಂದು ನಡೆಯಲಿದೆ ನೀಲಾವರ ಶ್ರೀ ಮಹಿಷಮರ್ಧಿನಿ ನೂತನ ಬ್ರಹ್ಮರಥದ ಜಾತ್ರಾಮಹೋತ್ಸವ

ನೀಲಾವರ: (Nilavara Shri Mahishamardhini Jatramahotsava) ಶ್ರೀ ಕೃಷ್ಣ ನೆಲೆಯಾದ ಉಡುಪಿಯಲ್ಲಿ ಐವರು ನಾಗಕನ್ನಿಕೆಯರು ಕೂಡ ನೆಲೆನಿಂತಿದ್ದು, ಈ ಐದು ಕ್ಷೇತ್ರಗಳು ಅಪರೂಪದ ಹಾಗೂ ಅಪರಿಣಿತ ಕಾರಣೀಕ ಕ್ಷೇತ್ರಗಳೆಂದು ನಂಬಲಾಗಿದೆ. ಅದರಲ್ಲಿ ಸೀತಾನದಿಯ ತೀರದಲ್ಲಿ ಪ್ರಕೃತಿರಮಣೀಯ ವಾತಾವರಣದಲ್ಲಿ ಅಭಯಹಸ್ತಳಾಗಿ ಶ್ರೀ ಮಹಿಷಮರ್ದಿನಿ ನೆಲೆನಿಂತು ಅಷ್ಠ ಬ್ರಾಹ್ಮಣರ ಕುಲದೇವಿಯಾಗಿ, ನಂಬಿ ಬರುವ ಭಕ್ತಿರಗೆ ಕಾಮಧೇನುವಾಗಿ ರಾಜಾಶ್ರಯ ಹೊಂದಿರುವ ಈ ತಾಯಿಯ ಕ್ಷೇತ್ರ ಬಾರ್ಕೂರಿನ ವಿಜಯನಗರ ಸಂಸ್ಥಾನದ ರಾಜಮಹಾರಾಜರು ನಂಬಿಕೊಂಡು ಬಂದಂತಹ ಪುರಾಣ ಪ್ರಸಿದ್ದ ದೇವಾಲಯ ಮಹತೋಬಾರ ಶ್ರೀ ಮಹಿಷಮರ್ದಿನಿ ಕ್ಷೇತ್ರ ನೀಲಾವರ ಕೂಡ ಒಂದು.

ಸ್ಕಂದ ಪುರಾಣಗಳ ಪ್ರಕಾರ, ಗಾಲವ ಮಹಾಮುನಿಗಳಿಂದ ಪುನರ್‌ ಪ್ರತಿಷ್ಠಾಪನೆಗೊಂಡ ಸಾನಿಧ್ಯ ಇದಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಮಗ್ರವಾದ ಜೋರ್ಣೋದ್ದಾರವನ್ನು ಕಂಡುಕೊಂಡಿದೆ. ಇದರ ಮಧ್ಯೆ ಸುಮಾರು ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಹಿಷಮರ್ಧಿನಿ ತಾಯಿಯ ಬ್ರಹ್ಮರಥದ ಚಕ್ರವು ಶಿಥಿಲಾವಸ್ಥೆಗೆ ತಲುಪಿದ್ದು, ಇದನ್ನು ಮನಗಂಡ ದೇವಸ್ಥಾನದ ಆಡಳಿತ ಮಂಡಳಿ ಬ್ರಹ್ಮರಥದ ಪುನರ್‌ ನಿರ್ಮಾಣ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟಿದ್ದು, ಈ ಸಂಕಲ್ಪಕ್ಕೆ ಪೂರಕವಾಗಿ ನೀಲಾವರದ ಮಕ್ಕಿತೋಟ ಮನೆಯ ಗೌರಿ ವಿಠಲ ಶೆಟ್ಟಿ ಮತ್ತು ಮಕ್ಕಳು, ಕುಟುಂಬಸ್ಥರು ಹಾಗೂ ಮನೆಯವರು ಸೇವಾರ್ಥಿಗಳಾಗಿ ಮುಂದೆ ಬಂದು ನೂತನ ಬ್ರಹ್ಮರಥವನ್ನು ದೇವಳಕ್ಕೆ ಸಮರ್ಪಿಸಲು ಮುಂದಾಗುತ್ತಾರೆ. ಸಂಕಲ್ಪದಂತೆಯೇ ಶ್ರೀ ಕ್ಷೇತ್ರದ ನೂತನ ಬ್ರಹ್ಮರಥವು ಫೆ. 27 ರಂದು ಶ್ರೀ ಕ್ಷೇತ್ರಕ್ಕೆ ಪುರಪ್ರವೇಶವನ್ನು ಮಾಡಿದೆ.

ಈ ಪ್ರಯುಕ್ತ ಮಹತೋಬಾರ ಶ್ರೀ ಮಹಿಷಮರ್ಧಿನಿ ತಾಯಿಯ ನೂತನ ಬ್ರಹ್ಮರಥದ ಜಾತ್ರಾ ಮಹೋತ್ಸವ ಇದೇ ಮಾರ್ಚ್‌ 13 ರಂದು ವಿಜೃಂಭಣೆಯಿಂದ ನೆರವೇರಲಿದೆ. ಅದೇ ದಿನ ಜಗದ್ಗುರು ಶ್ರೀ ಶಂಕರಾಚಾರ್ಯ ಅನಂತ ಶ್ರೀ ವಿಭಾಷಿತ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಪರಮಾನುಗ್ರಹದಿಂದ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ನೂತನ ಬ್ರಹ್ಮರಥದ ಲೋಕಾರ್ಪಣೆ ಕಾರ್ಯ ಧಾರ್ಮಿಕ ವಿಧಿವಿಧಾನಗಳಿಂದ ನೆರವೇರಲಿದೆ. ಈ ನೂತನ ಬ್ರಹ್ಮರಥದ ರಥೋತ್ಸಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ : ನೀಲಾವರ ಶ್ರೀ ಮಹಿಷಮರ್ದಿನಿ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ಸಮರ್ಪಣೆ

Nilavara Shri Mahishamardhini Jatramahotsava: New Brahmaratha Jatramahotsava of Nilavara Shri Mahishamardhini will be held on March 13.

Comments are closed.