ಶನಿವಾರ, ಏಪ್ರಿಲ್ 26, 2025
HomeSpecial Storyಭಾರತದಲ್ಲೇ ಹುಟ್ಟಿದ್ದನಂತೆ ರಾವಣ - ರಾವಣನಿಗೂ ಭಾರತದಲ್ಲಿವೆ ಹಲವು  ದೇವಾಲಯಗಳು 

ಭಾರತದಲ್ಲೇ ಹುಟ್ಟಿದ್ದನಂತೆ ರಾವಣ – ರಾವಣನಿಗೂ ಭಾರತದಲ್ಲಿವೆ ಹಲವು  ದೇವಾಲಯಗಳು 

- Advertisement -

Ravana Temples in India : ನಮ್ಮ ಸನಾತನ ಧರ್ಮ  ಆರಾಧನೆ ವಿಚಾರದಲ್ಲಿ ಅತಿ ವಿಸ್ತಾರವಾದ ಮನೋಧರ್ಮವನ್ನು ಹೊಂದಿದ ಧರ್ಮ . ಇಲ್ಲಿ ದೇವರನ್ನು ಯಾವ ರೂಪದಲ್ಲೂ ನಾವು ಕಾಣಬಹುದು. ಪ್ರಕೃತಿಯನ್ನೇ ದೇವರನ್ನಾಗಿ ನೋಡೋ ಧರ್ಮ ಇದು ಎಂದ್ರೆ ತಪ್ಪಾಗಲ್ಲ.  ದೇವರನ್ನು ಮಾತ್ರವಲ್ಲ, ಮನುಷ್ಯರಾಗಿ ಹುಟ್ಟಿ ದೇವರಾದವರನ್ನು ಪೂಜಿಸಿ ವಂದಿಸುತ್ತಾರೆ ನಮ್ಮ ಜನ . ರಾಮನನ್ನು ದೇವರು ಅಂತ ನಂಬಿರೋ ನಮ್ಮ ದೇಶದಲ್ಲಿ  ಕೂಡಾ ಅನಾದಿ ಕಾಲದಿಂದಲೂ ರಾವಣನನ್ನು (Ravana Temple ) ಪೂಜಿಸಿಕೊಂಡು ಬರುತ್ತಿದ್ದಾರೆ.

Ravana as born in India There are 6 temples dedicated to Ravana in India
Image Credit to Original Source

ಇಷ್ಟು ಮಾತ್ರವಲ್ಲ ಇಲ್ಲಿ ದೇವರಿಗೆ ವಿರುದ್ಧವಾಗಿ ನಿಂತ ದಾನವರಿಗೂ ಪೂಜೆ ನಡೆಸುವ ಅವಕಾಶ ಇರೋದು ನಮ್ಮ ದೇಶ ಹಾಗೂ ಸನಾತನ ಧರ್ಮದಲ್ಲಿ ಮಾತ್ರ .ಇದಕ್ಕೆ ಸಾಕ್ಷಿ  ಎಂದ್ರೆ ರಾಮನ ಕಡು ವೈರಿ ಅನ್ನಿಸಿಕೊಂಡಿರೋ ರಾವಣನ ದೇವಾಲಯಗಳು . ಹೌದು ರಾಮನನ್ನು ದೇವರು ಅಂತ ನಂಬಿರೋ ನಮ್ಮ ದೇಶದಲ್ಲಿ  ಕೂಡಾ ಅನಾದಿ ಕಾಲದಿಂದಲೂ ರಾವಣನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ.

ರಾವಣ , ರಾಮಾಯಣದ ವಿಲನ್ ಅಥವಾ ಕಳನಾಯಕ. ಎಲ್ಲಾ ಜ್ಞಾನವನ್ನು ಹೊಂದಿದ್ದರೂ ಅಜ್ಞಾನದಲ್ಲಿ ನಡೆದಾತ. ತಂಗಿಯ ಮಾತನ್ನು ಕೇಳಿ  ಸೀತಾ ಮಾತೆಯನ್ನೇ ಎಳೆದು ತಂದು ರಾಮನಿಂದ ಹತನಾದವನು. ಇದೆಲ್ಲಾ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋದೇ . ಆದ್ರೆ ಇಂತಹ ರಾವಣನನ್ನು ಶ್ರೀಲಂಕಾ  ಹಾಗೂ ಭಾರತದ ಕೆಲವು ಭಾಗಗಳಲ್ಲಿ  ಪೂಜೆ ಮಾಡುತ್ತಾರೆ ಅಂದ್ರೆ ನೀವು ನಂಬಲೇ ಬೇಕು ? ಇದಕ್ಕೆ ಕಾರಣ ಏನು ಅಂತ ಕೇಳಿದ್ರೆ ಅವನೊಬ್ಬ ಮಹಾನ್ ಶಿವ ಭಕ್ತ.

ಶಿವನೇ ಈತನಿಗೆ ಆತ್ಮಲಿಂಗವನ್ನು ನೀಡಿದ್ದ . ಜೊತೆಯಲ್ಲಿ ಈತ ವೇದ ವೇದಾಂಗ ಪಂಡಿತನೂ ಆಗಿದ್ದ. ರಾವಣ ಸಂಹಾರದ ನಂತರ ರಾಮ ಲಕ್ಷ್ಮಣ ಬಳಿ ರಾಜಧರ್ಮದ ಕುರಿತಂತೆ ತಿಳಿಯಲು ರಾವಣ ಶಿಷ್ಯನಾಗುವಂತೆ ಹೇಳಿದ್ದ ಅಂತ ನಮ್ಮ ಪುರಾಣಗಳು ಹೇಳುತ್ತವೆ. ಹೀಗಾಗಿ ಇಂದಿಗೂ ಅಪ್ರತಿಮ ಶಿವ ಭಕ್ತನಾಗಿ ರಾವಣನನ್ನು ಭಾರತದಲ್ಲೂ ಪೂಜಿಸಲಾಗುತ್ತೆ . ಇಂತಹ  ರಾವಣನ 6 ಮಂದಿರಗಳ  ಕುರಿತು ಮಾಹಿತಿ ಇಲ್ಲಿದೆ

ಬಿಸ್ರಖ್  ಮಂದಿರ ರಾಜಸ್ಥಾನ

ಉತ್ತರ ಪ್ರದೇಶದ ನೋಯ್ಡಾ ಬಳಿಯ ಬಿಸ್ರಾಖ್  ಎಂಬ ಊರಿನಲ್ಲಿ ರಾವಣನ ಮಂದಿರವಿದೆ.  ಇಲ್ಲಿ ರಾವಣನನ್ನು ದೇವರಾಗಿ ಪೂಜಿಸಲಾಗುತ್ತೆ. ಇದಕ್ಕೆ ಮುಖ್ಯ ಕಾರಣ ಇದು ರಾವಣ ಜನ್ಮಸ್ಥಾನ. ಇಲ್ಲಿ ರಾವಣ ತಂದೆ ವಿಶ್ರವಸ ಮುನಿಗಳು  ತಮ್ಮ ಪತ್ನಿ ಕೈಕಸಿಯೊಂದಿಗೆ ಇದ್ದರು ಅಂತ ನಂಬಲಾಗುತ್ತೆ . ಹೀಗಾಗಿ ರಾವಣ ತನ್ನ ಬಾಲ್ಯದ ಕ್ಷಣಗಳನ್ನು ಇಲ್ಲೇ ಕಳೆದಿದ್ದ ಅಂತ ಇಲ್ಲಿನ ಸ್ಥಳೀಯರು ಹೇಳುತ್ತಾರೆ . ಇನ್ನು ಇಲ್ಲಿ  ದಸರಾ/ ನವರಾತ್ರಿಯಲ್ಲಿ ರಾವಣ ದಹನ ನಡೆಯುದಿಲ್ಲ. ಬದಲಾಗಿ ರಾವಣ ಹೆಸರಲ್ಲಿ ಹವನ ಮಾಡಲಾಗುತ್ತೆ .

 ಕಾಕಿನಾಡ ಮಂದಿರ,  ಆಂದ್ರಪ್ರದೇಶ 

ಆಂದ್ರ ಪ್ರದೇಶ  ಕಾಕಿನಾಡದಲ್ಲೂ ರಾವಣವ ವಿಗ್ರಹವನ್ನು ಆರಾಧಿಸಲಾಗುತ್ತೆ. ಇದಕ್ಕೆ ಕಾರಣ ಇಲ್ಲಿ ರಾವಣನನ್ನು ಶಿವ ಭಕ್ತನಾಗಿ ಪೂಜಿಸಲಾಗುತ್ತೆ. ಇಲ್ಲಿ ರಾವಣನೇ ಖುದ್ದಾಗಿ ಶಿವನ ಆರಾಧನೆ ಮಾಡುತ್ತಿದ್ದನಂತೆ. ಜೊತೆಗೆ ಶಿವನಿಗಾಗಿ ಮಂದಿರವನ್ನು ನಿರ್ಮಿಸಿದ್ದ ಅಂತ ಹೇಳಲಾಗುತ್ತೆ. ಆದ್ದರಿಂದ ಇಲ್ಲಿ ಶಿವನ ಜೊತೆಯಲ್ಲಿ ರಾವಣನನ್ನು ಆರಾಧಿಕೊಂಡು ಬರಲಾಗುತ್ತಿದೆ.

ಕಾನ್ಪುರ, ಉತ್ತರಪ್ರದೇಶ 

ಉತ್ತರ ಪ್ರದೇಶದ ಮಂದಿರವು  ಕೂಡಾ ಶಿವ ಭಕ್ತ ರಾವಣನಿಗಾಗಿಯೇ ನಿರ್ಮಾಣ ಮಾಡಲಾಗಿದೆ. ಇಲ್ಲಿ  ಖುದ್ದು ಶಿವ ಭಕ್ತನಾಗಿದ್ದ ಶಿವ ಶಂಕರ ಎಂಬವರು  ಈ ದೇವಾಲಯವನ್ನು ನಿರ್ಮಾಣ ಮಾಡಿದ್ದರಂತೆ . ಈ ಮಂದಿರವು ವರ್ಷದಲ್ಲಿ ಒಂದು ಬಾರಿ ಅಂದ್ರೆ ನವರಾತ್ರೆಯ ಒಂದು ದಿನ ಮಾತ್ರ ತೆಗೆದಿರುತ್ತೆ. ಇನ್ನು ಈ ರಾವಣನು ಶಕ್ತಿಯ ಪ್ರತೀಕ ಅಂತ ಇಲ್ಲಿ ನಂಬಲಾಗುತ್ತೆ

Ravana as born in India There are 6 temples dedicated to Ravana in India
Image Credit to Original Source

ವಿಧಿಶಾ, ಮಧ್ಯಪ್ರದೇಶ :

ಮಧ್ಯಪ್ರದೇಶದಲ್ಲಿ  ವಿಧೀಶಾದಲ್ಲಿ ಸ್ಥಿತವಾಗಿರುವ ಈ  ಮಂದಿರವನ್ನು ರಾವಣನ ಅತ್ತೆ ಮನೆ ಅಂತ ನಂಬಲಾಗುತ್ತೆ. ಯಾಕಂದ್ರೆ ಇದು ಮಂಡೋದರಿಯ ತವರು ಅಂತ ಇಲ್ಲಿಯ ಜನ ಹಾಗೂ ಸ್ಥಳಪುರಾಣದಲ್ಲಿ ನಂಬಲಾಗಿದೆ. ಹೀಗಾಗಿ ಊರಿಗೆ ಅಳಿಯನಾಗಿರುವ  ರಾವಣನನ್ನು ಗೌರವದಿಂದ ಇಲ್ಲಿ ಕಾಣಲಾಗುತ್ತೆ.

ಇದನ್ನೂ ಓದಿ : ಇದು ವಾಮನ ಮಹಿಮೆಯನ್ನು ಸಾರುವ ಕ್ಷೇತ್ರ : ಇಲ್ಲೇ ವಾಮನ ಬಲಿಚಕ್ರವರ್ತಿ ಪಾತಾಳಕ್ಕೆ ತುಳಿದಿದ್ದನಂತೆ

ಹಾಗೂ ಅಳಿಯನಿಗೆ ಗೌರವ ನೀಡುವ ಸಲುವಾಗಿ ಇಲ್ಲಿ ಮಂದಿರ ನಿರ್ಮಾಣ ಮಾಡಲಾಗಿದೆ ಅಂತ ಇಲ್ಲಿನ ಸ್ಥಳೀಯರು ನಂಬುತ್ತಾರೆ. ಹೀಗಾಗಿ ಯಾವುದೇ ವಿಶೇಷ ಸಂದರ್ಭವಾಗಲಿ ಇಲ್ಲಿ ರಾವಣನಿಗೆ  ಪೂಜಾ ಪಾಠಗಳು ನಡೆದುಕೊಂಡು ಬರುತ್ತಿವೆಯಂತೆ . ಇನ್ನು ಇಲ್ಲೂ ನವರಾತ್ರಿಯನ್ನು ರಾವಣ ಸಂಹಾರದ ದಿನವಾಗಿ ಆಚರಿಸೋದಿಲ್ಲ.

ಮಂದಸೌರ್ , ಮಧ್ಯಪ್ರದೇಶ: 

ಇದು ರಾವಣ ಹಾಗೂ ಮಂಡೋದರಿಯರ ವಿವಾಹವಾದ ಸ್ಥಳ ಅಂತ ನಂಬಲಾಗುತ್ತೆ. ಹೀಗಾಗಿ ರಾವಣ ಹಾಗೂ ಮಂಡೋದರಿಗೆ ವಿಶೇಷ ಗೌರವನ್ನು ನೀಡಲಾಗುತ್ತೆ. ಇಲ್ಲಿ  ಯಾವುದಾದರೂ ಮದುವೆ ನಿಶ್ಚಯವಾದ್ರೆ ಈ ದೇವಾಲಯಕ್ಕೆ ಬಂದು  ಪೂಜೆ ಮಾಡಿಸಿಕೊಂಡು ಹೋಗುವ ಪದ್ದತಿ ಇಲ್ಲಿಯ ಜನರಲ್ಲಿದೆ

ಇದನ್ನೂ ಓದಿ : ಆಲದ ನೆರಳಲ್ಲಿ ನೆಲೆ ನಿಂತಿದ್ದಾನೆ ಬಸ್ರೂರು ತುಳುವೇಶ್ವರ – ಪ್ರಕೃತಿಯೇ ಇಲ್ಲಿ ಶಿವನಿಗೆ ದೇವಾಲಯ

ಮಂದೋರ್ ರಾಜಸ್ಥಾನ :

ಈ ಊರಿಗೂ ರಾವಣನಿಗೂ ನೇರವಾಗಿ ಸಂಬಂದವೇನೂ ಇಲ್ಲ . ಆದರೂ ರಾವಣನನ್ನು ಪೂಜಿಸಿಕೊಂಡು ಬರುವ ಪದ್ದತಿ ಇಲ್ಲಿದೆ. ಇಲ್ಲಿ ಯಾವುದೇ ರಾವಣನ ದೇವಾಲಯ ಅಂತ ಇಲ್ಲ. ಬದಲಾಗಿ ಇಲ್ಲಿರುವ ಒಂದು ಜನಾಂಗದ ಬ್ರಾಹ್ಮಣರು   ತಾವು ರಾವಣನ ವಂಶದವರು ಅಂತ ಹೇಳಿಕೊಳ್ಳುತ್ತಾರೆ . ಜೊತೆಗೆ ಪ್ರತಿವರ್ಷ ರಾವಣ ಆತ್ಮ ಶಾಂತಿಗಾಗಿ ಪಿಂಡ ಪ್ರಧಾನವನ್ನು ಮಾಡುತ್ತಾರೆ .

ಒಟ್ಟಾರೆ ನಮ್ಮ ದೇಶದಲ್ಲಿ ರಾಮ ದೇವಾರಾದರೂ,  ರಾವಣನಲ್ಲಿನ ಒಳ್ಳೆಯ ಗುಣಗಳನ್ನು ಪೂಜಿಸಿ ಗೌರವಿಸುವ ಸಂಪ್ರದಾಯ ಮೊದಲಿನಿಂದಲೇ ಇತ್ತು ಅನ್ನೋದನ್ನು ನೋಡಿದ್ರೆ,  ನಮ್ಮ ಧರ್ಮ ಹಾಗೂ ದೇಶದ ಬಗ್ಗೆ ನಮಗೆ ಹೆಮ್ಮೆಯಾಗುತ್ತೆ.

ಇದನ್ನೂ ಓದಿ : ಇದು ಶೃಂಗೇರಿ ಶಾರದೆ ಮೂಲ ಕ್ಷೇತ್ರ – ನಿಂತ ಭಂಗಿಯಲ್ಲೇ ಪೂಜಿಸಲ್ಪಡುತ್ತಾಳೆ ತಾಯಿ

Ravana as born in India – There are 6 temples dedicated to Ravana Temples in India

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular