(Navratri )ಭಾರತದಾದ್ಯಂತ ಆಚರಿಸುವ ಮಹತ್ವದ ಹಬ್ಬಗಳಲ್ಲಿ ನವರಾತ್ರಿ ಕೂಡ ಒಂದಾಗಿದೆ. ನವರಾತ್ರಿಯ ಹಬ್ಬದಂದು ದೇವಸ್ಥಾನಗಳಲ್ಲಿ ನವದುರ್ಗೆಯರನ್ನು ಒಂಬತ್ತು ದಿನಗಳ ಕಾಲ ವಿಶೇಷವಾಗಿ ಪೂಜಿಸಲಾಗುತ್ತದೆ. ಮನೆಗಳಲ್ಲೂ ಕೂಡ ಗೊಂಬೆಗಳನ್ನು ಕೂರಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಪಟ್ಟದ ಬೊಂಬೆ, ಅವರೇ ಅಲಂಕಾರವನ್ನು ಮಾಡಿ ತಯಾರಿಸಿದ ಬೊಂಬೆ, ಖರೀದಿ ಮಾಡಿದಂತಹ ಬೊಂಬೆ ಹೀಗೆ ವಿವಿಧ ಬಗೆಯ ಗೊಂಬೆಗಳನ್ನು ಜೋಡಿಸಿಟ್ಟು ಅಲಂಕಾರವನ್ನು ಮಾಡುತ್ತಾರೆ. ಇದರ ಜೊತೆಗೆ ಒಂಬತ್ತು ದಿನ ಬಗೆ ಬಗೆಯ ತಿಂಡಿಗಳನ್ನು ಮಾಡಿ ಮಕ್ಕಳನ್ನು ಕರೆಸಿ ಬಡಿಸುತ್ತಾರೆ. ಕೆಲವರು ಉಪವಾಸವನ್ನು ಕೂಡ ಮಾಡುತ್ತಾರೆ.
(Navratri )ಈ ಉಪವಾಸದ ಹಿಂದೆ ಇರುವ ವೈಜ್ಞಾನಿಕ ಕಾರಣವೆನೆಂದರೆ ಜೀರ್ಣಾಂಗದ ಅಂಗಕ್ಕೆ ವಿಶ್ರಾಂತಿ ಸಿಗುತ್ತದೆ ಮತ್ತು ಕರುಳನ್ನು ಸ್ವಚ್ಚಗೋಳಿಸುವ ಕಾರ್ಯವನ್ನೂ ಕೂಡ ಮಾಡುತ್ತದೆ. ಈ ಸಮಯದಲ್ಲಿ ಕೆಲವರು ರಾತ್ರಿ ಫಲಹಾರವನ್ನ ಮಾತ್ರ ಸೇವನೆ ಮಾಡುತ್ತಾರೆ. ಮಸಾಲೆ ಇರುವಂತಹ ಪದಾರ್ಥವನ್ನು ಸೇವಿಸುವುದಿಲ್ಲ. ಹವಮಾನಗಳು ಬದಲಾಗುತ್ತಾ ಹೋದಂತೆ ಆರೋಗ್ಯದ ಮೇಲೆ ಪರಿಣಾಮ ಬಿರುವುದರಿಂದ ಲಗು ಪದಾರ್ಥವನ್ನು ಸೇವನೆ ಮಾಡುತ್ತಾರೆ.
ಕೆಲವು ದೇವಸ್ಥಾನಗಳಲ್ಲಿ ನೃತ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ನೋಡಿರುತ್ತೇವೆ ಇದರ ಹಿಂದಿರುವ ಕಾರಣವೆನೆಂದರೆ ಸೈಕೋಲಾಜಿಯ ಪ್ರಕಾರ ನೃತ್ಯವನ್ನು ನೋಡುವುದರಿಂದ ಮತ್ತು ನೃತ್ಯ ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:Sharana samskruthi utsava:ಮುರುಘಾ ಶ್ರೀ ಇಲ್ಲದೆ ಮುರುಘಾ ಮಠದಲ್ಲಿ ನಡೆಯಲಿದೆ ಶರಣ ಸಂಸ್ಕೃತಿ ಉತ್ಸವ
ಪ್ರತಿಯೊಂದು ಆಚರಣೆಗಳ ಹಿಂದೆ ಅದರದ್ದೆ ಆದ ವೈಜ್ಞಾನಿಕ ಕಾರಣಗಳು ಅಡಗಿರುತ್ತವೆ. ನಾವು ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ. ಅದನ್ನು ತಿಳಿದುಕೊಂಡಾಗ ಆಚರಣೆಗಳ ಹಿಂದೆ ಎಷ್ಟೆಲ್ಲಾ ವಿಷಯ ಅಡಗಿದೆ ಎಂಬ ಭಾವನೆ ಮನಸ್ಸಿಗೆ ಬರುತ್ತದೆ.
scientific reason behind Navratri fasting