Sharana samskruthi utsava:ಮುರುಘಾ ಶ್ರೀ ಇಲ್ಲದೆ ಮುರುಘಾ ಮಠದಲ್ಲಿ ನಡೆಯಲಿದೆ ಶರಣ ಸಂಸ್ಕೃತಿ ಉತ್ಸವ

ಚಿತ್ರದುರ್ಗ : (Sharana samskruthi utsava)ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿ (Shivamurthy Murugha Sharana Swamiji) ಜೈಲು ಪಾಲಾಗಿದ್ದಾರೆ. ಈ ಬಾರಿ ಮುರುಘಾ ಶ್ರೀಗಳಿಲ್ಲದೇ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ. ಈ ಕುರಿತು ಮಠದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಕಳೆದ ಎರಡು ವರ್ಷಗಳಿಂದಲೂ ಕೊರೊನಾ ವೈರಸ್‌ ಸೋಂಕಿನ ಕಾರಣದ ಹಿನ್ನೆಲೆಯಲ್ಲಿ (Sharana samskruthi utsava) ಶರಣ ಸಂಸ್ಕೃತಿ ಉತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿಯು ಕೂಡ ಸರಳವಾಗಿ ಆಚರಿಸುವುದಕ್ಕೆ ಮಠದ ಸಿಬ್ಬಂದಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅಕ್ಟೋಬರ್‌ 4 ರಿಂದ 6 ರವರೆಗೆ ಶರಣ ಸಂಸ್ಕೃತಿ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತದೆ ಎಂದು ಮುರುಘಾ ಮಠದ ಮೂಲಗಳು ಮಾಹಿತಿ ನೀಡಿವೆ.

ಪ್ರತಿ ಈ ಶರಣ ಸಂಸ್ಕೃತಿ ಉತ್ಸವದಂದು ಅನ್ನದಾಸೋಹದ ಕಾರ್ಯಗಳು ನಡೆಯುತಿತ್ತು. ಶರಣ ಸಂಸ್ಕೃತಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಉತ್ಸವಕ್ಕೆ ಬರುವ ಸಾವಿರಾರು ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು. ಕಾರ್ಯಕ್ರಮದ ಮೂಲಕ ಬಸವಾದಿ ಶರಣದ ಆಶಯಗಳನ್ನು, ವಿಚಾರಧಾರೆಗಳನ್ನು ಜನ ಸಾಮಾನ್ಯರಲ್ಲಿ ಜಾಗೃತಿಗೊಳಿಸುವ ಕಾರ್ಯವನ್ನು ನಡೆಸಲಾಗುತ್ತಿತ್ತು. ಹೀಗಾಗಿಯೇ ಈ ಉತ್ಸವ ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ:Jhulan Goswami : 20 ವರ್ಷಗಳ ಆಟ.. 2,260 ಓವರ್.. 353 ವಿಕೆಟ್.. ಮಹೋನ್ನತ ಕರಿಯರ್‌ಗೆ ಚಕ್ಡಾ ಎಕ್ಸ್‌ಪ್ರೆಸ್ ವಿದಾಯ

ಇದನ್ನೂ ಓದಿ:Kannada Bigg Boss Season 9 : ಕಿರುತೆರೆಯಲ್ಲಿ ಬಿಗ್‌ಬಾಸ್‌ ಅಬ್ಬರ : ಹೊಸಬರು, ಹಳಬರ ಕಾದಾಟ

ಇದನ್ನೂ ಓದಿ: SM Krishna : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಇದನ್ನೂ ಓದಿ:Dasara 2022 : ಕರಾವಳಿಯಲ್ಲಿ ನವರಾತ್ರಿಯಂದು ನಡೆಯುತ್ತೆ ತೆನೆಪೂಜೆ : ಈ ಆಚರಣೆಯ ಬಗ್ಗೆ ನಿಮಗೆ ಗೊತ್ತಾ ?

ಇದನ್ನೂ ಓದಿ:Spooky College teaser:ಮೈಸೂರು ಯುವ ದಸರಾ; ಸ್ಪೂಕಿ ಕಾಲೇಜ್‌ ಟೀಸರ್‌ ಬಿಡುಗಡೆ

ಪ್ರತಿ ವರ್ಷ ಮುರುಘಾ ಶ್ರೀ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತಿತ್ತು. ಅದರೆ ಈ ಬಾರಿ ಅವರಿಲ್ಲದೆ ಸರಳವಾಗಿ ಶರಣ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಂಡಿದ್ದಾರೆ. ಜನರ ಮನಸ್ಸಿನ ಮೂಲೆಯಲ್ಲಿ ಮುರುಘಾ ಶ್ರೀ ಅವರು ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸುತ್ತಾರ ಅಥವ ಇಲ್ಲವಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದಕ್ಕಿಗ ಉತ್ತರ ಸಿಕ್ಕಂತಾಗಿದೆ.

sharana samskruthi utsava will be held at Muruga Mutt without Muruga Shri

Comments are closed.