Mysore Dasara 2022 : ಮೈಸೂರು ದಸರಾ : ಅರಮನೆ ನಗರಿಯಲ್ಲಿ 124 ಕಿ.ಮೀ ದೀಪಾಲಂಕಾರ

ಮೈಸೂರು : (Mysore Dasara 2022)ನಾಡಿನಾದ್ಯಂತ ನಾಡಹಬ್ಬ “ದಸರಾ”ಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಸೆಪ್ಟೆಂಬರ್‌ 26ರಿಂದ ಅಕ್ಟೋಬರ್‌ 4ರವರೆಗೆ ನಡೆಲಿರುವ ಮೈಸೂರು ದಸರಾದಲ್ಲಿ ದೀಪಾಲಂಕಾರ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಈ ಬಾರಿಯು ಕೂಡ ದಸರಾ ಮಹೋತ್ಸವದಲ್ಲಿ ದೀಪಾಲಂಕಾರದಿಂದ ಜನರನ್ನು ಆಕರ್ಷಿಸಲು ಸಕಲ ಸಿದ್ಧತೆ ಭರದಿಂದ ಸಾಗಿದೆ. ಈ ಬಾರಿ 124ಕಿ.ಮೀ ಉದ್ದದ ರಸ್ತೆಯನ್ನು ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ. ಹೀಗಾಗಿ ಅರಮನೆ ನಗರಿ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

(Mysore Dasara 2022)ಹಿಂದಿನ ವರ್ಷ 100 ಕಿ.ಮೀ ವರೆಗೆ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ 24ಕಿ.ಮೀ ಹೆಚ್ಚಿಗೆ ದೂರದವರೆಗೆ ದೀಪಾಲಂಕಾರ ಮಾಡಲಾಗುತ್ತದೆ. ಸೂರ್ಯಸ್ತಮದಿಂದ ರಾತ್ರಿ 10.30ರವರೆಗೂ ಮೈಸೂರು ದೀಪಾಲಂಕಾರಗೊಳ್ಳಲಿದೆ. ಇಷ್ಟು ವರ್ಷಗಳಿಗೆ ಹೋಲಿಸಿದ್ರೆ ಈ ಬಾರಿ ದೀಪಾಲಂಕಾರ ಹಲವು ವಿಶೇಷತೆಗಳಿಂದ ಕೂಡಿದೆ. 35 ಪ್ರಾಯೋಜಕರ ಪ್ರಾಯೋಜಕತ್ವದಲ್ಲಿ ಮೈಸೂರು ದೀಪಾಲಂಕಾರಗೊಳ್ಳಲಿದೆ. ನಗರದಲ್ಲಿನ 96 ವೃತ್ತಗಳನ್ನು ದೀಪಗಳಿಂದ ಸಿಂಗರಿಸಲಾಗುತ್ತದೆ. ದಸರಾ ಹಬ್ಬದಲ್ಲಿ ಸಂಸತ್‌ ಭವನದ ಮಾದರಿ, ನಟ ಪುನೀತ್‌ ರಾಜ್‌ ಕುಮಾರ್‌ಗೆ ವಿಶೇಷ ಗೌರವನ್ನು ಸಲ್ಲಿಸಲಾಗುತ್ತದೆ.

ಎಲ್‌ಐಸಿ ವೃತ್ತದಲ್ಲಿ ರಾಷ್ಟ್ರ ಲಾಂಛನ, ರಾಷ್ಟ್ರಧ್ವಜ, ರಾಷ್ಟ್ರ ಪ್ರಾಣಿ ಹಾಗೂ ರಾಷ್ಟ್ರ ಪಕ್ಷಿಗಳ ಮಾದರಿ ಕೂಡ ಇದೆ. ಮೈಸೂರು ಮಹಾರಾಜರು, ಕೆಂಪುಕೋಟೆ, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಕೃತಿಗಳು ಹಾಗೂ ಕನ್ನಡ ಜ್ಞಾನಪೀಠ ಪುರಸ್ಕೃತರ ಪ್ರತಿಕೃತಿಗಳನ್ನು ನೋಡಬಹುದಾಗಿದೆ. ಹಾಗೆ ವಿದ್ಯುತ್‌ ದೀಪಾಲಂಕಾರವು ಮೈಸೂರು, ನಂಜನಗೂಡು ಹಾಗೂ ಟಿ.ನರಸೀಪುರದ ರಸ್ತೆಗಳಲ್ಲಿ ಅತ್ಯಾಕರ್ಷಕ ದೀಪಾಲಂಕಾರವನ್ನು ನೋಡಬಹುದಾಗಿದೆ.

ದಸರಾದಲ್ಲಿ ಜಂಬು ಸವಾರಿಯು ಬಹಳ ವಿಶೇಷವಾಗಿರುತ್ತದೆ. ಈ ಬಾರಿ ಸಂಜೆ 5.30ಕ್ಕೆ ದಸರಾ ಜಂಬೂ ಸವಾರಿ ಮೆರವಣಿಗೆಯು ಪ್ರಾರಂಭವಾಗಲಿದೆ. ಜಂಬೂ ಸವಾರಿಯಲ್ಲಿ ಅಂಬಾರಿಯನ್ನು ಹೊರುವ ಆನೆಯು 16 ಅಡಿ ಇರುವುದರಿಂದ ಮೆರವಣಿಗೆ ಸಾಗುವ ಮಾರ್ಗದಲ್ಲಿ 22 ಅಡಿ ಎತ್ತರದಲ್ಲಿ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಲದ ದಸರಾದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹಿಷಾ ಮರ್ದಿನಿಯ 3ಡಿ ವಿಡಿಯೋ ಮೂಲಕ ಪ್ರದರ್ಶಿಸಲಿದ್ದಾರೆ.

ಇದನ್ನೂ ಓದಿ : ನವರಾತ್ರಿಯ ಉಪವಾಸದ ಹಿಂದಿದೆ ವೈಜ್ಞಾನಿಕ ಕಾರಣ

ಇದನ್ನೂ ಓದಿ : ಕರಾವಳಿಯಲ್ಲಿ ನವರಾತ್ರಿಯಂದು ನಡೆಯುತ್ತೆ ತೆನೆಪೂಜೆ : ಈ ಆಚರಣೆಯ ಬಗ್ಗೆ ನಿಮಗೆ ಗೊತ್ತಾ ?

ಇದನ್ನೂ ಓದಿ : ದೇಶದ ಯಾವ್ಯಾವ ಭಾಗದಲ್ಲಿ ನವರಾತ್ರಿ ಆಚರಣೆ ಹೇಗಿರುತ್ತೆ : ಇಲ್ಲಿದೆ ಮಾಹಿತಿ

ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಂದ ವಿಮಾನ ನಿಲ್ದಾಣ ಆಗಿದ್ದರಿಂದ ಮೈಸೂರು ವಿಮಾನ ನಿಲ್ದಾಣದ ದ್ವಾರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಮಾದರಿಯನ್ನು ನಿರ್ಮಾಣ ಮಾಡಿ ಅವರ ಹೆಸರನ್ನು ಬರೆಯಲಾಗುತ್ತದೆ. ಹಾಗೆ ವಿಮಾನ ನಿಲ್ದಾಣದಲ್ಲೂ ದೀಪಾಲಂಕಾರವನ್ನು ಮಾಡಲಾಗಿದೆ. ನಾಳೆಯಿಂದ 10 ದಿನಗಳವರೆಗೆ ನಡೆಯುವ ದಸರಾ ಹಬ್ಬಕ್ಕೆ ಸಕಲ ಸಿದ್ದತೆಗಳು ನಡೆದಿವೆ. ದಸರಾ ಹಬ್ಬದ ಆಕರ್ಷಣೆಗೆ ಕೇಂದ್ರ ಬಿಂದುವಾಗಿರುವ ದೀಪಾಲಂಕಾರದ ಸಕಲ ಸಿದ್ಧತೆಯಿಂದ ಮೈಸೂರು ಸಜ್ಜಾಗಿದೆ.

124 km Dipalankara in Mysore Dussehra Palace City

Comments are closed.