ಸಕಲ ರೋಗಕ್ಕೂ ಇಲ್ಲಿದೆ ಪರಿಹಾರ : ನಾಗದೋಷ ಪರಿಹರಿಸುತ್ತಾನೆ ಶಾಸ್ತಾರ ಸುಬ್ರಹ್ಮಣ್ಯೇಶ್ವರ

  • ವಂದನ ಕೊಮ್ಮುಂಜೆ

ಕರಾವಳಿ, ಇದೊಂದು ತರಹ ದೇವಭೂಮಿ. ಇಲ್ಲಿ ಇರೋ ಪ್ರತಿಯೊಂದು ದೇವಾಲಯಕ್ಕೆ ಅದರದೇ ಆದ ಕಾರಣಿಕ ಇರುತ್ತೆ. ಅದರಲ್ಲೂ ನಾಗಾರಾಧನೆ ಈ ಮಣ್ಣಿನ ವಿಶೇಷದಲ್ಲಿ ಒಂದು. ಶಿವನ ಪುತ್ರನಾದ ಸುಬ್ರಹ್ಮಣ್ಯನನ್ನು ಇಲ್ಲಿ ನಾಗರಾಜನ ರೂಪದಲ್ಲಿ ಆರಾಧಿಸಲಾಗುತ್ತೆ. ಈತನ ಸೇವೆ ಮಾಡಿದ್ರೆ ಚರ್ಮವ್ಯಾಧಿ , ಸಂತಾನ ಸಮಸ್ಯೆ ಮುಂತಾದ ರೋಗಗಳು ಕ್ಷಣ ಮಾತ್ರದಲ್ಲಿ ಪರಿಹಾರವಾಗುತ್ತೆ ಅನ್ನೋ ನಂಬಿಕೆ ಜನರಲ್ಲಿದೆ. ಇದಕ್ಕಾಗಿ ಇಲ್ಲಿ ಕುಕ್ಕೆ ಸೇರಿದಂತೆ ಹಲವಾರು ದೇವಾಲಯವನ್ನು ನಾವು ಕಾಣಬಹುದು.

ಅಂತಹದೇ ಒಂದು ಕಾರಣಿಕವಾದ ದೇವಾಲಯದ ಇದೇ ಕರಾವಳಿಯಲ್ಲಿದೆ . ಸುತ್ತಲೂ ಹಸಿರು ವನಸಿರಿ. ಬೆಟ್ಟದಿಂದ ಹರಿಯುವ ಸಣ್ಣ ತೊರೆ, ಇದರ ನಡುವೆ ಈ ಸುಂದರ ದೇವಾಯ ವಿದೆ. ಇಲ್ಲಿ ಖುದ್ದು ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತು ಭಕ್ತರ ಸಂಕಟ ಪರಿಹರಿಸ್ತಿದ್ದಾನೆ . ಜೊತೆಯಲ್ಲೇ ಶಾಸ್ತಾರ ರೂಪದಲ್ಲಿ ಅಯ್ಯಪ್ಪ ಸ್ವಾಮಿಯೂ ನೆಲೆ ನಿಂತಿರೋದು ವಿಶೇಷ.

ಇಲ್ಲಿ ಪ್ರತಿದಿನ ಭಕ್ತರು ಬಂದು ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. ಮಕ್ಕಳಾಗದ ದಂಪತಿಗಳು ಬಂದು ಇಲ್ಲಿ ದೇವರ ಸೇವೆ ಮಾಡಿದ್ರೆ. ಮಕ್ಕಳಾಗುತ್ತೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಇಷ್ಟು ಮಾತ್ರ ಅಲ್ಲದೆ, ಚರ್ಮ ರೋಗ , ನಾಗ ದೋಷ , ಸೇರಿದಂತೆ ಹಲವು ಚರ್ಮ ವ್ಯಾಧಿಗಳಿಗೆ ಇಲ್ಲಿ ಪರಿಹಾರ ಸಿಗುತ್ತೆ ಅನ್ನೋ ನಂಬಿಕೆ ಇಲ್ಲಿನ ಜನರದ್ದು

ಇನ್ನು ಈ ದೇವಾಲಯ ಇಂದು ನಿನ್ನೆಯದಲ್ಲ. ಬದಲಾಗಿ ಇದಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಕೇರಳದ ಗಡಿ ಪ್ರದೇಶವಾದ ಪಡ್ರೆ ಗ್ರಾಮಕ್ಕೆ ಸೇರಿದ ದೇವಾಲಯವಾಗಿದ್ದು , ಶಡ್ತಿ ಮನೆತನದವರು ಈ ದೇವಾಲಯವನ್ನು ನಿರ್ಮಾಣ ಮಾಡಿದ್ರು ಎಂದು ಹೇಳಲಾಗುತ್ತೆ. ಆದರೆ ಕಾಲಕ್ರಮೇಣ ಆರ್ಥಿಕ ಸಂಕಷ್ಟದಿಂದಾಗಿ ದೇವಾಲಯ ಶಿಥಿಲಾವಸ್ಥೆ ತಲುಪಿ ಮಣ್ಣಿನಲ್ಲಿ ಹೂತು ಹೋಗಿತ್ತು. ಕಾಲಾನಂತರ ಸೈಪಂಗಲ್ಲ ಮನೆತನದವರು ಕೃಷಿ ಕೆಲಸದಲ್ಲಿ ತೊಡಗಿದಾಗ ಈ ದೇವಾಲಯದ ಅವಶೇಷಗಳು ಕಾಣಸಿಕ್ಕವು. ಮುಂದೆ ಊರವರ ಸಹಕಾರದಿಂದ ಮತ್ತೆ ಈ ಪುರಾತನ ಕಾರಣಿಕ ದೇವಾಲಯವನ್ನು ಪುನ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನ ವರೆಗೆ ಈ ದೇವಸ್ಥಾನ ಜನರ ನಂಬಿಕೆಯ ಕೇಂದ್ರವಾಗಿದೆ.

ಈ ದೇವಾಲಯದ ಮತ್ತೊಂದು ವಿಶೇಷ ಎಂದ್ರೆ ಇಲ್ಲಿ ನಡೆಯುವ ಸುಬ್ರಹ್ಮಣ್ಯ ಷಷ್ಠಿ. ಈ ಹಬ್ಬವನ್ನ ಜಾತ್ರೆಯ ರೂಪದಲ್ಲಿ ಆಚರಿಸಲಾಗುತ್ತೆ. ಅದೇ ದಿನ ಮಡೆ ಸ್ನಾನ, ಭೂತ ಕೋಲ ಸೇರಿದಂತೆ ಹಲವು ಆಚರಣೆಗಳನ್ನು ನಡೆಸಲಾಗುತ್ತೆ. ಬ್ರಾಹ್ಮಣರು ಸೇರಿದಂತೆ ಹರಕೆ ಹೇಳಿದ ಎಲ್ಲಾ ಜಾತಿಯ ಜನರು ಮಡೆ ಸ್ನಾನದಲ್ಲಿ ಭಾಗಯಾಗುತ್ತಾರೆ ಅನ್ನೋದು ವಿಶೇಷ. ಇನ್ನು ಈ ಮಡೆ ಸ್ನಾನ ಮಾಡೋದ್ರಿಂದ ದೇಹದ ರೋಗಗಳು ನಿವಾರಣೆ ಆಗುತ್ತೆ ಅನ್ನೋದು ಭಕ್ತರ ಅಂಬೋಣ. ಇಲ್ಲಿ ರಾತ್ರಿ ರಕ್ತೇಶ್ವರಿಯ ಭೂತ ಕೋಲವನ್ನು ನಡೆಸಲಾಗುತ್ತೆ. ಭೂತ ಕೋಲದಿಂದ ಸಾಕುಪ್ರಾಣಿಗಳ ರಕ್ಷಣೆ ಹಾಗೂ ರೋಗ ನಿವಾರಣೆ ಆಗುತ್ತೆ. ಜೊತೆಗೆ ಕೃಷಿ ಚಟುವಟಿಕೆ ಉತ್ತಮವಾಗುತ್ತೆ ಅನ್ನೋದು ಊರವರ ಅಭಿಪ್ರಾಯ

ಅಂದ ಹಾಗೆ ಈ ದೇವಾಲಯ ವಿರೋದು ಗಡಿಜಿಲ್ಲೆ ಅನ್ನಿಸಿಕೊಂಡಿರೋ ಕಾಸರಗೋಡು ಜಿಲ್ಲೆಯಲ್ಲಿ. ಕೇರಳದ ( Kerala ) ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದ ಚೇರ್ಕಬೆ ಶಾಸ್ತಾರ ಸುಬ್ರಹ್ಮಣ್ಯೇಶ್ವರ (Shastara Subrahmanyeswara) ದೇವಾಲಯವಿದು. ಕರಾವಳಿಯ ಸೋಗಡನ್ನು ತನ್ನಲ್ಲಿ ಮೈಗೂಡಿಸಿ ಕೊಂಡಿರೋ ದೇವಾಲಯ ಊರವ ಪಾಲಿನ ಶ್ರದ್ದಾ ಕೇಂದ್ರ. ಇಲ್ಲಿ ದಿನಕ್ಕೆ ಮೂರು ಬಾರಿ ಪೂಜೆ ನಡೆಯುತ್ತೆ. ಜೊತೆಗೆ ಆಶ್ಲೇಷ ಬಲಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳನ್ನು ಮಾಡಲಾಗುತ್ತೆ. ಕೋಟೆ ಮನೆತನದವರು, ಇದನ್ನು ನಡೆಸಿಕೊಂಡು ಬರುತ್ತಿದ್ದಾರೆ.


ಇಲ್ಲಿಗೆ ಹೋಗಬೇಕಾದ್ರೆ ಪುತ್ತೂರುನಿಂದ ಕಾಸರಗೋಡಿಗೆ ಹೋಗುವ ಮಾರ್ಗವಾಗಿ ಹೋಗಬೇಕು. ಪೆರ್ಲ ಎಂಬಲ್ಲಿವರೆಗೆ ಬಸ್ ವ್ಯವಸ್ಥೆ ಇದೆ . ಅಲ್ಲಿಂದ 5 ಕಿಲೋ ಮೀಟರ್ ದೂರದಲ್ಲಿದೆ ದೇವಾಲಯ. ಪೆರ್ಲದಿಂದ ಖಾಸಗಿ ವಾಹನದ ವ್ಯವಸ್ಥೆ ಮಾಡಿಕೊಂಡು ಅಲ್ಲಿಗೆ ನೀವು ತಲುಪಬಹುದು .

ತುಂಬಾ ಕಾರಣಿಕವನ್ನು ಹೊಂದಿರುವ ಈ ದೇವಾಲಯಕ್ಕೆ ನೀವು ಒಂದು ಬಾರಿಯಾದ್ರೂ ಬೇಟಿ ಮಾಡಲೇ ಬೇಕು . ಇಲ್ಲಿನ ಸೌಂದರ್ಯ, ಸಾತ್ವಿಕತೆ ಮನಸ್ಸಿಗೆ ಹಿತ ನೀಡುತ್ತದೆ. ಜೊತೆಗೆ ನಿಮ್ಮ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.

ಇದನ್ನೂ ಓದಿ : 800 ವರ್ಷಗಳಿಂದ ಈ ದೇವಾಲಯದಲ್ಲಿದೆ ಸಂತನೊಬ್ಬನ ದೇಹ : ವಿಸ್ಮಯ ಮಾಡ್ತಿದ್ದಾನೆ ಮಹಾವಿಷ್ಣು

ಇದನ್ನೂ ಓದಿ : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ

( Shastara Subrahmanyeswara who solves Naga Dosha and solves all problems )

Comments are closed.