Social Media Day: ಸೋಷಿಯಲ್ ಮೀಡಿಯಾ ದಿನ; ಹೀಗೊಂದು ವಿಶಿಷ್ಟ ದಿನದ ಬಗ್ಗೆ ನಿಮಗೆ ಗೊತ್ತಾ !

ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಮಾಧ್ಯಮವು (Social Media Day)ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಇತ್ತೀಚಿನ ಘಟನೆಗಳ ಬಗ್ಗೆ ಅತ್ಯಂತ ವೇಗವಾಗಿ ಮಾಹಿತಿ ನೀಡುವುದರಿಂದ ಹಿಡಿದು ನಮಗೆ ಮನರಂಜನೆ ನೀಡುವವರೆಗೆ, ಸಾಮಾಜಿಕ ಮಾಧ್ಯಮಗಳು(Social Media) ಎಲ್ಲೆಡೆ ಇಂದು ಕಂಡು ಬರುತ್ತಿವೆ. ಮುಖ್ಯವಾಗಿ, ಇದು ಜನರ ಸಂವಹನವನ್ನು ಸುಲಭಗೊಳಿಸಿದೆ.ಅಷ್ಟೇ ಅಲ್ಲದೆ ಹೊಸ ಜನರ ಜೊತೆ ಸಂವಹನ ನಡೆಸಲು ಸಾಧ್ಯವಾಗಿಸಿದೆ. ಅದಕ್ಕಾಗಿಯೇ ಪ್ರತಿ ವರ್ಷ ಜೂನ್ 30 ರಂದು ಪ್ರಪಂಚದಾದ್ಯಂತ “ಸಾಮಾಜಿಕ ಮಾಧ್ಯಮ ದಿನ”ವನ್ನು ಆಚರಿಸಲಾಗುತ್ತದೆ.

ಸಾಮಾಜಿಕ ಮಾಧ್ಯಮ ದಿನ: ಇತಿಹಾಸ ಮತ್ತು ಮಹತ್ವ
ಸಾಮಾಜಿಕ ಮಾಧ್ಯಮದ ಪ್ರಭಾವ ಮತ್ತು ವಿಶ್ವಾದ್ಯಂತ ಸಂವಹನದಲ್ಲಿ ಅದರ ಪಾತ್ರವನ್ನು ಎತ್ತಿ ಹಿಡಿಯಲು 30 ಜೂನ್ 2010 ರಂದು ಸಾಮಾಜಿಕ ಮಾಧ್ಯಮ ದಿನವನ್ನು ಪರಿಚಯಿಸಲಾಯಿತು. “ಸಿಕ್ಸ್ ಡಿಗ್ರೀಸ್ “1997 ರಲ್ಲಿ ಪ್ರಾರಂಭವಾದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಆಂಡ್ರ್ಯೂ ವೈನ್ರೀಚ್ ಸ್ಥಾಪಿಸಿದ ಈ ವೆಬ್‌ಸೈಟ್ ಮೂಲಕ, ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಪಟ್ಟಿ ಮಾಡಲು ಮತ್ತು ಬುಲೆಟಿನ್ ಬೋರ್ಡ್‌ಗಳು, ಶಾಲಾ ಸಂಬಂಧಗಳು ಮತ್ತು ಪ್ರೊಫೈಲ್‌ಗಳಂತಹ ಇತರ ವೈಶಿಷ್ಟ್ಯಗಳನ್ನು ಪ್ರವೇಶಿಸಲು ಸಾಧ್ಯವಾಯಿತು. ಸಿಕ್ಸ್‌ಡಿಗ್ರೀಸ್ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಒಟ್ಟುಗೂಡಿಸಿತು. ಆದರೆ ಅದು ಅಂತಿಮವಾಗಿ 2001 ರಲ್ಲಿ ಸ್ಥಗಿತಗೊಂಡಿತು.

ಆರಂಭದಲ್ಲಿ, ಫ್ರೆಂಡ್‌ಸ್ಟರ್, ಮೈಸ್ಪೇಸ್ ಮತ್ತು ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳನ್ನು ಜನರು ಸಂವಹನ ಮಾಡಲು ಬಳಸುತ್ತಿದ್ದರು. ಈಗ ಬದಲಾಗುತ್ತಿರುವ ಸಮಯದೊಂದಿಗೆ ಇನ್ಸ್ಟಾಗ್ರಾಮ್,ಸ್ನ್ಯಾಪ್ ಚಾಟ್ (Snapchat),ಟ್ವಿಟರ್ (Twitter) ನಂತಹ ಹೊಸ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಪರಿಚಯಿಸಲಾಗಿದೆ. ಈ ಪ್ಲಾಟ್‌ಫಾರ್ಮ್‌ಗಳು ಕೆಲವು ರೀತಿಯ ಕಾರ್ಯಗಳನ್ನು ಮತ್ತು ಕೆಲವು ವಿಶಿಷ್ಟ ಕಾರ್ಯಗಳನ್ನು ಯೂಸರ್ಸ್ ಜೊತೆ ಹಂಚಿಕೊಳ್ಳುತ್ತವೆ.

ಸಾಮಾಜಿಕ ಮಾಧ್ಯಮಗಳು ನಮ್ಮ ಜೀವನದಲ್ಲಿ ತೀವ್ರ ಬದಲಾವಣೆಯನ್ನು ತಂದಿವೆ. ಮೆಸೇಜಿಂಗ್ ಸೇವೆಯ ಅಪ್ಲಿಕೇಶನ್‌ಗಳ ಮೂಲಕ, ಮೈಲುಗಳಷ್ಟು ದೂರದಲ್ಲಿ ಕುಳಿತಿರುವ ವ್ಯಕ್ತಿಯೊಂದಿಗೆ ನಾವು ಇಂದು ಸುಲಭವಾಗಿ ಸಂಪರ್ಕಿಸಬಹುದಾಗಿದೆ . ಇದಲ್ಲದೆ, ಪ್ರಪಂಚದಾದ್ಯಂತ ಏನು ನಡೆಯುತ್ತಿದೆ ಎಂಬುದರ ಕುರಿತು ತಕ್ಷಣದ ಅಪ್ಡೇಟ್ ಪಡೆಯುವುದು ತುಂಬಾ ಸರಳವಾಗಿದೆ. ಜೊತೆಗೆ, ಸಾಮಾಜಿಕ ಮಾಧ್ಯಮವು ಎಲ್ಲರನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಸಂಬಂಧಗಳನ್ನು ನಿರ್ಮಿಸಲು ಜನರಿಗೆ ಸಹಾಯ ಮಾಡುತ್ತದೆ.

ನಮ್ಮ ಜೀವನದಲ್ಲಿ ಸಾಮಾಜಿಕ ಮಾಧ್ಯಮವು ವಹಿಸಿದ ಪಾತ್ರದ ಕುರಿತು ಕಥೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ನಾವು ಈ ದಿನವನ್ನು ಸ್ಮರಿಸಬಹುದು. ಈ ಹಿಂದೆ ಅಪ್ಲೋಡ್ ಮಾಡಿದ ಮೆಚ್ಚಿನ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ದಿನವನ್ನು ಆಚರಿಸಲು ಸಾಧ್ಯವಿದೆ. ಈ ಸಾಮಾಜಿಕ ಮಾಧ್ಯಮ ದಿನದಂದು ನಾವೆಲ್ಲರೂ ಒಗ್ಗೂಡಿ ಆನ್‌ಲೈನ್‌ನಲ್ಲಿ ಪ್ರೀತಿಯನ್ನು ಹರಡೋಣ.

ಇದನ್ನೂ ಓದಿ : 777 Charlie Movie:ಹಿಂದಿಗೆ ರಿಮೇಕ್ ಆಗಲಿದ್ಯಾ “777 ಚಾರ್ಲಿ” ? ಭಾರಿ ಬೇಡಿಕೆಯಲ್ಲಿದೆ ರಕ್ಷಿತ್ ಚಿತ್ರ

(Social Media Day 2022 know the history and significance)

Comments are closed.