ಇದು ಜಗತ್ತಿನ ಮೊದಲ ಜೋರ್ತಿಲಿಂಗ- ದೇವಾಲಯಕ್ಕೆ ಚಂದ್ರನೇ ನಿರ್ಮಾತೃ

Somnath Jyotirling Temple : 12 ಜೋರ್ತಿಲಿಂಗ ಗಳನ್ನು ದರ್ಶನ ಮಾಡಿದ್ರೆ , ನಮಗೆ ಮುಕ್ತಿ ದೊರಕಿದಂತೆ ಎಂಬ ನಂಬಿಕೆ ನಮ್ಮಲ್ಲಿದೆ . ಅಂತಹಃ ಜೋರ್ತಿಲಂಗದಲ್ಲಿ ಮೊದಲು ಸ್ಥಾಪಿತವಾದ ಜೋರ್ತಿಲಿಂಗ ಯಾವುದು ಅಂತ ನಿಮಗೆ ಗೊತ್ತಾ? ಗುಜರಾತ್ ರಾಜ್ಯದ ಸೋಮನಾಥ ದೇವಾಲಯ. ಸೋಮನಾಥವನ್ನು ಜೋರ್ತಿಲಿಂಗಗಳ ಪೈಕಿ ಮೊದಲನೇ ಜೋರ್ತಿಲಿಂಗ ಎಂದು ಕರೆಯಲಾಗುತ್ತೆ .

Somnath Jyotirling Temple  : ಮಹಾದೇವ ಕಾಲಭೈರವ ಹೀಗೆ ನಮ್ಮ ಶಂಕನನ್ನು ಕರೆಯುತ್ತಾರೆ. ಮೃತ್ಯು ಹರ , ಸ್ಮಶಾನ ವಾಸಿ ಅಂತಾನೆ ಕರೆಸಿಕೊಳ್ಳುವ ಶಿವನಿಗೆ ನಮ್ಮಲ್ಲಿ ವಿಶೇಷವಾದ ಸ್ಥಾನವಿದೆ. ಇನ್ನು ಶಿವನ ಸ್ವತಹಃ ರೂಪವೇ ಅನ್ನಿಸಿಕೊಂಡಿರೋ 12 ಜೋರ್ತಿಲಿಂಗ ಗಳನ್ನು ದರ್ಶನ ಮಾಡಿದ್ರೆ , ನಮಗೆ ಮುಕ್ತಿ ದೊರಕಿದಂತೆ ಎಂಬ ನಂಬಿಕೆ ನಮ್ಮಲ್ಲಿದೆ . ಅಂತಹಃ ಜೋರ್ತಿಲಂಗದಲ್ಲಿ ಮೊದಲು ಸ್ಥಾಪಿತವಾದ ಜೋರ್ತಿಲಿಂಗ ಯಾವುದು ಅಂತ ನಿಮಗೆ ಗೊತ್ತಾ?

Somnath Jyotirling Temple in Gujarat This is the world's first Jortilinga-temple built by the moon
Image Credit To Original Source

ಹೌದು ಇದು ಶಿವನ ಜೋರ್ತಿಲಿಂಗದಲ್ಲಿ ಪ್ರಥಮವಾಗಿ ಸ್ಥಾಪನೆಯಾದ ಲಿಂಗವಂತೆ. ಇದನ್ನು ಸ್ವತ: ದೇವತೆ ಯೊಬ್ಬ ನಿರ್ಮಿಸಿದ್ದ ಸ್ಥಾಪಿಸಿದ್ದ. ಆದ್ರೆ ದುರಾದೃಷ್ಟ ಅಂದ್ರೆ ಇದು ಹೆಚ್ಚು ಸಾರಿ ಕೆಡವಲ್ಪಟ್ಟ ಜೋರ್ತಿಲಿಂಗವೂ ಹೌದು. ಇಲ್ಲಿ ಬಂದು ಈ ದೇವಾಲಯವನ್ನು ಕೆಡವಲು ಯತ್ನಿಸಿದವರಿಗೆ ಲೆಕ್ಕವೇ ಇಲ್ಲ.

ಆದರೆ ಶಿವನ ಕೃಪೆಯೋ ? ಭಕ್ತರ ಭಕ್ತಿಯೋ ! ಅದು ಮತ್ತೆ ಮತ್ತೆ ಭಕ್ತರಿಗಾಗಿ ತಲೆ ಎತ್ತಿ ನಿಂತಿದೆ . ಅದೇ ನಮ್ಮ “ಸೌರಾಷ್ಟ್ರ ಸುಂದರಂ” ಅನ್ನಿಸಿಕೊಂಡಿರುವ ಗುಜರಾತ್ ರಾಜ್ಯದ ಸೋಮನಾಥ ದೇವಾಲಯ. ಸೋಮನಾಥವನ್ನು ಜೋರ್ತಿಲಿಂಗಗಳ ಪೈಕಿ ಮೊದಲನೇ ಜೋರ್ತಿಲಿಂಗ ಎಂದು ಕರೆಯಲಾಗುತ್ತೆ .

ಇದನ್ನು ಸ್ವತಃ ಚಂದ್ರನೇ ಸ್ಥಾಪನೆ ಮಾಡಿರೋದ್ರಿಂದ ಇದನ್ನು ಸೋಮನಾಥ ಮಂದಿರ ಅಂತಾನೂ ಕರೆಯುತ್ತಾರೆ. ಇಲ್ಲಿ ಸೋಮ ಅಂದ್ರೆ ಚಂದ್ರನ ಮತ್ತೊಂದು ಹೆಸರು . ಸ್ಥಳ ಪುರಾಣದ ಪ್ರಕಾರ ಪ್ರಜಾಪತಿಯಾಗಿದ್ದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿದ್ದ.

Somnath Jyotirling Temple in Gujarat This is the world's first Jortilinga-temple built by the moon
Image Credit To Original Source

ಆದ್ರೆ ಚಂದ್ರ ಮಾತ್ರ ರೋಹಿಣಿ ಎಂಬ ಪ್ರತ್ನಿಯನ್ನು ಅತಿಯಾಗಿ ಮೋಹಿಸುತ್ತಿದ್ದ . ಇದರಿಂದ ಕೊಪಗೊಂಡ ದಕ್ಷನು ಕ್ಷಯವಾಗುವಂತೆ ಶಾಪ ನೀಡಿದ. ನಂತರ ದಿನೇ ದಿನೇ ಚಂದ್ರ ತನ್ನ ಹೊಳಪು ಕಳೆದುಕೊಂಡಂತೆ ಬ್ರಹ್ಮಾಂಡದಲ್ಲಿ ತೊಂದರೆ ಉಂಟಾಗ ತೊಡಗಿತು. ಆಗ ಬ್ರಹ್ಮ ದೇವನು ಪ್ರಭಾಸಕ್ಕೆ ಹೋಗಿ ಕಪಿಲಾ, ಹೀರಾ ಸರಸ್ವತಿ ನದಿಯ ಸಂಗಮಕ್ಕೆ ತೆರಳಿ ಶಿವನ ಕುರಿತು ಕಠೋರ ತಪಸ್ಸನ್ನು ಮಾಡುವಂತೆ ಸಲಹೆ ನೀಡಿದನು.

ಇದನ್ನೂ ಓದಿ :

ಚಂದ್ರ ಹೀಗೆ 1 ಕೋಟಿ ಮೃತ್ಯುಂಜಯ ಮಂತ್ರ ಪಠಿಸಿದಾಗ ಶಿವ ಪ್ರತ್ಯಕ್ಷನಾಗಿ ತಿಂಗಳ ಪಕ್ಷದಲ್ಲಿ ಕ್ಷೀಣನಾಗಿ ಮತ್ತೆ ಹೊಳಪು ಬರುವಂತೆ ಅನುಗ್ರಹಿಸಿದ ಅನ್ನೋ ನಂಬಿಕೆ ಇದೆ. ಅಂದೇ ಇಂದು ಹುಣ್ಣಿಮೆಯಿಂದ ಅಮವಾಸ್ಯೆಯ ನಡುವೆ ನಡೆಯುವ ಚಂದ್ರನ ಕೌತುಕ. ಅಂದಿನಿಂದ ಲಿಂಗರೂಪದಲ್ಲಿ ಶಿವ ಇಲ್ಲಿ ಸ್ಥಿತನಾದ ಅಂತನೂ ನಂಬಲಾಗುತ್ತೆ . ಇನ್ನು ಈ ಲಿಂಗದಲ್ಲಿ ಬ್ರಹ್ಮ ಹಾಗೂ ಶಿವ ಸಾನಿಧ್ಯವಿದೆ ಅಂತ ಭಕ್ತರು ಹೇಳುತ್ತಾರೆ.

ದಾಳಿಯಿಂದ ತತ್ತರಿಸಿದ ಸೋಮನಾಥ :

ಸೋಮನಾಥ ದೇವಾಲಯದ ಕುರಿತು ಹೇಳೋದಾದ್ರೆ ಭಾರತದಲ್ಲಿ ಅತಿ ಹೆಚ್ಚು ಧಾಳಿಗೆ ಒಳಗಾದ ದೇವಾಲಯ ಅಂತಾನು ಹೇಳಲಾಗುತ್ತೆ. ಇತಿಹಾಸದಲ್ಲಿ ಕೇಳುವಂತ ಘಜ್ನಿ ಎಂಬ ಮತಾಂಧ ರಾಜ ಇದನ್ನು ಹಲವು ಬಾರಿ ನಾಶ ಮಾಡಲು ಯತ್ನಿಸಿದ್ದ . ಹಾಗೂ ಅಲ್ಲಿ ಇರಲಾಗಿತ್ತು ಅಂತ ನಂಬಲಾಗುವ ಸಾವಿರಾರು ಟನ್ ಚಿನ್ನವನ್ನು ಹೊತ್ತೊಯ್ದಿದ್ದ ಅಂತ ಇತಿಹಾಸಕಾರರು ಹೇಳುತ್ತಾರೆ. ನಂತರ ಬಂದ ಮೊಘಲ್ ಅರಸರೂ ಕೂಡಾ ಇದರ ಧ್ವಂಸಕ್ಕೆ ಯತ್ನಿಸಿದ್ರು .

ಇನ್ನು ಕೆಲವು ಇತಿಹಾಸಕಾರರ ಪ್ರಕಾರ ಇದನ್ನು ಚಾಲುಕ್ಯರ ರಾಜ ಸ್ಥಾಪಿಸಿದ್ದ ಅನ್ನೋ ಮಾತು ಕೂಡಾ ಇದೆ. ಆದ್ರೆ ಸಾವಿರಾರು ವರ್ಷಗಳ ಹಿಂದೆ ನಿರ್ಮಿತವಾದ ಹಿಂದೂ ಪುರಾಣಗಳಲ್ಲಿ ಈದೇವಾಲಯದ ವರ್ಣನೆ ಯನ್ನು ನಾವು ಕಾಣಬಹುದು.ದ್ವಾಪರದ ಕೃಷ್ಣನ ಕಾಲದಲ್ಲಿ ಈದೇವಾಲಯ ವಿತ್ತು ಅನ್ನೋದನ್ನು ಮಹಾಭಾರತ ಗ್ರಂಥ ಹೇಳುತ್ತೆ. ಇನ್ನು ಈಗ ಸದ್ಯ ನಿರ್ಮಿತವಾಗಿರೋ ದೇವಾಲಯವನ್ನು ಇಂದೋರ್ ನ ಮಹಾರಾಣಿ ಅಹಲ್ಯ ಗೋಲ್ಕರ್ ಪುನರ್ ನಿರ್ಮಾಣ ಮಾಡಿದ್ರು ಅಂತ ನಂಬಲಾಗುತ್ತೆ.

ಇದನ್ನೂ ಓದಿ : 10,000 ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 4.4 ಲಕ್ಷ ರೂ. : ಅಂಚೆ ಇಲಾಖೆಯಿಂದ ಹೊಸ ಯೋಜನೆ

ಇನ್ನು ಇಲ್ಲಿಯ ಮತ್ತೊಂದು ವಿಶೇಷ ಅಂದ್ರೆ ದೇವಾಲಯದ ಪ್ರಾಂಗಣದಲ್ಲಿ ಸ್ಥಾಪಿತವಾದ ಸ್ಥಂಭ. ಈ ಸ್ಥಂಭದ ತುದಿಯಲ್ಲಿ ಸಮುದ್ರಕ್ಕೆ ಮುಖಮಾಡಿ ಒಂದು ಬಾಣವಿದೆ. ಹೀಗಾಗಿ ಇದನ್ನು ಬಾಣಸ್ಥಂಭ ಅಂತನೂ ಕರೆಯುತ್ತಾರೆ. ಇದರಲ್ಲೇನು ವಿಶೇಷ ಆಂತ ನೀವು ಅಂದುಕೊಳ್ಳಬಹುದು . ಅದೇನಂದ್ರೆ ಇಲ್ಲಿ ಸ್ಥಾಪಿತವಾದ ಕಂಬದ ತಳದಲ್ಲಿ ಒಂದು ಬರಹವಿದೆ.

Somnath Jyotirling Temple in Gujarat This is the world's first Jortilinga-temple built by the moon
Image Credit To Original Source

ಅದೇನಂದ್ರೆ ಈ ಬಿಂದುವಿನಿಂದ ದಕ್ಷಿಣ ದೃವದ ವರೆಗೆ ಒಂದು ಜೋರ್ತಿ ಮಾರ್ಗವಿದೆ ಎಂದು. ಇದರ ಅರ್ಥ ಅಲ್ಲಿಯ ವರೆಗೆ ನಡುವಿನಲ್ಲಿ ಯಾವುದೇ ಭೂ ಬಾಗವಿಲ್ಲ ಎಂಬುದು. ಈ ಸ್ಥಂಭವನ್ನು ಸಾವಿರಾರು ವರ್ಷದ ಹಿಂದೆಯೇ ನಿರ್ಮಿಸಲಾಗಿತ್ತು ಅಂತ ನಂಬಲಾಗುತ್ತೆ. ಹಾಗಾದ್ರೆ ನಮ್ಮ ಪೂರ್ವಿಕರಿಗೂ ನಕ್ಷೆ ಹಾಗೂ ಭೂಮಿಯ ಜ್ಞಾನ ಈ ಮಟ್ಟಗೆ ಇತ್ತಾ ಅನ್ನೋ ಯೋಚನೆ ಬರದೇ ಇರದು.

ಇದನ್ನೂ ಓದಿ : ಉಡುಪಿ ಶ್ರೀಕೃಷ್ಣ ಮಠದ ಗೂಗಲ್‌ ಮ್ಯಾಪ್‌ ಲೋಕೇಶನ್‌ ಬದಲಾಯಿಸಿದ ಗೂಗಲ್‌ ಸಂಸ್ಥೆ

ಇನ್ನು ಇಲ್ಲಿಗೆ ನೀವು ಹೋಗೋದಾದ್ರೆ ಇಲ್ಲಿಗೆ ಹೋಗೋಕೆ ಕೇಂದ್ರ ಸರ್ಕಾರ ವಿಶೇಷ ಸವಲತ್ತನ್ನು ಮಾಡಿಕೊಟ್ಟಿದೆ. ದೇವಾಲಯದ ಅಂದವನ್ನು ಸವಿಯೋಕೆ ಕಾರಿಡಾರ್ ವ್ಯವಸ್ಥೆ ಕೂಡಾ ಮಾಡಲಾಗಿದೆ. ಒಂದು ಸಾರಿ ಇಲ್ಲಿ ಭೇಟಿ ನೀಡಿ ನಮ್ಮ ದೇಶದ ಸಂಸ್ಕೃತಿಯ ಸವಿಯನ್ನು ಸವಿಯಿರಿ ಅನ್ನೋದೇ ನಮ್ಮ ಬಯಕೆ.

Somnath Jyotirling Temple in Gujarat This is the world’s first Jortilinga-temple built by the moon

Comments are closed.