ಕುಕ್ಕೆಯಲ್ಲಿ ಶಿವರಾತ್ರಿ ಆಚರಣೆ ಇಲ್ಲ…! ಶಿವರಾತ್ರಿಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್…!!

ಕುಕ್ಕೆ ಸುಬ್ರಹ್ಮಣ್ಯ : ರಾಜ್ಯದ ಶ್ರೀಮಂತ ದೇಗುಲವೆಂಬ ಖ್ಯಾತಿಗೆ ಪಾತ್ರವಾಗಿದ್ದ ರಾಜ್ಯದ ಪವಿತ್ರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಎರಡು ಪಂಥಗಳ ನಡುವಿನ ಗುದ್ದಾಟ ಶಿವರಾತ್ರಿ ಆಚರಣೆಗೆ ತಡೆ ತಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿರೋ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಶಿವರಾತ್ರಿ ಆಚರಣೆಗೆ ಸಿದ್ದತೆ ನಡೆದಿತ್ತು. ಆದರೆ ಕುಕ್ಕೆ ಯಲ್ಲಿ ವಿಶೇಷ ಶಿವರಾತ್ರಿ ಆಚರಣೆಗೆ ಹೈಕೋರ್ಟ್ ಸ್ಟೇ ನೀಡಿದೆ.

ಕುಕ್ಕೆಯಲ್ಲಿ ಶೈವರು ಮತ್ತು ಮಧ್ವರ ನಡುವೆ ಭಿನ್ನಾಭಿಪ್ರಾಯ ಇದೆ. ಹೀಗಿದ್ದರೂ ಧಾರ್ಮಿಕದತ್ತಿ ಇಲಾಖೆ ವಿಶೇಷವಾಗಿ ಶಿವರಾತ್ರಿ ಆಚರಿಸಿ ಪೂಜಾ ಕೈಂಕರ್ಯ ನಡೆಸಲು ಅವಕಾಶ ಕಲ್ಪಿಸಿತ್ತು.

ಹೀಗಾಗಿ ಶಿವರಾತ್ರಿ ವೇಳೆ ಲ್ವಾರ್ಚನೆ, ರುದ್ರಪಾರಾಯಣ, ರುದ್ರಹೋಮ ಹಮ್ಮಿಕೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಮೂಲದ ಮುರುಳಿಧರ್ ಹಾಗೂ ವಿಜಯಸಿಂಹಾಚಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ಪರಿಶೀಲನೆ ನಡೆಸಿದ ಹೈಕೋರ್ಟ್ ಹಳೆ ಸಂಪ್ರದಾಯದಂತೆ ನವರಾತ್ರಿ ಆಚರಿಸಿ, ಆದರೆ ಹೊಸ ಸಂಪ್ರದಾಯ ಬೇಡ ಎಂದಿದೆ.

Comments are closed.