Tirupathi New Rules : ತಿಮ್ಮಪ್ಪನ ಭಕ್ತರಿಗೆ ಹೊಸ ರೂಲ್ಸ್‌ ! ನಿಯಮ ಪಾಲಿಸದಿದ್ದರೆ ತಿಮ್ಮಪ್ಪನ ದರ್ಶನವೇ ಇಲ್ಲ

ತಿರುಪತಿ : ತಿಮ್ಮಪ್ಪನ ದರ್ಶನ ಭಾಗ್ಯಕ್ಕಾಗಿ ಸಾವಿರಾರು ಭಕ್ತರು ಕಾಯುತ್ತಿದ್ದಾರೆ. ಆದರೆ ಈ ಕೊರೊನಾ ಸಮಯದಲ್ಲಿ ಸರಕಾರದಿಂದ ಸಾಕಷ್ಟು ನಿರ್ಭಂದಗಳು ಇರುವುದರಿಂದ ಹೆಚ್ಚು ಜನ ಜಂಗೂಳಿ ಸೇರುವಂತಿಲ್ಲ. ಅಲ್ಲದೇ ಒಂದೆಡೆ ಕೊರೊನಾದ ಭಯ ಕೂಡ ಜನರನ್ನೂ ಕಾಡುತ್ತಿದೆ. ಈ ಭಯಕ್ಕೆ ಟಿಟಿಡಿ ಈಗ ಪರಿಹಾರವನ್ನೂ ಹುಡುಕಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ಟಿಟಿಡಿ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಇನ್ನು ಮುಂದೆ ಕೊವಿಡ್ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ.

ಇದನ್ನೂ ಓದಿ: ಸಿಂಗದೂರು ಶ್ರೀ ಚೌಡೇಶ್ವರಿ ಕ್ಷೇತ್ರದ ನವರಾತ್ರಿ ಉತ್ಸವ : ಭಕ್ತರು ಈ ನಿಯಮ ಪಾಲಿಸಲೇ ಬೇಕು

ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರು ಎರಡೂ ಡೋಸ್ ಲಸಿಕೆ ಅಥವಾ ಕೊರೊನಾ ನೆಗೆಟಿವ್ ವರದಿಯನ್ನು ನೀಡುವುದು ಕಡ್ಡಾಯವಾಗಿದ್ದು, ಅಕ್ಟೋಬರ್ 1ರಿಂದ ಈ ಹೊಸ ನಿಯಮ ಜಾರಿಯಾಗಲಿದೆ.

ಇದನ್ನೂ ಓದಿ: ತಿರುಪತಿ ಭಕ್ತರಿಗೆ ಗುಡ್‌ ನ್ಯೂಸ್‌ : ಇಂದಿನಿಂದ ಉಚಿತ ಸರ್ವ ದರ್ಶನ ಟೋಕನ್‌ ವಿತರಣೆ

(New Rules for Thimappa’s devotees! If the rule is not followed, there is no vision of Thimappa)

Comments are closed.