ಹಸಿವೇ ತಡೆಯೋದಿಲ್ಲ ಶೀಕೃಷ್ಣ: ಬಾರಿ, ಬಾರಿ ನಡೆಯುತ್ತೆ ನೈವೇದ್ಯ ಸೇವೆ, ಕೈ ಮುಗಿದ್ರೆ ಬರೋದಿಲ್ಲ ಊಟಕ್ಕೆ ಕುತ್ತು

Thiruvarppu Sri Krishna Temple : ಹಸಿವು . ಇದರ ಅನುಭವ ಆಗದವರೇ ಇರಲಿಕ್ಕಿಲ್ಲ .. ಹಸಿವು ನೀಗಿಸೋಕೆ ಎಲ್ಲಾ ಪ್ರಾಣಿಗಳು ಹೋರಾಟ ನಡೆಸೋದು. ಊಟ ಸಿಗಲಿಲ್ಲ ಅಂದ್ರೆ ಪ್ರಾಣನೇ ಉಳಿಯೋದಿಲ್ಲ. ಅಗೆಲ್ಲಾ ನಾವು ದೇವರೆ ನಮ್ಮ ಹಸಿವು ನೀಗಿಸಪ್ಪಾ ಅಂತ ದೇವರನ್ನು ಬೇಡಿಕೊಳ್ಳುತ್ತೀವೆ. ಆದ್ರೆ ಅಂತಹ ದೇವರಿಗೆ ಹಸಿವನ್ನು ತಡೆದುಕೊಳ್ಳುದಕ್ಕೆ ಆಗಲ್ಲ ಅಂದ್ರೆ ನೀವು ನಂಬುತ್ತೀರ ? ಹೌದು ನೀವು ನಂಬಲೇ ಬೇಕು ಇಲ್ಲಿ ನೆಲೆಸಿರುವ ಪರಮಾತ್ಮನಿಗೆ ಹಸಿವು ತಡೆಯೋ ಶಕ್ತಿನೇ ಇಲ್ಲ ಹೀಗಾಗಿ ದಿನಕ್ಕೆ 10 ಬಾರಿ ಇಲ್ಲಿನ ಆರಾದ್ಯನಿಗೆ ನೈವೇದ್ಯವನ್ನು ಸಲ್ಲಿಸಲಾಗುತ್ತೆ. ಯಾವುದೇ ಕಾರಣವಾದ್ರೂ ನೈವೇದ್ಯ ನೀಡುವ ವೇಳೆಯನ್ನು ತಪ್ಪಿಸುವಂತಿಲ್ಲ. ಈ ಆಚರಣೆ ತಪ್ಪಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತಾರೆ ಭಕ್ತರು. ಹೀಗಾಗಿ ಇಲ್ಲಿ ಭಕ್ತನಿಗೂ ಹಸಿವಿನ ಸಂಕಟದಿಂದ ನಿವಾರಿಸುತ್ತಾನೆ ಅನ್ನೋ ನಂಬಿಕೆ ಇಲ್ಲಿಯ ಜನರಲ್ಲಿದೆ.

ಈ ದೇವಾಲಯದಲ್ಲಿ ಹಸಿವೆಗೆ ಇಷ್ಟು ಪ್ರಾಮುಖ್ಯತೆ ಇರೋಕೆ ಕಾರಣ ಇಲ್ಲಿ ನೆಲೆ ನಿಂತಿರುವ ಶ್ರೀ ಕೃಷ್ಣ ಪರಮಾತ್ಮ . ಇಲ್ಲಿ ಅನ್ನ ಸ್ವರೂಪನಾದ ಭಗವಂತ ನು ನಿತ್ಯವೂ ಬಳಲಿದಂತೆ ಇರುತ್ತಾನಂತೆ . ಹೀಗಾಗಿ ಆತನ ಹಸಿವನ್ನು ನೀಗಿಸೋಕೆ ಈ ದೇವಾಲಯ ದಿನದ 23 ಗಂಟೆ 58 ನಿಮಿಷ ಹಾಗೂ ವರ್ಷದ 365 ದಿನವೂ ತೆರೆದೇ ಇರುತ್ತೆ. ಯಾವುದೇ ಗ್ರಹಣದ ಸಂಧರ್ಭದಲ್ಲಿ ಕೂಡಾ ಈ ದೇವಾಲಯವನ್ನು ಮುಚ್ಚಲಾಗುವುದಿಲ್ಲ.

ಇನ್ನು ಇಲ್ಲಿ ಬಾಗಿಲು ಮುಚ್ಚೋದು ಅಂದ್ರೆ ಅದು ದಿನಕ್ಕೆ ಕೇವಲ 2 ನಿಮಿಷ ಅಂದ್ರೆ ಅದು ರಾತ್ರಿ 11.58 ರಿಂದ 12 ಗಂಟೆ ವರೆಗೆ ಮಾತ್ರ. ಇದೇ ಕಾರಣಕ್ಕೆ ಇಲ್ಲಿ ದೇವಾಲಯದ ಅರ್ಚರ ಕೈಗೆ ದೇವಾಲಯದ ಬೀಗದ ಜೊತೆ ಕೊಡಲಿಯನ್ನು ನೀಡಲಾಗುತ್ತೆ. ಆಸ್ಮಿಕವಾಗಿ ಬಾಗಿಲು ತೆಗೆಯಲು ವಿಳಂಬವಾದ್ರೆ ಬಾಗಿಲು ಒಡೆಯುವ ಅಧಿಕಾರ ಅರ್ಚಕರಿಗೆ ಇರುತ್ತೆ .
ಇನ್ನು ಇಲ್ಲಿ ಶ್ರೀಕೃಷ್ಣನ ಹಸಿವು ಎಷ್ಟಿದೆ ಅಂದ್ರೆ , ನಿತ್ಯ ಅಭಿಷೇಕ ಮಾಡಿದ ನಂತರ ಕೇವಲ ತಲೆಯ ಭಾಗವನ್ನಷ್ಟೇ ಒರೆಸಿ ನೈವೇದ್ಯ ಸಲ್ಲಿಸಲಾಗುತ್ತೆ, ನೈವೇದ್ಯದ ಸಲ್ಲಿಸಿದ ನಂತರವೇ ದೇವರ ದೇಹವನ್ನು ಒಣಗಿಸುವ ವ್ಯವಸ್ಥೆ ಮಾಡಲಾಗುತ್ತೆ. ಯಾಕಂದ್ರೆ ಇಲ್ಲಿ ದೇವರು ಅಷ್ಟು ಕಾಲ ಹಸಿವನ್ನು ತಡೆಯಲಾರ ಅನ್ನೋದು ಇಲ್ಲಿನ ಭಕ್ತರ ನಂಬಿಕೆ .
ಹೀಗೊಂದು ನಂಬಿಕೆ ಬರೋದಕ್ಕೆ ಕಾರಣವನ್ನು ಭಕ್ತರಲ್ಲಿ ಕೇಳಿದ್ರೆ, ಕಂಸ ಸಂಹಾರದ ನಂತರ ಕೃಷ್ಟ ತುಂಬಾ ಬಳಲಿದ್ದ, ಹಾಗೂ ಹಸಿವಿನಿಂದ ತತ್ತರಿಸಿದ . ಅದೇ ರೂಪದಲ್ಲಿ ಇಲ್ಲಿ ನೆಲೆ ನಿಂತಿದ್ದಾನೆ. ಹೀಗಾಗಿ ಇಲ್ಲಿನ ಭಗವಂತನಿಗೆ ನಿತ್ಯ ಹಸಿವು ಇರುತ್ತೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ.

ಇನ್ನು ಈ ದೇವಾಲಯಕ್ಕೆ 1500 ವರ್ಷದ ಇತಿಹಾಸವಿದೆ. ಇಲ್ಲಿ ಹೇಳುವ ಪ್ರಕಾರ ಪಾಂಡವರು ಈ ವಿಗ್ರಹವನ್ನು ವನವಾಸದ ಸಮಯದಲ್ಲಿ ಆರಾಧಿಸುತ್ತಿದ್ದರು . ತದನಂತರ ಕಾಡಿನಲ್ಲಿ ವಾಸವಿದ್ದ ನಿವಾಸಿಗಳಿಗೆ ನೀಡಿದ್ರು . ಆದರೆ ಕಾರಣಾಂತರದಿಂದ ಆ ವಿಗ್ರಹವು ಪೂಜೆಗೊಳಪಡದೇ ಸಮುದ್ರದಲಿ ಬಿಡಲಾಯಿತು . ಮುಂದೆ ಹಲವು ವರ್ಷಗಳ ನಂತರನ ಸಾಧು ಒಬ್ಬರಿಗೆ ನದಿಯಲ್ಲಿ ಸಂಚರಿಸುವಾಗ ಈ ವಿಗ್ರಹ ಸಿಕ್ಕಿದೆ. ಆ ಸಾಧುವು ಅದನ್ನು ಯಾವುದೇ ವಿಗ್ರಹ ವಿಲ್ಲದೇ ಇದ್ದ ಈ ದೇವಾಲಯದಲ್ಲಿ ಸ್ಥಾಪಿಸಿದ್ರು . ಅನ್ನೋದು ಇಲ್ಲಿನ ಸ್ಥಳೀಯರ ನಂಬಿಕೆ. ಇಲ್ಲಿ ದೇವರ ವಿಗ್ರಹವು ನಾಲ್ಕು ಭುಜವನ್ನು ಹೊಂದಿದ್ದು, ಪಶ್ಚಿಮಕ್ಕೆ ಮುಖಮಾಡಿ ನೆಲೆ ನಿಂತಿದ್ದಾನೆ.

ಇಲ್ಲಿನ ಮತ್ತೊಂದು ವಿಶೇಷವೆಂದ್ರೆ ಇಲ್ಲಿ ದೇವರ ನೈವೇದ್ಯಕ್ಕಾಗಿ ಬಳಸುವ ಪಾತ್ರೆಯು ಪಾಂಡವರು ಬಳಸಿದ ಅಕ್ಷಯ ಪಾತ್ರೆ ಅಂತಾನೂ ಕೆಲವರು ಹೇಳುತ್ತಾರೆ. ಈ ಪಾತ್ರೆಯು ಇಲ್ಲಿನ ವಿಗ್ರಹ ಜೊತೆಯಲ್ಲೇ ಬಂತೆಂದು ಹೇಳಲಾಗುತ್ತೆ. ಮತ್ತೊಂದೆಡೆ ಇಲ್ಲೊಂದು ಡೋಲು ಕೂಡಾ ಇದ್ದು ಇದನ್ನು ಕಂಸ ಸಂಹಾರದ ವೇಳೆ ಕಂಸನಿಗೆ ಎಚ್ಚರಸಲು ಬಳಸಿದ್ದ ಅನ್ನೋ ನಂಬಿಕೆ ಒಂದಿದೆ. ಇಷ್ಟು ಮಾತ್ರವಲ್ಲ ದೇವಾಲದಲ್ಲಿ ಸಂಜೆ ಯಾಗುತ್ತಲೇ ಒಂದು ಸುಂದರ ದೃಶ್ಯವೊಂದು ಕಾಣೋಕೆ ಸಿಗುತ್ತೆ . ಅದೇನು ಗೊತ್ತಾ. ೧೦ ವರ್ಷದ ಒಳಗಿನ ಹೆಣ್ಣು ಮಕ್ಕಳು ಇಲ್ಲಿ ಕೃಷ್ಣನ ವೇಷಧರಿಸಿ ಕೃಷ್ಣನಿಗೆ ದೀಪವನ್ನು ಹಚ್ಚಿ ನರ್ತನ ಮಾಡುತ್ತಾರೆ. ಇನ್ನು ಇಲ್ಲಿ ಕೃಷ್ಣನಿಗೆ ಪ್ರಸಾದ ರೂಪದ ಎಳನೀರು ಹಾಗೂ ಮಾವಿನ ಕಾಯಿಯ ಉಪ್ಪಿನಕಾಯಿಯನ್ನು ಅರ್ಪಿಸಲಾಗುತ್ತೆ

ಅಂದಹಾಗೆ ಇಂತಹ ವಿಸ್ಮಯವನ್ನು ಒಳಗೊಂಡ ಅಪರೂಪ ದೇವಾಲಯ ಇರೋದು ದೇವರ ನಾಡು ಅನ್ನಿಸಿಕೊಂಡಿರೋ ಕೇರಳದಲ್ಲಿ . ಕೇರಳದ ಕೊಟ್ಟಯಂನ ತಿರುವರ್ಪು ಗ್ರಾಮದಲ್ಲಿ ಶ್ರೀ ಕೃಷ್ಣ ನೆಲೆ ನಿಂತಿದ್ದಾನೆ . ಕೊಟ್ಟಾಯಂ ನಿಂದ 7 ಕಿಲೋ ಮೀಟರ್ ದೂರದಲ್ಲಿದೆ ಈ ದೇವಾಲಯ. ಕೊಟ್ಟಾಯಂ ತನ ಕ ರೈಲು ಸೌಲಭ್ಯವಿದ್ದು , ಅಲ್ಲಿಂದ ಮುಂದೆ ಸಾಗಲು ಸಾರಿಗೆ ವ್ಯವಸ್ಥೆ ಇದೆ. ಇನ್ನು ವಿಮಾನದಲ್ಲಿ ಸಂಚರಿಸುದಾದರೆ ಕೊಚ್ಚಿನ್ ವಿಮಾನ ಸಾಮಾನ್ಯ ಹತ್ತಿರದ ಏರ್ ಪೋರ್ಟ್ ಆಗಿದೆ. ಅಲ್ಲಿಂದ ತಿರುವರ್ಪು ಗೆ 90 ಕಿ ಮೀ ದೂರವಿದೆ.

ಇದನ್ನೂ ಓದಿ : Neelavara kshethra: ಶಂಕಚೂಡನ ಪಂಚಮ ಪುತ್ರಿಯಾದ ನಾಗರತಿ ಮಹಿಷಮರ್ಧಿನಿಯಾಗಿ ನೆಲೆನಿಂತ ಕಥೆ..!

ಇದನ್ನೂ ಓದಿ : Shri kshetra mandarthi: ನಾಗಲೋಕದ ರಾಣಿ ಮಂದರತಿ ದುರ್ಗಾಪರಮೇಶ್ವರಿಯಾದ ರೋಚಕ ಹಿನ್ನಲೆ

Comments are closed.