ಶನಿವಾರ, ಏಪ್ರಿಲ್ 26, 2025
HomeSpecial StoryLife Styleಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ...

ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ

- Advertisement -

summer heat : ಅಬ್ಬಬ್ಬಾ ಬೇಸಿಗೆ ಶುರುವಾಗೇ ಬಿಟ್ಟಿದೆ. ಮನೆಯ ಹೊರಗೆ ಹೋಗೋ ಹಾಗೆ ಇಲ್ಲ. ಹೊರಗೆ ಹೋದರಂತು ಬೆವರಿನ ಸ್ನಾನನೇ ಆಗಿ ಹೋಗುತ್ತೆ . ಹೊಸ ಬಟ್ಟೆ, ದುಬಾರಿ ಡಿಸೈನ್ ಬಟ್ಟೆಗಳಿಗೆ ಗುಡ್ ಬಾಯ್ ಹೇಳೋಣಾ ಅಂತ ಅನಿಸದೇ ಇರಲ್ಲ. ಎಷ್ಟು ನೀರು ಜೂಸ್ ಅಂತ ಕುಡಿದ್ರೂ ಸಾಕಾಗಲ್ಲ. ನೈಲಾನ್, ಪಾಲಿಸ್ಟರ್ ಬಟ್ಟೆಗಳಿಗೆ ಗುಡ್ ಬಾಯ್ ಹೇಳಿ ಕಾಟನ್ ಬಟ್ಟೆ ಯೂಸ್ ಮಾಡಬೇಕು ಅಂತ ಇದ್ದೀರ ? ಹಾಗಾದ್ರೆ ಈ ಸಸ್ಯ ಉತ್ಪನ್ನ ಅಂದ್ರೆ ಪ್ಲಾಟ್ ಬೇಸ್ಡ್ ಬಟ್ಟೆಗಳನ್ನು ಯಾಕೆ ನೀವು ಟ್ರೈ ಮಾಡಿ ನೋಡಬಾರದು.

ಹೌದು ನಮ್ಮ ಬಟ್ಟೆಯ ಉದ್ಯಮ ಸಾಕಷ್ಟು ಬೆಳೆದು ನಿಂತಿದೆ . ರೇಷ್ಮೇ ಬಟ್ಟೆಯಿಂದ ಹಿಡಿದು ಪಾಲಿಸ್ಟರ್ ನೈಲಾನ್ ,ರೆಯೋನ್ , ಲೆನಿನ್ ಸೇರಿದಂತೆ ಹಲವು ಪ್ರಕಾರದ ಪ್ಯಾಬ್ರಿಕ್ ಅಂದ್ರೆ ಬಟ್ಟೆಗಳ ತಯಾರಿಕೆ ಭರದಿಂದ ಸಾಗುತ್ತಿದೆ. ಈಗಂತು ಬಟ್ಟೆ ಉಪಯೋಗ ಜಾಸ್ತಿ ಯಾಗುತ್ತಿದ್ದು, ಅದರಂತೆ ಉತ್ಪಾದನೆ ಕೂಡಾ ಜಾಸ್ತಿ ಯಾಗುತ್ತಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಆದ್ರೆ ಇದರಲ್ಲಿ ಹಲವು ಬಟ್ಟೆಗಳು ನಮ್ಮ ಭೂಮಿಗೆ ಮಾರಕ ಅನ್ನೋದು ನಮಗೆ ಗೊತ್ತಿಲ್ಲ. ಅಷ್ಟು ಮಾತ್ರ ಅಲ್ಲ ನಮಗೂ ಕೂಡಾ ಇಂತಹ ಬಟ್ಟೆಗಳನ್ನು ಬಳಸೋದ್ರಿಂದ ಮಾರಣಾಂತಿಕ ಕಾಯಿಲೆಗಳು ಬರಬಹುದು ಅನ್ನುತ್ತೆ ವೈದ್ಯಲೋಕ . ಇದಕ್ಕೆ ಕಾರಣ ಇದರಲ್ಲಿ ಬಳಸಲಾಗುವ ಹೈ ಕೆಮಿಕಲ್ಸ್. ಈ ಬೇಸಿಗೆಯಲಂತು ಇಂತಹ ಬಟ್ಟೆಗಳು ದೇಹಕ್ಕೆ ಮುದ ನೀಡದೇ ಇನ್ನೂ ತೊಂದರೆಗೆ ಕಾರಣವಾಗುತ್ತೆ . ಇಂತಹ ತೊಂದರೆಯನ್ನು ನಿವಾರಿಸಿ ದೇಹಕ್ಕೆ ಹಾಗೂ ಮಣ್ಣಿಗೆ ಮುದ ನೀಡುವ ಬಟ್ಟೆಗಳು ಬಂದಿದೆ.

ಇದನ್ನೂ ಓದಿ : ಮೊಬೈಲ್‌ನಲ್ಲಿ ಹೆಚ್ಚು ರೀಲ್ಸ್‌ ನೋಡೋ ಅಭ್ಯಾಸವಿದೆಯಾ ? ಹಾಗಾದ್ರೆ ನಿಮ್ಮ ಕಣ್ಣನ್ನೂ ಕಾಡಬಹುದು ಮೆಳ್ಳೆಗಣ್ಣಿನ ಸಮಸ್ಯೆ

ಬ್ಯಾಬೂ – ಬಿದಿರಿನ ಬಟ್ಟೆ:
ಸಾಮಾನ್ಯವಾಗಿ ಬಿದಿರು ನೋಡದವರು ಇರಲಿಕ್ಕಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ನಾವು ಬಿದಿರನ್ನು ಯೂಸ್ ಮಾಡಿಯೇ ಇರುತ್ತೇವೆ . ಪೀರೋಪಕರಣ , ಸೌಟು , ಚಮಚ , ಕೊನೆ ಪಕ್ಷ ಬ್ಯಾಂಬೂ ಬಿರಿಯಾನಿಯನ್ನು ತಿನ್ನೋವಾಗಲಾದ್ರೂ ಇದನ್ನು ನೋಡಿರುತ್ತೇವೆ , ಆದ್ರೆ ಇದನ್ನು ಬಟ್ಟೆಯ ಉದ್ಯಮದಲ್ಲೂ ಯೂಸ್ ಮಾಡೋಕೆ ಆರಂಭಿಸಿದ್ದಾರೆ ಅಂದ್ರೆ ನೀವು ನಂಬಲೇ ಬೇಕು . ಇದು ತುಂಬಾ ಡ್ಯೂರೇಬಲ್ ಆಗಿದ್ದು ಮೆತ್ತಗಿನ ಭಾವನೆಯನ್ನು ನೀಡುತ್ತೆ . ಇದರಿಂದ ಪ್ಯಾಂಟ್ , ಸೀರೆ ಹಾಗೂ ಎಲ್ಲಾ ರೀತಿಯ ಬಟ್ಟೆಗಳನ್ನು ತಯಾರಿಸಲಾಗುತ್ತೆ . ನೈಸರ್ಗಿಕ ಬಣ್ಣಗಳನ್ನು ಇದಕ್ಕೆ ಬಳಸೋದರಿಂದ ಸ್ಕಿನ್ ಪ್ರೆಂಡ್ಲೀ ಕೂಡಾ ಹೌದು.

ಬಾಳೆ ಗಿಡದ ಬಟ್ಟೆ :
ಅಯ್ಯಯೋ ಇದೇನಿದು ಬಾಳೆ ಗಿಡದಿಂದ ಬಟ್ಟೆನಾ? ಅಂತ ಅಚ್ಚರಿಯಾಗಬಹುದು. ಬಾಳೆ ಗಿಡದ ದಿಂಡು ಅಂದ್ರೆ ಬನಾನಾ ಸ್ಟೆಮ್ ಗಳಿಂದ ಈ ಬಟ್ಟೆಗಳನ್ನು ತಯಾರಿಸಲಾಗುತ್ತೆ. ದಿಂಡಿನಲ್ಲಿನ ನಾರನ್ನು ನಿಗದಿತ ರೀತಿಯಲ್ಲಿ ವಿಭಜಿಸಿ ನೂಲಿನ ಎಳೆಗಳಾಗಿ ಮಾಡಲಾಗುತ್ತೆ . ಇದರಿಂದ ಸೀರೆ , ಹಾಗೂ ಉಳಿದ ಬಟ್ಟೆಗಳನ್ನು ತಯಾರಿಸಲಾಗುತ್ತೆ.

ಇದನ್ನೂ ಓದಿ : Heart Health Tips: ಹೃದ್ರೋಗದಿಂದ ದೂರವಿರಲು ಈ 5 ಹಾಲಿನ ಉತ್ಪನ್ನಗಳಿಂದ ದೂರವಿರಿ

ಭಾಂಗ್ ಬಟ್ಟೆ :
ಭಾಂಗ್ ನಿಂದಲೂ ಬಟ್ಟೆ ತಯಾರಿಸುತ್ತಾರಾ ? ಅಂತ ಕೇಳಬಹುದು. ಹೌದು, ನಶೆಗಾಗಿ ಬಳಸುವ ಭಾಂಗ್ ಕೂಡಾ ಉತ್ತಮ ಬಟ್ಟೆ ತಯಾರಿಕಾ ಕಚ್ಚಾವಸ್ತು ಅಂದ್ರೆ ತಪ್ಪಾಗಲ್ಲ . ಇದರ ಬಟ್ಟೆ ಕೊಂಚ ಒರಟಾಗಿದ್ದು ಹೆಚ್ಚಾಗಿ ಚಳಿಗಾಲದಲ್ಲಿ ಬಳಸೋದು ಉತ್ತಮ . ಜೊತೆಗೆ ಇದು ಯಾವುದೇ ರಾಸಾಯನಿಕ ಬಳಸದೇ ಬಳಕೆಗೆ ಬರುವ ಬಟ್ಟೆಗಳಾಗಿದ್ದು ದೇಹಕ್ಕೂ ಇದು ಹಾನಿಯುಂಟು ಮಾಡಲ್ಲ.

ಇದನ್ನೂ ಓದಿ : ಬೇಸಿಗೆ ರಜೆ ವಿಸ್ತರಣೆ ? ಜೂನ್ ಎರಡನೇ ವಾರದಲ್ಲಿ ಬಾಗಿಲು ತೆರೆಯಲಿವೆ ಶಾಲೆಗಳು !

ಇದರ ಜೊತೆಯಲ್ಲೇ ಕಬ್ಬಿನ ಜಲ್ಲೆಯ ಬಟ್ಟೆ , ಸೇರಿದಂತೆ ಹಲವು ಸಸ್ಯಗಳಿಂದ ಬಟ್ಟೆ ತಯಾರಿಕಾ ಕಾರ್ಯವನ್ನು ಹಲವು ಎನ್ ಜಿಒ ಗಳು ಮಾಡುತ್ತಿವೆ. ಸದ್ಯಕ್ಕೆ ಇದು ಸ್ವಲ್ಪ ಕಾಸ್ಲಿಯಾದ್ರೂ ದೇಹಕ್ಕೆ ಮಾತ್ರ ತುಂಬಾ ಉತ್ತಮ ಅನ್ನೋದ್ರಲ್ಲಿ ಎರಡು ಮಾತಿಲ್ಲ.

This cloth gives relief from summer heat: If you use it, it is good for both the earth and the body

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular