Ugadi 2023 : ಯುಗಾದಿ 2023; ಹಿಂದೂ ವರ್ಷಾರಂಭ; ತಿಥಿ, ಆಚರಣೆ, ಮಹತ್ವ

ಯುಗಾದಿ (Happy Ugadi 2023) ಎಂದರೆ ಹೊಸ ವರ್ಷದ ಆರಂಭ. ಸಂಸ್ಕೃತದಲ್ಲಿ ಯುಗ ಎಂದರೆ ವರ್ಷ, ಆದಿ ಎಂದರೆ ಆರಂಭ. ಬ್ರಹ್ಮ ಈ ದಿನದಂದೇ ಸೃಷ್ಟಿಯ ನಿರ್ಮಾಣ ಮಾಡಿದನು ಎಂದು ನಂಬಲಾಗಿದೆ. ಹಿಂದೂಗಳ ವರ್ಷಾರಂಭದ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಚಂದ್ರಮಾನ ಯುಗಾದಿಯು, ಹಿಂದೂ ಕ್ಯಾಲೆಂಡರ್‌ನ ಚೈತ್ರ ಮಾಸದ ಮೊದಲ ದಿನ. ಈ ದಿನದಿಂದ ಹೊಸ ಸಂವತ್ಸರ ಪ್ರಾರಂಭವಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ಯುಗಾದಿ (Ugadi 2023) ಎಂದು ಆಚರಿಸಿದರೆ, ಉತ್ತರ ಭಾರತದಲ್ಲಿ ಇದನ್ನು ಗುಡಿ ಪಡ್ವಾ (Gudi padwa), ಚೈತ್ರ ನವರಾತ್ರಿ ಎಂದು ಆಚರಿಸಲಾಗುತ್ತದೆ. ಈ ದಿನದಂದು ಸಿಹಿ–ಕಹಿಯ ಮಿಶ್ರಣ ಬೇವು–ಬೆಲ್ಲ ತಿಂದು, ಹೊಸ ಬಟ್ಟೆ ಧರಿಸಿ, ದೇವಸ್ಥಾನಗಳಿಗೆ ಭೇಟಿ ನೀಡುವುದು ಸಂಪ್ರದಾಯ.

ಯುಗಾದಿ ಯಾವಾಗ?
ಹಿಂದೂ ಪಂಚಾಗದ ಪ್ರಕಾರ ಪ್ರತಿ ವರ್ಷ ಯುಗಾದಿಯನ್ನು ಚೈತ್ರ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಯುಗಾದಿಯನ್ನು ಮಾರ್ಚ್‌ 22, 2023 ರಂದು ಆಚರಿಸಲಾಗುತ್ತದೆ.

ಶುಭ ಮಹೂರ್ತ:
ಪಂಚಾಂಗದ ಪ್ರಕಾರ ಚೈತ್ರ ಮಾಸದ ಮೊದಲ ದಿನವಾದ ಪಾಡ್ಯವು ಮಾರ್ಚ್‌ 21, 2023ರ ರಾತ್ರಿ 9:22 ಕ್ಕೆ ಪ್ರಾರಂಭವಾಗಿ, ಮರುದಿನ ಮಾರ್ಚ್‌ 22 ರಂದು ಸಂಜೆ 6.50 ಕ್ಕೆ ಕೊನೆಗೊಳ್ಳುತ್ತದೆ.

ಯುಗಾದಿ ಆಚರಣೆ:
ಯುಗಾದಿ ಹಿಂದೂಗಳು ಆಚರಿಸುವ ಪವಿತ್ರ ಹಬ್ಬಗಳಲ್ಲಿ ಒಂದು. ಈ ದಿನಂದು ಜನರು ಎಣ್ಣೆ ಸ್ನಾನ ಮಾಡುವ ಮೂಲಕ ದಿನವನ್ನು ಆರಂಭಿಸುತ್ತಾರೆ. ರಂಗೋಲಿ, ಹೂವು, ಮಾವಿನ ಎಲೆಗಳಿಂದ ಮನೆಯನ್ನು ಸಿಂಗರಿಸುತ್ತಾರೆ. ಚಂದದ ರಂಗೋಲಿಯು ಈ ಹಬ್ಬದ ವಿಶೇಷಗಳಲ್ಲೊಂದಾಗಿದೆ. ಹೊಸ ಬಟ್ಟೆ ಧರಿಸಿ, ಬೇವು–ಬೆಲ್ಲ ತಿಂದು, ಹೊಸ ವರ್ಷದ ಶುಭಾಶಯ ಹೇಳಿ, ಹಬ್ಬ ಆಚರಿಸುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡಿ ಹೊಸ ವರ್ಷ ಸುಖಮಯವಾಗಿ ಸಾಗಲಿ ಎಂದು ಪ್ರಾರ್ಥಿಸುತ್ತಾರೆ.

ಯುಗಾದಿ ಮಹತ್ವ :
ಯುಗಾದಿ ಎಂಬ ಪದವು ಯುಗ ಮತ್ತು ಆದಿ ಎಂಬ ಸಂಸ್ಕೃತ ಪದದಿಂದಾಗಿದೆ. ಯುಗ ಎಂದರೆ ವರ್ಷ, ಆದಿ ಎಂದರೆ ಆರಂಭ. ಇದು ವರ್ಷದ ಆರಂಭವಾಗಿದೆ. ಪುರಾಣದ ಪ್ರಕಾರ, ಸೃಷ್ಟಿ ಕರ್ತ ಬ್ರಹ್ಮನು ಈ ದಿನದಂದೇ ಬ್ರಹ್ಮಾಂಡದ ಸೃಷ್ಟಿ ಮಾಡಿದನು ಎಂದು ಹೇಳಲಾಗುತ್ತದೆ. ಸಮಯವನ್ನು ತಿಳಿಯುವ ಸಲುವಾಗಿ ದಿನ, ವಾರ, ತಿಂಗಳು ಮತ್ತು ವರ್ಷಗಳನ್ನು ರಚಿಸಿದನು. ಹಾಗಾಗಿ ಯುಗಾದಿಯು ಬ್ರಹ್ಮಾಂಡ ಸೃಷ್ಟಿಯ ಮೊದಲ ದಿನವನ್ನು ಸೂಚಿಸುತ್ತದೆ. ಆದ್ದರಿಂದ ಈ ದಿನವನ್ನು ಹಿಂದೂಗಳು ಯುಗಾದಿ ಅಂದರೆ ಹೊಸ ವರ್ಷಾರಂಭ ಎಂದು ಆಚರಿಸುತ್ತಾರೆ.

ಇದನ್ನೂ ಓದಿ : Carrot Halwa : ಕ್ಯಾರೆಟ್ ಹಲ್ವಾ ತಟ್ಟನೇ ಮನೆಯಲ್ಲೇ ಮಾಡಬಹುದು

ಇದನ್ನೂ ಓದಿ : Bottle guard Halva: ಬಾಯಲ್ಲಿ ನೀರೂರಿಸುವ ಸೋರೆಕಾಯಿ ಹಲ್ವಾ..! ಒಮ್ಮೆ ಹೀಗೆ ಮಾಡಿ ನೋಡಿ

(Ugadi 2023. Hindu new year, know tithi, muhurta, rituals, and significance of the day)

Comments are closed.