kitchen : ಮನೆ ಎಂಬುದನ್ನು ಒಂದು ದೇಹ ಎಂದು ಕರೆದರೆ ಅಡುಗೆ ಮನೆಗೆ ಹೃದಯದ ಸ್ಥಾನ ನೀಡಬಹುದು. ಹೌದು..! ಮನೆಯಲ್ಲಿ ಅಡುಗೆ ಮನೆಗೆ ಅಂತಹ ಮಹತ್ವವಿದೆ. ಹೀಗಾಗಿ ನೀವು ಮನೆ ನಿರ್ಮಾಣ ಮಾಡುವ ವೇಳೆಯಲ್ಲಿ ಅಡುಗೆ ಮನೆಯು ವಾಸ್ತು ಪ್ರಕಾರ ಇರುವಂತೆ ನೋಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಕಿಟಕಿ, ಬಾಗಿಲುಗಳ ದಿಕ್ಕು, ಒಲೆ ಇಡುವ ಜಾಗ ಮಾತ್ರವಲ್ಲದೇ ಅಡುಗೆ ಕೋಣೆಯ ಬಣ್ಣ ಕೂಡ ವಾಸ್ತುವಿನ ಪ್ರಕಾರವೇ ಇರಬೇಕು.
ವಾಸ್ತು ಶಾಸ್ತ್ರದಲ್ಲಿ ಅಡುಗೆ ಕೋಣೆಯಲ್ಲಿ ಆಗ್ನೇಯ ದಿಕ್ಕಿನಲ್ಲಿ ನಿರ್ಮಾಣ ಮಾಡಬೇಕು ಎಂದು ಹೇಳಲಾಗುತ್ತದೆ. ಈ ದಿಕ್ಕಿನ ಆಡಳಿತ ಗ್ರಹ ಶುಕ್ರ ಮತ್ತು ದೇವತೆ ಅಗ್ನಿಯಾಗಿದೆ. ಹೀಗಾಗಿ ನೀವು ವಾಸ್ತು ಶಾಸ್ತ್ರದ ಪ್ರಕಾರ ನೀವು ಶುಕ್ರಗ್ರಹಕ್ಕೆ ಸಂಬಂಧಿಸಿದ ಬಣ್ಣವನ್ನು ಬಳಕೆ ಮಾಡುವುದು ಉತ್ತಮವಾಗಿದೆ.
ಅಡುಗೆ ಕೋಣೆಗೆ ಬಿಳಿ ಅಥವಾ ಕ್ರೀಮ್ ಕಲರ್ ಅತ್ಯಂತ ಶುಭದಾಯಕವಾಗಿದೆ. ನಿಮ್ಮ ಅಡುಗೆ ಕೋಣೆಯಲ್ಲಿ ಏನಾದರೂ ವಾಸ್ತುದೋಷವಿದ್ದರೆ ನೀವು ಅಡುಗೆ ಕೋಣೆಯ ಅಗ್ನಿ ಮೂಲೆಯಲ್ಲಿ ಕೆಂಪು ಬಣ್ಣವನ್ನು ಬಳಕೆ ಮಾಡುವುದು ಉತ್ತಮವಾಗಿದೆ. ಈ ರೀತಿ ಮಾಡುವುದರಿಂದ ಯಾವುದೇ ವಾಸ್ತು ದೋಷವು ಅಡುಗೆ ಕೋಣೆಗೆ ಭಾದಿಸೋದಿಲ್ಲ.
ಇದನ್ನು ಹೊರತುಪಡಿಸಿ ಹಳದಿ, ಗುಲಾಬಿ, ಕೇಸರಿ ಹಾಗೂ ಚಾಕಲೇಟ್ ಬಣ್ಣವನ್ನೂ ಸಹ ನೀವು ಅಡುಗೆ ಕೋಣೆಗೆ ಬಳಿಯಬಹುದಾಗಿದೆ.
ಮನೆಯಲ್ಲಿರುವ ಪೊರಕೆಯು ನಿರ್ಧರಿಸುತ್ತೆ ನಿಮ್ಮ ಆರ್ಥಿಕ ಸ್ಥಿತಿ
ಮನೆ ಅಂದಮೇಲೆ ಅದನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಹಾಗೂ ಎಲ್ಲಾ ವಸ್ತುಗಳನ್ನು ಸೂಕ್ತವಾದ ಜಾಗದಲ್ಲಿ ಇಡುವುದು ಹೀಗೆ ಅನೇಕ ಕೆಲಸಗಳನ್ನು ಮಾಡಲಾಗುತ್ತದೆ. ಮನೆಯನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡ ಬಳಿಕವೂ ನಿಮ್ಮ ಮನೆಯಲ್ಲಿ ಆರ್ಥಿಕ ಸಂಕಷ್ಟ ನಿರಂತರವಾಗಿ ಇರುತ್ತದೆ. ಇದಕ್ಕಾಗಿ ನೀವು ವಾಸ್ತುಶಾಸ್ತ್ರದ ಮೊರೆ ಹೋಗಬಹುದಾಗಿದೆ. ವಾಸ್ತುಶಾಸ್ತ್ರದ ಕೆಲವು ನಿಯಮಗಳನ್ನು ಪಾಲಿಸುವ ಮೂಲಕ ನೀವು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು.
ಮನೆ, ಕಚೇರಿ ಅಥವಾ ಅಂಗಡಿಯಲ್ಲಿ ಪೊರಕೆ ಇಲ್ಲದೆ ಸ್ವಚ್ಛತೆ ಸಾಧ್ಯವಿಲ್ಲ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪೊರಕೆ ಇಡಲು ಸರಿಯಾದ ದಿಕ್ಕು ಪಶ್ಚಿಮ ಎಂದು ಪರಿಗಣಿಸಲಾಗುತ್ತದೆ. ನೈಋತ್ಯ ದಿಕ್ಕನ್ನು ಸಹ ಇದಕ್ಕೆ ಸರಿಯಾಗಿ ಪರಿಗಣಿಸಲಾಗಿದೆ. ಈ ಎರಡು ದಿಕ್ಕುಗಳಲ್ಲಿ ಪೊರಕೆ ಇಡುವುದರಿಂದ ನಕಾರಾತ್ಮಕ ಶಕ್ತಿ ಕುಂದುತ್ತದೆ ಎಂದು ನಂಬಲಾಗಿದೆ.
ಪೊರಕೆಯನ್ನು ಮರೆಯಲ್ಲಿಡಿ :
ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯನ್ನು ಯಾವಾಗಲೂ ಜನರು ಗಮನಿಸದ ಸ್ಥಳದಲ್ಲಿ ಇಡಬೇಕು. ಅಲ್ಲದೆ, ಮಲಗುವ ಕೋಣೆಯಲ್ಲಿ ಪೊರಕೆಯನ್ನು ಎಂದಿಗೂ ಇಡಬೇಡಿ
ಕನಸಿನಲ್ಲಿ ಪೊರಕೆಯನ್ನು ನೋಡುವುದು :
ನಿಮ್ಮ ಕನಸಿನಲ್ಲಿ ನೀವು ಪೊರಕೆಯನ್ನು ನೋಡಿದರೆ, ನೀವು ಅದೃಷ್ಟವಂತರು ಎಂದು ಅರ್ಥ. ಏಕೆಂದರೆ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಕನಸಿನಲ್ಲಿ ಪೊರಕೆಯನ್ನು ನೋಡುವುದರಿಂದ ಹಣದ ಲಾಭ ಪಡೆಯಬಹುದು.
ಈಶಾನ್ಯ ದಿಕ್ಕಿನಲ್ಲಿ ಪೊರಕೆ ಇಡಬೇಡಿ:
ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಡಿ. ಏಕೆಂದರೆ ಈ ದಿಕ್ಕಿನಲ್ಲಿ ಪೊರಕೆ ಇಟ್ಟರೆ ಮನೆಗೆ ಹಣ ಬರುವುದಿಲ್ಲ. ಆದ್ದರಿಂದ, ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಪೊರಕೆ ಇರಿಸಿ.
ಶನಿವಾರ ಪೊರಕೆ ಬದಲಾಯಿಸಿ :
ಪೊರಕೆಯನ್ನು ಬದಲಾಯಿಸಬೇಕು ಎಂದುಕೊಂಡರೆ ಶನಿವಾರವನ್ನು ಆಯ್ಕೆ ಮಾಡಿಕೊಳ್ಳಿ. ಹಳೆಯ ಪೊರಕೆಯನ್ನು ತೆಗೆದು ಹೊಸ ಪೊರಕೆಯನ್ನು ಶನಿವಾರ ತೆಗೆದುಕೊಳ್ಳಿ.
ಪೊರಕೆಯನ್ನು ಪಾದದ ಕೆಳಗೆ ಇಡಬೇಡಿ :
ಪೊರಕೆಯನ್ನು ಕಾಲಿನ ಕೆಳಗೆ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರಬಹುದು.
ಅಡುಗೆ ಮನೆಯಲ್ಲಿ ಪೊರಕೆ ಇಡಬೇಡಿ :
ಅಡುಗೆ ಮನೆಯಲ್ಲಿ ಪೊರಕೆ ಇಡುವುದು ಒಳ್ಳೆಯದಲ್ಲ ಎಂಬ ಮಾತಿದೆ. ಸೂರ್ಯೋದಯದೊಂದಿಗೆ ಮಾತೆ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ. ಸೂರ್ಯಾಸ್ತದ ನಂತರ ಗುಡಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
Vastu Tips: Do not paint your kitchen in this colour if is built in south-east direction of house
ಇದನ್ನು ಓದಿ : Benefits of Banana : ಒಂದು ಬಾಳೆಹಣ್ಣಿನಲ್ಲಿ ಅಡಗಿದೆ ಅಗಾಧ ಪ್ರಮಾಣದ ಆರೋಗ್ಯಕರ ಅಂಶ
ಇದನ್ನೂ ಓದಿ : Surya Temple : ಮಣ್ಣಿಗೆ ಒಲಿತಾನೆ ಶಿವ : ಮಣ್ಣಿನ ಗೊಂಬೆಯ ಹರಕೆಯಿಂದ ಈಡೇರುತ್ತೆ ಅಭೀಷ್ಟ