ಭಾನುವಾರ, ಏಪ್ರಿಲ್ 27, 2025
HomeSpecial StoryVastu Tips For Broom : ಪೊರಕೆ ವಿಚಾರದಲ್ಲಿ ಇರಲಿ ಈ ಎಚ್ಚರಿಕೆ : ಇಲ್ಲವಾದಲ್ಲಿ...

Vastu Tips For Broom : ಪೊರಕೆ ವಿಚಾರದಲ್ಲಿ ಇರಲಿ ಈ ಎಚ್ಚರಿಕೆ : ಇಲ್ಲವಾದಲ್ಲಿ ಕಾಡಲಿದೆ ಬಡತನ

- Advertisement -

Vastu Tips For Broom : ಪೊರಕೆಯಿಲ್ಲದ ಮನೆಯೇ ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಕೇವಲ ಮನೆ ಮಾತ್ರ ಕಚೇರಿ, ಅಂಗಡಿ, ಕಾರ್ಖಾನೆ ಹೀಗೆ ಪ್ರತಿಯೊಂದು ಕಡೆಯಲ್ಲಿಯೂ ಸ್ವಚ್ಛತೆಯ ವಿಚಾರ ಬಂದಾಗ ಪೊರಕೆ ಬೇಕೇ ಬೇಕು. ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ಬಳಿಕ ಪೊರಕೆಯನ್ನು ಮನೆಯ ಮೂಲೆಯಲ್ಲಿ ಎಲ್ಲಾದರೂ ಎಸೆದು ಬಿಡುತ್ತೇವೆ. ಆದರೆ ವಾಸ್ತು ಶಾಸ್ತ್ರದಲ್ಲಿ ಪೊರಕೆಗಳಿಗೂ ಅದರದ್ದೇ ಆದ ಮಹತ್ವವಿದೆ. ನೀವು ಎಲ್ಲೆಂದರಲ್ಲಿ ಪೊರಕೆಗಳನ್ನು ಬಿಸಾಡುವುದು ಒಳ್ಳೆಯದಲ್ಲ ಎಂದು ವಾಸ್ತು ಶಾಸ್ತ್ರ ಹೇಳಿದೆ.


ವಾಸ್ತು ಶಾಸ್ತ್ರದಲ್ಲಿ ಪೊರಕೆಗಳಿಗೆ ವಿಶೇಷ ಸ್ಥಾನವಿದೆ. ವಾಸ್ತು ಶಾಸ್ತ್ರವು ಪೊರಕೆಗೆ ಲಕ್ಷ್ಮೀ ದೇವಿಯ ಸ್ಥಾನವನ್ನು ನೀಡಿದೆ. ಪೊರಕೆಯನ್ನು ಬಳಕೆ ಮಾಡಿದ ಬಳಿಕ ನೀವು ಅದನ್ನು ವಾಸ್ತುವಿನ ಪ್ರಕಾರವೇ ಇರಿಸಿದರೆ ನಿಮ್ಮ ಮನೆಯಲ್ಲಿ ಎಂದಿಗೂ ಸಂಪತ್ತಿಗೆ ಬರ ಬರುವುದಿಲ್ಲ. ಇಂತಹ ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸುತ್ತಾಳೆ.ಬಡತನವು ಇಂತಹ ಮನೆಗಳಿಂದ ಓಡಿ ಹೋಗುತ್ತದೆ. ಪೊರಕೆಗಳನ್ನು ಗೌರವಿಸುವ ಮನೆಯಲ್ಲಿ ಲಕ್ಷ್ಮೀಯ ಕೃಪೆಯಿಂದ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಮನೆಯಲ್ಲಿ ಪೊರಕೆಯನ್ನು ಇಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.


ಪೊರಕೆಯು ಹಳೆಯದಾದ ತಕ್ಷಣ ಬದಲಾಯಿಸಿ :


ಮನೆಯಲ್ಲಿರುವ ಪೊರಕೆ ಹಳೆಯದಾಗಿದ್ದರೆ ಅಥವಾ ಮುರಿದು ಹೋಗಿದ್ದರೆ ಅದನ್ನು ಕೂಡಲೇ ಬದಲಾಯಿಸಬೇಕು. ಏಕೆಂದರೆ ಮುರಿದುಹೋದ ಅಥವಾ ಹಳೆಯ ಪೊರಕೆಯನ್ನು ಬಳಕೆ ಮಾಡುವುದರಿಂದ ಮನೆಯಲ್ಲಿ ಬಡತನ ನೆಲೆಸುತ್ತದೆ. ಇದರಿಂದ ಜೀವನದಲ್ಲಿ ಎಲ್ಲಾ ರೀತಿಯ ಸಂಕಷ್ಟಗಳು ಬರಲು ಆರಂಭವಾಗುತ್ತದೆ.

ಪೊರಕೆಯನ್ನು ಮೆಟ್ಟಬೇಡಿ :


ಪೊರಕೆಯನ್ನು ದೇವಿ ಲಕ್ಷ್ಮೀಯ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪೊರಕೆಯನ್ನು ಎಂದಿಗೂ ಗೌರವಿಸಬೇಕು. ಪೊರಕೆಯನ್ನು ನೀವು ಕಾಲಿನಿಂದ ತುಳಿಯುವುದು ಲಕ್ಷ್ಮೀ ದೇವಿಯನ್ನು ಪರೋಕ್ಷವಾಗಿ ಅವಮಾನಿಸಿದಂತೆ ಆಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.

ಸೂರ್ಯಾಸ್ತದ ನಂತರ ಗುಡಿಸಬೇಡಿ


ಸೂರ್ಯಾಸ್ತದ ಬಳಿಕ ಎಂದಿಗೂ ಮನೆಯನ್ನು ಗುಡಿಸಬೇಡಿ. ಸೂರ್ಯಾಸ್ತದ ಬಳಿಕ ಕಸ ಗುಡಿಸಿದರೆ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ ಎಂದು ವಾಸ್ತು ಶಾಸ್ತ್ರ ಹೇಳಿದೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಸಂಜೆಯ ಸಮಯದಲ್ಲಿ ಕಸ ಗುಡಿಸಬೇಕಾಗಿ ಬಂದಲ್ಲಿ ಅಂತಹ ಸಮಯದಲ್ಲಿ ಮನೆಯಿಂದ ಕಸವನ್ನು ಮನೆಯ ಹೊರಗೆ ಎಸೆಯಬೇಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಬಡತನ ನೆಲೆಸುತ್ತದೆ.

ಇದನ್ನು ಓದಿ : vastu tips : ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇನ್ನೊಬ್ಬರಿಂದ ಬೇಡಿ ಪಡೆಯಬೇಡಿ

ಇದನ್ನೂ ಓದಿ : Vastu Tips : ಮನೆಯಲ್ಲಿ ಕನ್ನಡಿಯನ್ನು ಇರಿಸುವ ಮುನ್ನ ಗಮನದಲ್ಲಿರಲಿ ಈ ಮುಖ್ಯ ವಿಚಾರ

Vastu Tips For Broomdont do this things in your home about broom

RELATED ARTICLES

Most Popular