yash starrer kgf 2 : 3ನೇ ವಾರವೂ ಥಿಯೇಟರ್​​ನಲ್ಲಿ ಕೆಜಿಎಫ್​ 2 ಹವಾ: ಮಕಾಡೆ ಮಲಗಿದ ಸ್ಟಾರ್​ ನಟರ ಸಿನಿಮಾ

yash starrer kgf 2 : ರಾಕಿಂಗ್​ ಸ್ಟಾರ್​ ಯಶ್​ ಜೀವನದಲ್ಲಿ ಕೆಜಿಎಫ್​ 2 ಸಿನಿಮಾವು ಹೊಸ ಮೈಲಿಗಲ್ಲಾಗಿ ನಿಂತಿದೆ . ಯಾರೂ ಊಹಿಸದ ರೀತಿಯಲ್ಲಿ ಸ್ಯಾಂಡಲ್​ವುಡ್​ನ ಸಿನಿಮಾವೊಂದು ವಿಶ್ವಾದ್ಯಂತ ಸದ್ದು ಮಾಡುತ್ತಿದೆ. ಪ್ರಶಾಂತ್​ ನೀಲ್​ ನಿರ್ದೇಶನ, ರಾಕಿಂಗ್ ಸ್ಟಾರ್​​​​ ಯಶ್​ ನಟನಾ ಚಾಕ ಚಕ್ಯತೆಗೆ ಸಂಪೂರ್ಣ ವಿಶ್ವವೇ ಸಲಾಂ ಎಂದಿದೆ. ಉತ್ತರ ಭಾರತದಲ್ಲಂತೂ ಬಾಲಿವುಡ್​ ಸಿನಿಮಾಗಳನ್ನೇ ಬದಿಗೊತ್ತಿ ಜನರು ಕೆಜಿಎಫ್​ 2 ಸಿನಿಮಾ ವೀಕ್ಷಣೆಗಯತ್ತ ಒಲವು ತೋರಿದ್ದಾರೆ. ಈ ನಡುವೆ ಸಿನಿಮಾ ತಂಡವು ಕೆಜಿಎಫ್​ ಚಾಪ್ಟರ್ 3 ಸುಳಿವನ್ನೂ ಬಿಟ್ಟುಕೊಟ್ಟಿದೆ.


ಕೆಜಿಎಫ್​ ಚಾಪ್ಟರ್​ 2 ಸಿನಿಮಾ ತೆರೆಕಂಡು ಮೂರನೇ ವಾರಕ್ಕೆ ಕಾಲಿಟ್ಟರೂ ಸಹ ಸಿನಿಮಾ ಮಂದಿರಗಳಲ್ಲಿ ರಾಕಿ ಭಾಯ್​ ಹವಾ ಕಿಂಚಿತ್ತೂ ಕಡಿಮೆಯಾದಂತೆ ತೋರುತ್ತಿಲ್ಲ. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿಯೂ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಯಶ್​ರ ಕೆಜಿಎಫ್​ 2 ಸಿನಿಮಾದ ಎದುರು ಶಾಹೀದ್​ ಕಪೂರ್​ ನಟನೆಯ ಜೆರ್ಸಿ, ದಳಪತಿ ವಿಜಯ್​ ನಟನೆಯ ಬೀಸ್ಟ್​ ಸಿನಿಮಾಗಳು ಮಕಾಡೆ ಮಲಗಿವೆ.


ಇದು ಮಾತ್ರವಲ್ಲದೇ ಅಜಯ್​ ದೇವಗನ್ ನಟನೆಯ ರನ್​ ವೇ 34, ಟೈಗರ್ ಶ್ರಾಫ್​ ಮುಖ್ಯ ಭೂಮಿಕೆಯ ಹೀರೋಪಂತಿ 2, ಚಿರಂಜೀವಿ ಮತ್ತು ರಾಮ್​ಚರಣ್​ ನಟನೆಯ ಆಚಾರ್ಯ ಸೇರಿದಂತೆ ಅನೇಕ ಸಿನಿಮಾಗಳು ಕೆಜಿಎಫ್​ ಚಾಪ್ಟರ್​ 2 ಎದುರು ಮಂಡಿಯೂರಿವೆ .ಮೂರು ವಾರಗಳ ವೇಳೆಗೆ ಕೆಜಿಎಫ್​ 2 ಸಿನಿಮಾವು ಕೇವಲ ಹಿಂದಿ ಬಾಕ್ಸಾಫೀಸಿನಲ್ಲೇ 350 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿದೆ. ವಿಶ್ವಾದ್ಯಂತ ಈ ಸಿನಿಮಾ ಸಾವಿರಾರು ಕೋಟಿ ಸಂಪಾದಿಸಿದ್ದು ವಿಜಯ್​ ಕಿರಗಂದೂರು ಭರ್ಜರಿ ಲಾಭ ಗಳಿಸಿದ್ದಾರೆ.

ಇದನ್ನು ಓದಿ : Megastar Chiranjeevi : ಮಗನದ್ದು ಆಯಿತು, ಮಗಳ ಚಿತ್ರದಲ್ಲಿ ತೆಲುಗು ನಟ ಚಿರಂಜೀವಿ ನಟನೆ!!

ಇದನ್ನೂ ಓದಿ : Sanjana Galrani Baby Bump : ಸಖತ್‌ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!

yash starrer kgf 2 stays strong in 3rd week competing with acharya runway 34 heropanti- movies

Comments are closed.