vastu tips for sleeping pattern : ವಾಸ್ತು ಶಾಸ್ತ್ರ ಎನ್ನುವುದು ಕೇವಲ ಮನೆಯ ಕೊಠಡಿಗಳು ಹಾಗೂ ದಿಕ್ಕುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ನೀವು ಮಾಡುವ ಕೆಲಸಗಳ ಮೇಲೆಯೂ ಅವಲಂಭಿತವಾಗಿರುತ್ತದೆ. ನಿಮ್ಮ ಕೆಲವು ಅಭ್ಯಾಸಗಳ ಮೇಲೆಯೂ ವಾಸ್ತು ಪರಿಣಾಮವನ್ನು ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ತುಂಬಾನೇ ಮಹತ್ವವಿದೆ. ವಾಸ್ತುವಿನ ಬಗ್ಗೆ ನೀವು ಕಾಳಜಿ ತೋರಿದರೆ ಮಾತ್ರ ನಿಮ್ಮ ಜೀವನ ಸುಖ – ಸಂತೋಷದಿಂದ ಇರಲು ಸಾಧ್ಯ. ಇದರಿಂದ ಮನೆ ಕೂಡ ಸಮೃದ್ಧಿಯಿಂದ ಇರುತ್ತದೆ. ಮನೆಯ ನಿರ್ಮಾಣದಿಂದ ಹಿಡಿದು ಮನೆಯ ಅಲಂಕಾರದವರೆಗೂ ವಾಸ್ತು ಶಾಸ್ತ್ರವು ನೆಲೆಸಿದೆ.
ನೀವು ವಾಸ್ತು ಪ್ರಕಾರವೇ ನಡೆದುಕೊಂಡರೆ ನಿಮಗೆ ಅಂದುಕೊಂಡ ಕಾರ್ಯಗಳಲ್ಲಿ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ . ವಾಸ್ತು ಶಾಸ್ತ್ರದಲ್ಲಿ ಮಲಗುವ ವಿಚಾರದಲ್ಲಿಯೂ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಲಾಗಿದೆ. ನೀವು ಮಲಗುವ ಮುನ್ನ ದಿಕ್ಕುಗಳ ಕಡೆಗೆ ಗಮನ ಹರಿಸಲೇಬೇಕು. ಇಲ್ಲವಾದಲ್ಲಿ ನಿಮಗೇ ತೊಂದರೆ ಉಂಟಾಗಲಿದೆ. ಮಲಗುವ ಭಂಗಿಯು ನಿಮ್ಮ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ.
ಮಲಗುವಾಗ ಈ ದಿಕ್ಕಿನಲ್ಲಿ ನಿಮ್ಮ ಪಾದಗಳು ಇರದಂತೆ ನೋಡಿಕೊಳ್ಳಿ :
ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ವೇಳೆಯಲ್ಲಿ ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಪಾದವು ಇರಬಾರದು. ಈ ರೀತಿ ಮಾಡಿದರೆ ನಿಮಗೆ ನಿದ್ದೆ ಮಾಡಲು ತೊಂದರೆ ಎನಿಸಬಹುದು. ವಾಸ್ತು ಪ್ರಕಾರ ಹೀಗೆ ಮಲಗುವುದರಿಂದ ಮಾನಸಿಕ ಕಾಯಿಲೆಗಳು ಬರುತ್ತವೆ.
ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ಶುಭಕರ :
ವಾಸ್ತು ಪ್ರಕಾರ ನೀವು ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ತಲೆಯನ್ನಿಟ್ಟಯ ಮಲಗಬಹುದು. ಈ ದಿಕ್ಕು ತಲೆಯಿಟ್ಟು ಮಲಗಲು ಶುಭಕರ ಎಂದು ವಾಸ್ತು ಶಾಸ್ತ್ರ ಹೇಳಿದೆ. ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯ ಸ್ಥಿತಿ ಉತ್ತಮವಾಗಿ ಇರಲಿದೆ.
ಪೂರ್ವ ದಿಕ್ಕಿನಲ್ಲಿ ತಲೆ ಇಟ್ಟು ಮಲಗಬೇಕು :
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವುದರಿಂದ ನಿಮ್ಮ ಏಕಾಗ್ರತೆ ಹೆಚ್ಚುವುದರ ಜೊತೆಯಲ್ಲಿ ಜ್ಞಾಪಕ ಶಕ್ತಿ ಕೂಡ ಬಲಗೊಳ್ಳುತ್ತದೆ. ಆಧ್ಯಾತ್ಮದ ಕಡೆಗೆ ಒಲವನ್ನು ಹೊಂದಿರುವವರು ಹಾಗೂ ವಿದ್ಯಾರ್ಥಿಗಳು ಪೂರ್ವ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದು ಉತ್ತಮ.
ಪಶ್ಚಿಮ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದು ಮಂಗಳಕರ
ಇನ್ನು ನೀವು ಪಶ್ಚಿಮ ದಿಕ್ಕಿನಲ್ಲಿಯೂ ತಲೆಯಿಟ್ಟು ಮಲಗಬಹುದು. ವಾಸ್ತುವಿನ ಹೊರತಾಗಿಯೂ ಈ ದಿಕ್ಕಿನಲ್ಲಿ ಕೆಲವು ಧಾರ್ಮಿಕ ನಂಬಿಕೆಗಳಿವೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿಕ್ಕು ಜಲ ದೇವತೆಯಾದ ವರುಣನ ದಿಕ್ಕು. ಈ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ವ್ಯಕ್ತಿಯ ಕೀರ್ತಿ ಹೆಚ್ಚುತ್ತದೆ. ಹಾಗೂ ಸಾರ್ವಜನಿಕ ಜೀವನದಲ್ಲಿ ಆತನ ಗೌರವವೂ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ಇದನ್ನು ಓದಿ : Priyanka Chopra: ನಟಿ ಪ್ರಿಯಾಂಕ ಚೋಪ್ರಾ ಮಗು ಹೆಸರು ಮಾಲತಿ
ಇದನ್ನೂ ಓದಿ : Vastu Tips: ದಂಪತಿಯ ನಡುವಿನ ಭಿನ್ನಾಭಿಪ್ರಾಯಗಳನ್ನು ದೂರಮಾಡಲು ಮನೆಯಲ್ಲಿರಲಿ ಈ ವಸ್ತು
vastu tips for sleeping pattern to earn name and fame