Varanasi : ಈ ಅಂಗಡಿಯಲ್ಲಿ ಮೊಬೈಲ್​ ಖರೀದಿ ಮಾಡಿದರೆ ಸಿಗುತ್ತೆ ಉಚಿತ ಪೆಟ್ರೋಲ್, ನಿಂಬು​..!

Varanasi : ದಿನನಿತ್ಯ ಜನ ಬಳಕೆಯ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಮ್ಮೆ ಇಂಧನಗಳ ದರ ಏರಿಕೆಯಾದರೆ ಮತ್ತೊಮ್ಮೆ ದಿನಸಿ ವಸ್ತುಗಳು ಬೆಲೆ ಏರಿಕೆಯಾಗುತ್ತಿದೆ. ಇನ್ನೂ ಹಲವು ಬಾರಿ ತರಕಾರಿ – ಹಣ್ಣುಗಳ ಬೆಲೆ ಏರಿಕೆಯಾಗಿದೆ. ಪ್ರತಿ ದಿನ ಬೆಲೆ ಏರಿಕೆಯ ಬಗ್ಗೆ ಕೇಳಿ ಕೇಳಿ ಜನಸಾಮಾನ್ಯ ಹೈರಾಣಾಗಿ ಹೋಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಜನರ ಕಷ್ಟವನ್ನು ಅರಿತ ಮೊಬೈಲ್​ ಅಂಗಡಿಯೊಂದು ಶ್ರೀ ಸಾಮಾನ್ಯರ ಕಣ್ಣರಳಿಸುವಂತಹ ಆಫರ್​ ಒಂದನ್ನು ನೀಡಿದೆ.


ವಾರಣಾಸಿಯಲ್ಲಿರುವ ಮೊಬೈಲ್​ ಅಂಗಡಿಯೊಂದರಲ್ಲಿ ಈ ಆಫರ್​ ನೀಡಲಾಗಿದೆ. ಈ ಅಂಗಡಿಯಲ್ಲಿ ನೀವು 10 ಸಾವಿರ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಮೊಭೈಲ್ ಫೋನ್​ಗಳನ್ನು ಖರೀದಿ ಮಾಡಿದಲ್ಲಿ ನಿಮಗೆ 1 ಲೀಟರ್​ ಪೆಟ್ರೋಲ್​ ಉಚಿತವಾಗಿ ಸಿಗಲಿದೆ. ಇದರ ಜೊತೆಯಲ್ಲಿ ಯಾರಾದರೂ 100 ರೂಪಾಯಿ ಮೌಲ್ಯದ ಯಾವುದೇ ವಸ್ತುಗಳನ್ನು ಖರೀದಿ ಮಾಡಿದರೂ ಸಹ ನಿಮಗೆ 2 ನಿಂಬೆ ಹಣ್ಣುಗಳು ಉಚಿತವಾಗಿ ಸಿಗಲಿದೆ.
ಬೇಸಿಗೆ ಕಾಲ ಬಂದ ಬಳಿಕ ನಿಂಬೆ ಹಣ್ಣುಗಳ ಬೆಲೆ ಗಗನಕ್ಕೇರಿದೆ. 50 ರೂಪಾಯಿ 2-3 ನಿಂಬೆ ಹಣ್ಣುಗಳು ಸಿಗುತ್ತಿದೆ. ಹೀಗಾಗಿ ನಿಂಬೆ ಹಣ್ಣುಗಳನ್ನು ನೀಡಿದರೂ ಸಹ ಜನರಿಗೆ ಉಪಯೋಗವಾಗುತ್ತದೆ ಎನ್ನುವುದು ಅಂಗಡಿ ಮಾಲೀಕರ ಆಲೋಚನೆಯಾಗಿದೆ.


ಇನ್ನು ಈ ವಿಚಾರವಾಗಿ ಮಾತನಾಡಿದ ಮೊಬೈಲ್​ ಅಂಗಡಿ ಮಾಲೀಕ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದನ್ನು ಗಮನಿಸುತ್ತೇನೆ, ಹೀಗಾಗಿ ನಮ್ಮ ಅಂಗಡಿಯಲ್ಲಿ ಏನನ್ನಾದರೂ ಖರೀದಿ ಮಾಡುವವರಿಗೆ ಉಪಯುಕ್ತ ವಸ್ತುಗಳನ್ನು ನೀಡುವ ಬಗ್ಗೆ ಯೋಚಿಸಿದ್ದೇನೆ. ಹೀಗಾಗಿ ಮೊಬೈಲ್​ ಖರೀದಿ ಮಾಡುವವರಿಗೆ ಪೆಟ್ರೋಲ್​ ಹಾಗೂ ಬಿಡಿ ಭಾಗಗಳನ್ನು ಖರೀದಿ ಮಾಡುವವರಿಗೆ ಉಚಿತವಾಗಿ ನಿಂಬೆ ಹಣ್ಣುಗಳನ್ನು ನೀಡುವ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದರು.

ಇದನ್ನು ಓದಿ : DK Shivakumar : ನನ್ನ ಹೆಸರು ಕೇಳಿದರೆ ಕೆಲವರಿಗೆ ಶಕ್ತಿ ಬರುತ್ತೆ : ಡಿ.ಕೆ ಶಿವಕುಮಾರ್ ವ್ಯಂಗ್ಯ

ಇದನ್ನೂ ಓದಿ : basanagowda patil yatnal : ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್​

Varanasi: Lemon, petrol being offered free with mobile accessories

Comments are closed.