Vastu Tips :ವ್ಯಕ್ತಿಯ ಜೀವನದಲ್ಲಿ ಹಣದ ಓಡಾಟ ಇದ್ದರಷ್ಟೇ ಅವರ ಜೀವನ ನೆಮ್ಮದಿಯಿಂದ ಇರಲು ಸಾಧ್ಯ. ಆರ್ಥಿಕ ಸಂಕಷ್ಟವಿದ್ದಲ್ಲಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸೋಕೆ ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನ ಪಟ್ಟರೂ ಸಹ ಹಣ ನಮ್ಮ ಕೈಯಲ್ಲಿ ನಿಲ್ಲುವುದೇ ಇಲ್ಲ. ಏನಾದರೊಂದು ಕಾರಣಕ್ಕೆ ಹಣ ನಿಮ್ಮ ಕೈನಿಂದ ಖರ್ಚಾಗಿ ಬಿಡುತ್ತದೆ .
ಹಾಗಾದರೆ ಈ ಆರ್ಥಿಕ ಸಂಕಷ್ಟಗಳಿಗೆ ಪರಿಹಾರವೆಂಬುದೇ ಇಲ್ಲವೇ..? ಉಳಿದವರಂತೆ ನಮ್ಮ ಕೈಯಲ್ಲೂ ಹಣ ಇರುವುದು ಯಾವಾಗ..? ಎಂಬ ಹತ್ತು ಹಲವಾರು ಪ್ರಶ್ನೆಗಳು ನಿಮ್ಮಲ್ಲಿಯೂ ಕಾಡುತ್ತಿರಬಹುದು. ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ವಾಸ್ತು ಶಾಸ್ತ್ರದಲ್ಲಿ ಉತ್ತರವಿದೆ.
ನೀವು ಮನೆಯಲ್ಲಿ ಹಣವನ್ನು ಎಲ್ಲಿ ಇಡುತ್ತೀರಿ ಎಂಬುದು ಕೂಡ ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ಧರಿಸುತ್ತದೆ. ನಿಮ್ಮ ಮನೆಗಳಲ್ಲಿ ಹಣವನ್ನು ಇಡಲು ಪ್ರತ್ಯೇಕವಾದ , ಸುರಕ್ಷಿತ ಅಥವಾ ಯಾವುದೇ ಬೀರುಗಳ ವ್ಯವಸ್ಥೆ ಇಲ್ಲ ಎಂದಾದಲ್ಲಿ ನೀವು ಹಣವನ್ನು ಇಡಲು ಉತ್ತರ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬಹುದು.
ಉತ್ತರ ದಿಕ್ಕಿನಲ್ಲಿ ಹಣವನ್ನು ಇಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ನಿಮ್ಮ ಮನೆಯ ಯಾವುದೇ ಕೋಣೆಯ ಉತ್ತರ ದಿಕ್ಕಿನಲ್ಲಿ ಹಣವನ್ನು ಇಡಬಹುದು. ಆದರೆ ನೀವು ಹಣವನ್ನು ಇಡಲು ಆಯ್ಕೆ ಮಾಡಿಕೊಳ್ಳುವ ಕೋಣೆಯು ಭದ್ರತಾ ದೃಷ್ಟಿಯಿಂದ ಸುರಕ್ಷಿತವಾಗಿದೆ ಎಂಬುದು ಗಮನದಲ್ಲಿರಲಿ.
vastu tips in which direction we should keep money
ಇದನ್ನು ಓದಿ : Vaastu tips : ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ನಿಮಗೆ ಸಿಗಲಿದೆ ಶುಭ ಲಾಭ
ಇದನ್ನೂ ಓದಿ : Vaastu tips for bedroom : ಮಲಗುವ ಕೋಣೆಯ ವಿಚಾರದಲ್ಲಿ ಎಂದಿಗೂ ಮಾಡಬೇಡಿ ಈ ತಪ್ಪು