vastu tips : ಮನೆಯ ಈ ದಿಕ್ಕಿಗೆ ಹಸಿರು ಬಣ್ಣ ಬಳಿದರೆ ಹಿರಿಯ ಪುತ್ರಿಗೆ ಸಿಗಲಿದೆ ಶ್ರೇಯಸ್ಸು

vastu tips : ಮನೆಯ ಅಂದ ಹೆಚ್ಚಬೇಕು ಅಂದರೆ ಬಣ್ಣ ಬಳಿಯಲೇಬೇಕು.ಆಗ ಮಾತ್ರ ಮನೆಗೊಂದು ಅಂದ ಬರೋಕೆ ಸಾಧ್ಯ. ಬಣ್ಣ ಬಳಿದರೆ ಮನೆ ಚಂದ ಕಾಣುತ್ತದೆ ಅಂತಾ ಮನಸ್ಸಿಗೆ ಬಂದ ಬಣ್ಣವನ್ನು ಬಳಿಯೋದು ಕೂಡ ಸರಿಯಲ್ಲ. ಏಕೆಂದರೆ ವಾಸ್ತುಶಾಸ್ತ್ರದಲ್ಲಿ ಕೆಲವು ಬಣ್ಣಗಳನ್ನು ಮಾತ್ರ ಶ್ರೇಷ್ಠ ಎಂದು ಪರಿಗಣಿಸಲಾಗಿದೆ.


ಇಂದು ನಾವು ಆಗ್ನೇಯ ದಿಕ್ಕಿನ ಮಹತ್ವವನ್ನು ತಿಳಿದುಕೊಳ್ಳೋಣ. ಮನೆಯ ಆಗ್ನೇಯ ಮೂಲೆಯನ್ನು ವಾಸ್ತುಶಾಸ್ತ್ರದಲ್ಲಿ ವೃಕ್ಷಕ್ಕೆ ಹೋಲಿಕೆ ಮಾಡಲಾಗುತ್ತದೆ. ಅಂದರೆ ಈ ದಿಕ್ಕು ವ್ಯಾಪಾರ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಆಗ್ನೇಯ ದಿಕ್ಕಿನಲ್ಲಿ ನೀವು ಬಳಿಯುವ ಯಾವುದೇ ಬಣ್ಣವು ನಿಮ್ಮ ಅಭಿವೃದ್ಧಿಯ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ.


ಹೀಗಾಗಿ ನೀವು ಆಗ್ನೇಯ ದಿಕ್ಕಿನ ನೀವು ಸರಿಯಾದ ಬಣ್ಣವನ್ನೇ ಬಳಿಯಬೇಕು. ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕಿನ ಬಣ್ಣ ಹಸಿರು. ಹೀಗಾಗಿ ನೀವು ಈ ದಿಕ್ಕಿನಲ್ಲಿ ಹಸಿರು ಬಣ್ಣವನ್ನು ಬಳಿದರೆ ನಿಮಗೆ ಹೆಚ್ಚು ಶ್ರೇಯಸ್ಸು ಸಿಗಲಿದೆ. ಬೇಸಿಗೆಯ ಕಾಲದಲ್ಲಿ ಈ ದಿಕ್ಕಿಗೆ ಬಣ್ಣ ಬಳಿದರೆ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆಗ್ನೇಯ ದಿಕ್ಕು ಅಗ್ನಿ ಮೂಲೆ ಕೂಡ ಆಗಿರುವದರಿಂದ ನೀವು ಈ ದಿಕ್ಕಿನಲ್ಲಿ ಅಡುಗೆ ಕೋಣೆಯ ವ್ಯವಸ್ಥೆಯನ್ನು ಮಾಡಿ. ಡ್ರಾಯಿಂಗ್​ ಕೋಣೆಯನ್ನೂ ನೀವು ಆಗ್ನೇಯ ದಿಕ್ಕಿನಲ್ಲಿ ನಿರ್ಮಿಸಬಹುದು. ವಾಸ್ತುಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕು ಮನೆಯ ಹಿರಿ ಮಗಳಿಗೆ ಸಂಬಂಧಿಸಿದ್ದಾಗಿದೆ.

ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಬೇಡಿ

Vaastu Tips : ದೈನಂದಿನ ಜೀವನದಲ್ಲಿ, ನಾವು ಆಗಾಗ್ಗೆ ಅನೇಕ ತಪ್ಪುಗಳನ್ನು ಮಾಡುತ್ತೇವೆ, ಅದು ನಂತರದಲ್ಲಿ ತೊಂದರೆಗೆ ಕಾರಣವಾಗುತ್ತದೆ. ತಿಳಿದೋ ತಿಳಿಯದೆಯೋ ಮಾಡಿದ ಕೆಲವು ತಪ್ಪುಗಳು ವ್ಯಕ್ತಿಯ ಮೇಲೆ ಯಾವಾಗ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡುತ್ತದೆಯೋ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ವಾಸ್ತು ಪ್ರಕಾರ ಕೆಲವು ಕೆಲವು ವಿಷಯಗಳ ಬಗ್ಗೆ ನೀವು ಕಾಳಜಿ ವಹಿಸದೇ ಹೋದರೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದೀರಿ.

ಪೂಜೆ ಮಾಡುವ ವೇಳೆಯಲ್ಲಿ ದೇವರ ವಿಗ್ರಹಗಳನ್ನು ಮುಖಾಮುಖಿಯಾಗಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಈ ರೀತಿ ಮಾಡುವುದರಿಂದ ಆರ್ಥಿಕ ಪ್ರಗತಿಯ ಹಾದಿಗಳು ಮುಚ್ಚಿಹೋಗುತ್ತವೆ ಮತ್ತು ಹಣ ಪಡೆಯುವಲ್ಲಿ ಅಡಚಣೆ ಉಂಟಾಗುತ್ತದೆ.

ಮನೆಯಲ್ಲಿರುವ ಪೊರಕೆಗೂ ನೀವು ವಿಶೇಷವಾದ ಗೌರವ ನೀಡಲೇಬೇಕು. ಪೊರಕೆಯು ಲಕ್ಷ್ಮೀಯ ರೂಪವಾದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತ ಸ್ಥಳದಲ್ಲಿ ಯಾರಿಗೂ ಕಾಣದಂತೆ ಇಡಬೇಕು. ಪೊರಕೆಯನ್ನು ಎಂದಿಗೂ ಕಪಾಟಿನ ಬಳಿ ಇಡಬೇಡಿ ಇದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ.

ವಾಸ್ತು ಪ್ರಕಾರ, ಮುರಿದ ವಸ್ತುಗಳನ್ನು ಎಂದಿಗೂ ಬಳಸಬೇಡಿ. ಒಡೆದ ಪಾತ್ರೆಗಳನ್ನು ಮನೆಯಲ್ಲಿ ಇಡಬಾರದು. ಹಾಗೆಯೇ ಹರಿದು ಹೋದ ಚಪ್ಪಲಿ ಮತ್ತು ಬಟ್ಟೆಗಳನ್ನು ಧರಿಸಬಾರದು. ನೀವು ಈ ವಸ್ತುಗಳನ್ನು ಮನೆಯಿಂದ ಹೊರ ಹಾಕದೇ ಇದ್ದರೆ ಮನೆಯಲ್ಲಿ ದರಿದ್ರ ಬರುತ್ತದೆ.

ಮನೆಗಳಲ್ಲಿ ಬೊನ್ಸಾಯ್​ ಗಿಡಗಳನ್ನು ನೆಡುವುದು ಒಳ್ಳೆಯದಲ್ಲ. ಬೊನ್ಸಾಯ್​ ಗಿಡ ಮನೆಯಲ್ಲಿ ಇದ್ದರೆ ಪ್ರಗತಿ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಯಲ್ಲಿ ಪಾಪಾಸ್​ ಕಳ್ಳಿಯಂತಹ ಗಿಡಗಳನ್ನು ಮನೆ ಹಾಗೂ ಕಚೇರಿಗಳಲ್ಲಿ ನೆಡಬೇಡಿ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ .

vastu tips use this color in the house you will get benefit

ಇದನ್ನು ಓದಿ : Vaastu tips : ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ನಿಮಗೆ ಸಿಗಲಿದೆ ಶುಭ ಲಾಭ

ಇದನ್ನೂ ಓದಿ : Vaastu tips for bedroom : ಮಲಗುವ ಕೋಣೆಯ ವಿಚಾರದಲ್ಲಿ ಎಂದಿಗೂ ಮಾಡಬೇಡಿ ಈ ತಪ್ಪು

Comments are closed.