Bedroom Vastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್​

Bedroom Vastu Tips : ದಾಂಪತ್ಯ ಜೀವನ ಸುಖಮಯವಾಗಿ ಇರಬೇಕು ಅಂದರೆ ಪತಿ – ಪತ್ನಿ ನಡುವೆ ಹೊಂದಾಣಿಕೆ ಚೆನ್ನಾಗಿ ಇರಬೇಕು. ಇಬ್ಬರ ನಡುವೆ ವೈಮನಸ್ಯ ಮೂಡಿತು ಅಂದರೆ ದಾಂಪತ್ಯವೆಂಬ ನೊಗ ಸರಿಯಾದ ದಿಕ್ಕಿನಲ್ಲಿ ಸಾಗದು. ನಿಮ್ಮ ದಾಂಪತ್ಯ ಜೀವನದಲ್ಲಿಯೂ ಕಲಹ ಏರ್ಪಡುತ್ತಿದ್ದರೆ, ಸಾಕಷ್ಟು ಪ್ರಯತ್ನ ಪಟ್ಟ ಬಳಿಕವೂ ವೈವಾಹಿಕ ಜೀವನದ ಸುಧಾರಿಸುತ್ತಿಲ್ಲವೆಂದರೆ ನೀವು ವಾಸ್ತು ದೋಷದ ಸಮಸ್ಯೆ ಸಿಲುಕಿದ್ದೀರಿ ಅಂತಲೇ ಅರ್ಥ. ನಿಮ್ಮ ಮಲಗುವ ಕೋಣೆಯಲ್ಲಿ ವಾಸ್ತು ದೋಷವಿದ್ದರೆ ದಾಂಪತ್ಯ ಜೀವನದಲ್ಲಿ ಕಲಹ ಏರ್ಪಡುವ ಸಾಧ್ಯತೆ ಇರುತ್ತದೆ.


ನಿಮ್ಮ ಮಲಗುವ ಕೋಣೆಗೆ ಸೀಮಿತವಾದ ಕೆಲವು ವಾಸ್ತು ಟಿಪ್ಸ್​​ ನಿಮ್ಮ ದಾಂಪತ್ಯ ಜೀವನದ ಕಲಹಗಳನ್ನು ದೂರ ಮಾಡಬಲ್ಲದು. ಹಾಗಾದರೆ ಇದಕ್ಕಾಗಿ ನೀವು ಏನೆಲ್ಲ ಮಾಡಬೇಕು ಅನ್ನೋದಕ್ಕೆ ಇಲ್ಲಿದೆ ಮಾಹಿತಿ :
ಹಾಸಿಗೆ :
ಮಲಗುವ ಕೋಣೆಯ ಹಾಸಿಗೆಯು ನೈಋತ್ಯ ದಿಕ್ಕಿನಲ್ಲಿ ಇರಬೇಕು. ನೀವು ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು. ಪಶ್ಚಿಮ ಅಥವಾ ಉತ್ತರ ದಿಕ್ಕಿಗೆ ಕಾಲುಗಳನ್ನು ಇಟ್ಟು ಮಲಗಬೇಕು. ಅಲ್ಲದೇ ನಿಮ್ಮ ಮಂಚವು ಲೋಹದಿಂದ ಮಾಡದೇ ಮರದಿಂದ ಮಾಡಿದ್ದಾಗಿರಲಿ. ಲೋಹದ ಮಂಚಗಳು ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತವೆ. ಪ್ರತ್ಯೇಕ ಹಾಸಿಗೆಗಳನ್ನು ಕೂಡಿಸಬೇಡಿ. ಅದರ ಬದಲು ಒಂದೇ ಹಾಸಿಗೆಯಲ್ಲಿ ಮಲಗಿ.


ನೆಲ
ವಾರದಲ್ಲಿ ಒಮ್ಮೆಯಾದರೂ ಉಪ್ಪು ಬೆರೆಸಿದ ನೀರಿನಲ್ಲಿ ಮಲಗುವ ಕೋಣೆಯ ನೆಲವನ್ನು ಒರೆಸಿ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ .


ದಿಂಬುಗಳು :
ಹಾಸಿಗೆಯ ಮೇಲೆ 2 – 3 ದಿಂಬುಗಳು ಇದ್ದರೆ ಸಾಕು. ಇದಕ್ಕೂ ಅಧಿಕ ದಿಂಬುಗಳು ಹಾಸಿಗೆಯ ಮೇಲೆ ಇರುವುದು ಶುಭಕರವಲ್ಲ.


ಗೋಡೆಯ ಅಲಂಕಾರ
ಮಲಗುವ ಕೋಣೆಯ ಗೋಡೆಯ ಮೇಲೆ ನಕಾರಾತ್ಮಕ ಅಂಶವನ್ನು ಪ್ರತಿನಿಧಿಸುವ ಫೋಟೋಗಳನ್ನು ಹಾಕಬೇಡಿ. ಎಷ್ಟೇ ಗುಣಮಟ್ಟದ ಪೇಂಟಿಂಗ್ಸ್​ ಆಗಿದ್ದರೂ ಸಹ ಯುದ್ಧದ ದೃಶ್ಯ, ಅಳುತ್ತಿರುವಂತಹ ಚಿತ್ರಗಳನ್ನು ಮಲಗುವ ಕೋಣೆಯಿಂದ ತೆಗೆದು ಹಾಕಿ.

Useful Bedroom Vastu Tips For Couples To Avoid Conflicts, Separation

ಇದನ್ನು ಓದಿ : Vaastu tips : ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ನಿಮಗೆ ಸಿಗಲಿದೆ ಶುಭ ಲಾಭ

ಇದನ್ನೂ ಓದಿ : Vaastu tips for bedroom : ಮಲಗುವ ಕೋಣೆಯ ವಿಚಾರದಲ್ಲಿ ಎಂದಿಗೂ ಮಾಡಬೇಡಿ ಈ ತಪ್ಪು

Comments are closed.