vastu tips : ಅಗಲಿದ ಕುಟುಂಬದ ಹಿರಿಯರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಮನೆಯಲ್ಲಿ ಪೂರ್ವಜರ ಚಿತ್ರವನ್ನು ನೇತು ಹಾಕಿ ಅದಕ್ಕೆ ನಿತ್ಯ ಪೂಜೆಯನ್ನು ಮಾಡಲಾಗುತ್ತದೆ. ಕೆಲವರು ಪೂಜಾ ಸ್ಥಳದಲ್ಲಿ ದೇವರ ಫೋಟೋಗಳ ನಡುವೆ ಅಗಲಿದವರ ಫೋಟೋಗಳನ್ನು ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ಮಾಡುವುದು ಸರಿಯಲ್ಲ. ಈ ರೀತಿ ಮಾಡುವುದರಿಂದ ದೇವರಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಮನೆಯ ಯಾವೆಲ್ಲ ಕಡೆಗಳಲ್ಲಿ ಅಗಲಿದವರ ಫೋಟೋಗಳನ್ನು ಇಡಬಾರದು ಎಂಬುದಕ್ಕೆ ಇಲ್ಲಿದೆ ಮಾಹಿತಿ :
ದೇವರ ಕೋಣೆಯಲ್ಲಿ :
ಶಾಸ್ತ್ರಗಳ ಪ್ರಕಾರ ಮನೆಯ ದೇವರ ಕೋಣೆಯಲ್ಲಿ ಪೂರ್ವಜರ ಫೋಟೋಗಳನ್ನು ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ದೇವರಿಗೆ ಅಪಮಾನವೆಸಗಿದಂತಾಗುತ್ತದೆ. ಅಲ್ಲದೇ ಇದರಿಂದ ದೇವತೆಗಳು ಕೋಪಗೊಳ್ಳುತ್ತಾರೆ ಎಂದು ನಂಬಲಾಗಿದೆ. ಪೂರ್ವಜರು ಹಾಗೂ ದೇವರು ಒಂದೇ ಸಮಾನ ಎಂದು ಹೇಳಲಾಗುತ್ತದೆಯಾದರೂ ಇಬ್ಬರ ಫೋಟೋಗಳನ್ನು ಒಂದೇ ಸ್ಥಳದಲ್ಲಿ ಇಡುವುದು ಶುಭಕರವಲ್ಲ.
ಜೀವಂತ ಇರುವವರೊಂದಿಗೆ :
ಅಗಲಿದವರ ಫೋಟೋಗಳನ್ನು ಜೀವಂತ ವ್ಯಕ್ತಿಗಳ ಫೋಟೋಗಳೊಂದಿಗೆ ಇಡಬಾರದು. ಈ ರೀತಿ ಮಾಡುವುದರಿಂದ ಜೀವಂತ ವ್ಯಕ್ತಿಗಳ ಆಯಸ್ಸು ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೇ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮವುಂಟಾಗುತ್ತದೆ.
ಮಲಗುವ ಕೋಣೆ ಅಥವಾ ಅಡುಗೆಮನೆಯಲ್ಲಿ
ನಿಮ್ಮ ಮಲಗುವ ಕೋಣೆ ಅಥವಾ ಅಡುಗೆಮನೆಯಲ್ಲಿ ಪೂರ್ವಜರ ಚಿತ್ರಗಳನ್ನು ಹಾಕಬೇಡಿ . ಶಾಸ್ತ್ರಗಳ ಪ್ರಕಾರ, ಪೂರ್ವಜರ ಫೋಟೋವನ್ನು ಮಲಗುವ ಕೋಣೆ ಅಥವಾ ಅಡುಗೆಮನೆಯಲ್ಲಿ ಹಾಕುವುದು ಅವರಿಗೆ ಅವಮಾನವಾಗಿದೆ. ಇದರಿಂದ ನಿಮ್ಮ ಸಂಸಾರದಲ್ಲಿ ಬಿರುಕು ಉಂಟಾಗಿ ಸಂತೋಷ ಮತ್ತು ಸಮೃದ್ಧಿ ಕಡಿಮೆಯಾಗುತ್ತದೆ.
ನೇತು ಹಾಕಬೇಡಿ :
ಶಾಸ್ತ್ರಗಳ ಪ್ರಕಾರ, ಪೂರ್ವಜರ ಚಿತ್ರಗಳನ್ನು ಮನೆಯಲ್ಲಿ ಗೋಡೆಯ ಮೇಲೆ ನೇತು ಹಾಕಬಾರದು.ಇವುಗಳನ್ನು ನೀವು ಮರದ ಸ್ಟ್ಯಾಂಡ್ಗಳ ಮೇಲೆ ಫೋಟೋಗಳನ್ನು ಇರಿಸಬಹುದು.
ಅತಿಥಿ ಕೋಣೆಯಲ್ಲಿ :
ಅತಿಥಿಗಳು ಬಂದು ಹೋಗಬೇಕಾದ ಅತಿಥಿ ಕೊಠಡಿಯಲ್ಲಿ ಪೂರ್ವಜರ ಚಿತ್ರಗಳನ್ನು ಹಾಕುವುದು ಅಶುಭವೆಂದು ಪರಿಗಣಿಸಲಾಗಿದೆ. ಅತಿಥಿಗಳ ಕಣ್ಣುಗಳು ಕಾಣುವ ಸ್ಥಳದಲ್ಲಿ ಪೂರ್ವಜರ ಚಿತ್ರವನ್ನು ಎಂದಿಗೂ ಇಡಬೇಡಿ. ಏಕೆಂದರೆ ಇದು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
ಇದನ್ನು ಓದಿ : Groom Arrest : ತಾಳಿ ಕಟ್ಟುವ ವೇಳೆಯಲ್ಲೇ ಅತ್ಯಾಚಾರ ಕೇಸ್‌ನಲ್ಲಿ ವರ ಅರೆಸ್ಟ್
ಇದನ್ನೂ ಓದಿ : vastu tips : ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು ಇಲ್ಲಿದೆ ನೋಡಿ ವಾಸ್ತು ಸಲಹೆಗಳು
vastu tips never put ancestors pictures in these places at home