Cubbon Park : ಶ್ವಾನ ಪ್ರಿಯರಿಗೆ ಕಾದಿದೆ ಶಾಕ್ : ಇನ್ಮುಂದೇ ಡಾಗ್ ಗಳಿಗೆ ಸಿಗಲ್ಲ ಕಬ್ಬನ್ ಪಾರ್ಕ್ ಎಂಟ್ರಿ

ಬೆಂಗಳೂರು : ಉದ್ಯಾನ‌ನಗರಿ ಎಂದೇ ಕರೆಯಿಸಿಕೊಳ್ಳೋ ಬೆಂಗಳೂರಿನ ಪ್ರಮುಖ ಆಕರ್ಷಣೆ ಅಂದ್ರೇ ಕಬ್ಬನ್ ಪಾರ್ಕ್ (Cubbon Park ) . ಆದರೆ ಈ ಕಬ್ಬನ್ ಪಾರ್ಕ್ ಈಗ ನಾಯಿಗಳ ಕೊಂಪೆಯಾಗಿ ಪರಿಣಮಿಸಿದ್ದು, ನಿಷೇಧದ‌ ನಡುವೆಯೂ ನಾಯಿಗಳನ್ನು ಪಾರ್ಕ್ ಗೆ ಕರೆ ತರೋ ಜನರಿಗೆ ತೋಟಗಾರಿಕೆ ಶಾಕ್ ಕೊಡಲು ಸಿದ್ಧವಾಗಿದ್ದು ದಂಡ ವಿಧಿಸಲು ಅಥವಾ ನಾಯಿಗಳಿಗೆ ನಿಷೇಧ ಹೇರಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕಬ್ಬನ್ ಪಾರ್ಕ್ ನಲ್ಲಿ ಪ್ರತಿನಿತ್ಯ ನೂರಾರು ಶ್ವಾನ‌ಪ್ರಿಯರು ತಮ್ಮ ನಾಯಿ ಜೊತೆ ವಾಕಿಂಗ್ ಬರ್ತಾರೆ. ಹೀಗೆ ಪಾರ್ಕ್ ಬರೋ ನಾಯಿಗಳು ಎಲ್ಲೆಂದರಲ್ಲಿ ಹೇಸಿಗೆ ಮಾಡಿ ವಾಯು ವಿಹಾರಿಗಳಿಗೂ ಅಸಹ್ಯ ಹುಟ್ಟಿಸುತ್ತಿವೆ. ಹೀಗಾಗಿ ಶ್ವಾನಗಳ ವಾಯುವಿಹಾರಕ್ಕೆ ನಿಷೇಧ ಹೇರುವಂತೆ ವಾಯುವಿಹಾರಿಗಳು ಈ ಹಿಂದಿನಿಂದಲೂ ಆಗ್ರಹಿಸುತ್ತ ಬಂದಿದ್ದಾರೆ.ಆದರೆ ಇದು ಸಾಧ್ಯವಾಗಿಲ್ಲ. ಈ ನಾಯಿಗಳ ನಿಯಂತ್ರಣಕ್ಕಾಗಿ ಈಗಾಗಲೇ ಕಬ್ಬನ್ ಪಾರ್ಕ್ ನಲ್ಲಿ ನಾಯಿಗಳಿಗಾಗಿ ವಿಶೇಷ ಮಾರ್ಗಸೂಚಿ ತೋಟಗಾರಿಕೆ ಇಲಾಖೆ ಹೊರಡಿಸಿದೆ. ಆದರೆ ಈ ನಿಯಮ ಕೇವಲ ಕಬ್ಬನ್ ಪಾರ್ಕ್ ನ ಗೇಟ್ ಗಳ ಬೋರ್ಡ್ ನಲ್ಲೇ ಉಳಿದುಕೊಂಡಿದೆ.

  • ನಾಯಿಗಳಿಗೆ ಆರು ಅಡಿ ಉದ್ದದ ಬೆಲ್ಟ್ ಹಾಕುವುದು
  • ಆ್ಯಂಟಿ ರೇಬಿಸ್ ಲಸಿಕೆ ಪಡೆದಿರುವುದು
  • ನಾಯಿಗಳು ಮಾಡುವ ಮಲ ಮೂತ್ರಗಳನ್ನು ಮಾಲೀಕರೇ ಸ್ವಚ್ಛ ಮಾಡುವುದು
  • ನಾಯಿಗಳಿಗೆ ಉದ್ಯಾನವನದಲ್ಲಿ ಆಹಾರ ನೀಡಬಾರದು
  • ಉಗ್ರ ಸ್ವರೂ ಸ್ವರೂಪದ ಹಾಗೂ ದೊಡ್ಡ ಗಾತ್ರ ನಾಯಿಗಳಿಗೆ ನಿಷೇಧ
  • ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಅದಕ್ಕೆ ಮಾಲೀಕರೇ ಹೊಣೆ ಇಷ್ಟು ನಿಯಮ ವಿಧಿಸಲಾಗಿದೆ. ಆದರೆ ತೋಟಗಾರಿಕೆ ಇಲಾಕೆಯ ಈ ನಿಯಮ ಪಾಲನೆಯಾಗ್ತಿಲ್ಲ. ಇಲಾಖೆ ಗೈಡ್ ಲೈನ್ಸ್ ಗಾಳಿಗೆ ತೂರಿ ನಾಯಿಗಳ ಜೊತೆ ವಾಕಿಂಗ್ ಗೆ ಬರುತ್ತಿರುವ ಜನರು ಇತರ ವಾಯುವಿಹಾರಿಗಳಿಗೂ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಹೀಗಾಗಿ ನಿಯಮ ಪಾಲಿಸದೇ ನಾಯಿಯನ್ನು ತರೋ ಜನರಿಗಾಗಿ ದಂಡ ವಿಧಿಸುವ ಪ್ರಸ್ತಾವನೆಯನ್ನು ತೋಟಗಾರಿಕಾ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ.

ಬೆಲ್ಟ್ ಧರಿಸದ ನಾಯಿಗಳಿಗೆ 100 ರೂಪಾಯಿ ಹಾಗೂ ಮಲ ಮೂತ್ರ ಮಾಡಿದರೆ 500 ರೂಪಾಯಿ ದಂಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮಗೆ ದಂಡ ವಿಧಿಸುವ ಹಕ್ಕಿಲ್ಲ, ಹೀಗಾಗಿ ದಂಡ ವಿಧಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ತೋಟಗಾರಿಕಾ ಇಲಾಖೆಯ ಅಧಿಕಾರಿ. ಈ ಬಗ್ಗೆ ಮಾಹಿತಿ ನೀಡಿರೋ ಕಬ್ಬನ್ ಪಾರ್ಕ್ ಕಾಲ್ನಡಿಗೆ ಸಂಘದ ಅಧ್ಯಕ್ಷ ಉಮೇಶ್, ನಾವು ಕಬ್ಬನ್ ಪಾರ್ಕ್ ನಲ್ಲಿ ಲಾಲ್ ಭಾಗ್ ಮಾದರಿಯಲ್ಲಿ ಸಂಪೂರ್ಣವಾಗಿ ನಾಯಿಗಳ ಪ್ರವೇಶಕ್ಕೆ ನಿಷೇಧ ಹೇರಲು ಮನವಿ ಸಲ್ಲಿಸಿದ್ದೇವೆ ಎಂದಿದ್ದಾರೆ. ಅದನ್ನೂ ಸರ್ಕಾರದ ಮುಂದೆ ಇಟ್ಟಿರುವ ತೋಟಗಾರಿಕಾ ಮುಂದಿನ ವಾರ ಸಭೆ ನಡೆಯಲಿರುವ ಸಭೆಯಲ್ಲಿ ಒಂದು ಸ್ಪಷ್ಟ ತೀರ್ಮಾನ ಸಿಗೋ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ :  ಬೆಂಗಳೂರು ಕರಗಕ್ಕೆ ಕ್ಷಣಗಣನೆ: ಲಕ್ಷಾಂತರ ಜನರು ಭಾಗಿಯಾಗೋ ನೀರಿಕ್ಷೆ

ಇದನ್ನೂ ಓದಿ : ಪೌರ ಕಾರ್ಮಿಕರ ಕಷ್ಟಕ್ಕೆ ಕಣ್ತೆರೆದ ಬಿಬಿಎಂಪಿ : ಕಾರ್ಮಿಕರಿಗೆ ಬರಲಿದೆ ಸುವಿಧಾ ಕ್ಯಾಬಿನ್

Dog not Allowed Cubbon Park Horticulture Department Request Government

Comments are closed.