Veer Savarkar Remembrance: ಕಠಿಣ ಕರಿನೀರಿನ ಶಿಕ್ಷೆಯನ್ನನುಭವಿಸಿದ ಧೀರ ವೀರ ಸಾವರ್ಕರ್ ಪುಣ್ಯಸ್ಮರಣೆ

(Veer Savarkar Remembrance) ದೇಶದ ಸ್ವಾತಂತ್ರ್ಯಕ್ಕಾಗಿ ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಕಾಲ ಕಠಿಣಾತಿ ಕಠಿಣ ಕರಿನೀರ ಶಿಕ್ಷೆಯನ್ನನುಭವಿಸಿದ ಭಾರತ ಮಾತೆಯ ಧೀರ ಸುಪುತ್ರ ವಿನಾಯಕ ದಾಮೋದರ ಸಾವರ್ಕರ್‌ ಅವರು ತಾಯಿ ಭಾರತಾಂಬೆಯ ಮಡಿಲು ಸೇರಿದ ದಿನವಿಂದು. ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಸಿಟ್ಟ ಮಹಾನ್‌ ವಾಗ್ಮಿ, ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ ಹಾಗೂ ಸಮಾಜಸೇವಕ ರಾಗಿದ್ದ ವೀರ ಸಾವರ್ಕರ್‌ ಅವರನ್ನು ಭಾರತ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂತಲೇ ಪರಿಗಣಿಸಲಾಗಿದೆ.

1883 ರ ಮೇ 28 ರಂದು ಜನಿಸಿದ ಸಾವರ್ಕರ್‌ ಅವರು ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತೀಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿಯನ್ನು ಹೊಂದಿದ್ದರು. ಅವರು ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ-೧೮೫೭” ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯಾಗಿತ್ತು. ವಿದ್ಯಾರ್ಥಿಯಾಗಿದ್ದಾಗಲೇ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ ಇವರು ನಂತರ ತಿಲಕರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಬ್ರಿಟಿಷ್ ಅಧಿಕಾರಿಗಳ ಬಗೆಗೇ ಆಗಲಿ, ಅವರ ಕಾನೂನುಗಳ ಬಗೆಗೆ ಆಗಲಿ, ಗೊಣಗುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕೊನೆಯೂ ಇಲ್ಲ. ನಮ್ಮ ಚಳುವಳಿ ಯಾವುದೇ ನಿರ್ದಿಷ್ಟ ಕಾನೂನನ್ನು ವಿರೋಧಿಸುವುದಕ್ಕಷ್ಟೇ ಸೀಮಿತವಾಗದೆ, ಆ ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕಿಗಾಗಿ ಇರಬೇಕು. ಅರ್ಥಾತ್, ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು”ಎಂದು ಸಾವರ್ಕರ್‌ ಹೇಳಿದ್ದರು.

1909ರಲ್ಲಿ , ಸಾವರ್ಕರರ ನಿಕಟ ಅನುಯಾಯಿ, ಮದನಲಾಲ್ ಧಿಂಗ್ರಾ, ಆಗಿನ ವೈಸರಾಯ್ ಲಾರ್ಡ್ ಕರ್ಜನ್ನನ ವಧೆಯ ಪ್ರಯತ್ನ ವಿಫಲವಾದ ನಂತರ, ಸರ್ ವಾಯ್ಲೀ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ. ಇದರ ಫಲವಾಗಿ ಉಂಟಾದ ರಾಜಕೀಯ ಗೊಂದಲದಲ್ಲಿ, ಸಾವರ್ಕರ್ ಈ ಘಟನೆಯನ್ನು ಖಂಡಿಸಲು ನಿರಾಕರಿಸಿದ್ದು, ಎದ್ದು ಕಾಣಿಸಿಕೊಂಡರು. ಇದರಿಂದಾಗಿ ಸಾವರ್ಕರ್ ಕೊನೆಗೂ ಬ್ರಿಟಿಷ್ ಅಧಿಕಾರಿಗಳ ಬಲೆಯಲ್ಲಿ ಸಿಕ್ಕಿಬಿದ್ದರು. ಇಂಡಿಯಾ ಹೌಸ್ ನೊಂದಿಗೆ ಸಾವರ್ಕರರ ಸಂಪರ್ಕವನ್ನೇ ನೆಪಮಾಡಿ ಅವರನ್ನು ಈ ಕೊಲೆಯಲ್ಲಿ ಅಪರಾಧಿ ಎಂದು ನಿರ್ಣಯಿಸಲಾಯಿತು. 13ನೇ ಮಾರ್ಚ್ 1910ರಂದು ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿ, ನಂತರ ಪ್ಯಾರಿಸಿನಲ್ಲಿ ಅವರನ್ನು ಬಂಧಿಸಲಾಯಿತು. ಮಾರ್ಸೇಲ್ಸ್ ನಿಂದ ಪರಾರಿಯಾಗುವ ಅವರ ಧೀರ ಪ್ರಯತ್ನ ವಿಫಲವಾಯಿತು. ಅವರನ್ನು ಹಿಡಿದು ಮುಂಬಯಿಗೆ “ ಎಸ್.ಎಸ್.ಮೊರಿಯಾ” ಹಡಗಿನಲ್ಲಿ ತಂದು, ಯೆರವಡಾ ಜೈಲಿನಲ್ಲಿ ಬಂಧಿಸಲಾಯಿತು.

ಇದನ್ನೂ ಓದಿ : Balakot airstrike day: ಇಂದು ಭಾರತದ ಪಾಲಿಗೆ ಅವಿಸ್ಮರಣೀಯ ದಿನ: ಬಾಲಕೋಟ್‌ ವೈಮಾನಿಕ ದಾಳಿಗೆ ಮೂರು ವರ್ಷ

ಅವರು “ಹಿಂದುತ್ವ” ಕೃತಿ ಬರೆದದ್ದು ರತ್ನಾಗಿರಿಯ ಜೈಲಿನಲ್ಲಿದ್ದಾಗ. ಅವರ ಚಟುವಟಿಕೆಗಳಿಗೆ ಹಾಗೂ ತಿರುಗಾಟಕ್ಕೆ ತೀವ್ರ ನಿರ್ಬಂಧಗಳನ್ನು ಹಾಕಿ, ಜನವರಿ 6,1924ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಹಿಂದುತ್ವದ ಪರಿಕಲ್ಪನೆಯನ್ನು ಸಾವರ್ಕರ್ ಮೊಟ್ಟಮೊದಲು ಜಾಹೀರು ಮಾಡಿ, ಅದರ ವಿಷಯವಾಗಿ ಬಹಳಷ್ಟು ಬರೆದರು. ಇದಾದ ಬಳಿಕ ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಪುನಃ ಜೈಲು ಸೇರಿದರು. ಸರ್ವೋಚ್ಛ ನ್ಯಾಯಾಲಯವು, ಸಾಕ್ಷ್ಯಾಧಾರಗಳಿಲ್ಲದ್ದರಿಂದ, ಅವರನ್ನು ಬಿಡುಗಡೆ ಮಾಡಿತು. “ಸಾಕ್ಷ್ಯಾಧಾರಗಳಿಲ್ಲದ್ದರಿಂದ ಸಾವರ್ಕರರನ್ನು ನಿರ್ದೋಷಿ ಎಂದು ಘೋಷಿಸಿ ಬಿಡುಗಡೆ ಮಾಡಲಾ ಯಿತು” ಎಂದು ಹೇಳಲಾಗುತ್ತದೆ.

Veer Savarkar Remembrance: Commemoration of brave hero Savarkar who suffered severe black water punishment

Comments are closed.