ಶನಿವಾರ, ಏಪ್ರಿಲ್ 26, 2025
HomeSpecial Storyಕಾರ್ತೀಕ ಸೋಮವಾರದ ಆಚರಣೆ ಮಹತ್ವವೇನು ? ಶಿವನನ್ನು ಅರ್ಚಿಸುವುದು ಹೇಗೆ ?

ಕಾರ್ತೀಕ ಸೋಮವಾರದ ಆಚರಣೆ ಮಹತ್ವವೇನು ? ಶಿವನನ್ನು ಅರ್ಚಿಸುವುದು ಹೇಗೆ ?

Karthika Masa : ಸೋಮವಾರದಂದು ಶಿವನ ಆರಾಧನೆಯನ್ನು ಸುಖ, ಶಾಂತಿ, ಸಮೃದ್ಧಿ ಹಾಗೂ ಧೀರ್ಘಾಯುಷ್ಯಕ್ಕಾಗಿ ಕೈಗೊಳ್ಳುವುದು ವಾಡಿಕೆ.

- Advertisement -

Karthika Masa : ಸೋಮವಾರದಂದು ಶಿವನ ಆರಾಧನೆಯನ್ನು ಸುಖ, ಶಾಂತಿ, ಸಮೃದ್ಧಿ ಹಾಗೂ ಧೀರ್ಘಾಯುಷ್ಯಕ್ಕಾಗಿ ಕೈಗೊಳ್ಳುವುದು ವಾಡಿಕೆ. ಅದರಲ್ಲೂ ಕಾರ್ತೀಕ ಸೋಮವಾರದ ಆಚರಣೆ ಉತ್ತರ ಭಾರತದಿಂದ ಆರಂಭಿಸಿ ದಕ್ಷಿಣ ಭಾರತದವರೆಗೂ ಎಲ್ಲೆಡೆಯೂ ಸಾರ್ವತ್ರಿಕವಾಗಿದೆ. ಸೋಲಹ್ ಸೋಮವಾರದ ವ್ರತ ಉತ್ತರ ಭಾರತದಲ್ಲಿ ಸೋಮವಾರದ ಮಹತ್ವವನ್ನು ಸಾರುತ್ತದೆ. ಕರ್ನಾಟಕದಲ್ಲಿ ದೀಪಾರಾಧನೆಯ ಮೂಲಕ ಹಾಗೂ ಕ್ಷೀರಾಭಿಷೇಕದ ಮೂಲಕ ಕಾರ್ತೀಕ ಸೋಮವಾರವನ್ನು ಆಚರಿಸಲಾಗುತ್ತದೆ.

ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳೆಂದರೇ ಭಸ್ಮ,ಕ್ಷೀರ,ರುದ್ರಾಕ್ಷಿ, ಬಿಲ್ವಪತ್ರೆ, ಎಕ್ಕೆ ಎಲೆ ಮತ್ತು ಹೂವು ಹಾಗೂ ಲಕ್ಕಿಸೊಪ್ಪು. ಇವುಗಳನ್ನು ಅರ್ಪಿಸುವುದರಿಂದ ಹಾಗೂ ಕ್ಷೀರಾಭಿಷೇಕ, ಜಲಾಭೀಷೇಕದಿಂದ ಶಿವನು ಅತ್ಯಂತ ಪ್ರಸನ್ನನಾಗುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಹೀಗಾಗಿ ಸೋಮವಾರದಂದು ಜನರು ಶಿವದೇವಾಲಯಗಳಿಗೆ ತೆರಳಿ ಅಭಿಷೇಕ ಮಾಡಿಸಿ ಪೂಜೆ ಸಲ್ಲಿಸಿ ಶಿವಪಂಚಾಕ್ಷರಿ ಮಂತ್ರ ಪಠಿಸಿ ತಮ್ಮ ಕಷ್ಟಗಳಿಗೆ ಪರಿಹಾರ ಕೋರುತ್ತಾರೆ.

ದಂತಕಥೆಯ ಪ್ರಕಾರ, ದಕ್ಷನಿಂದ ಚಂದ್ರ ದೇವ ಶಾಪಗ್ರಸ್ತ ಆಗುತ್ತಾನೆ. ಚಂದ್ರನು ತನ್ನ 27 ಹೆಂಡತಿಯರನ್ನು (ದಕ್ಷನ ಹೆಣ್ಣುಮಕ್ಕಳನ್ನು) ಸಮಾನವಾಗಿ ಪರಿಗಣಿಸಲಿಲ್ಲ. ಒಂದು ಹೆಂಡತಿಗೆ ಪ್ರೀತಿ ನೀಡಿದ್ರೆ, ಇನ್ನೊಂದು ಹೆಂಡತಿಗೆ ಮಾತ್ಸರ್ಯವನ್ನು ತೋರಿಸುತ್ತಿದ್ದ. ಇದೇ ಕಾರಣದಿಂದ ಕೋಪಗೊಂಡ ದಕ್ಷ ಮಹಾರಾಜನು ಚಂದ್ರನಿಗೆ ಕ್ಷೀಣಿಸುವ ಮತ್ತು ಕಳೆಗುಂದು ಎಂದು ಶಾಪವನ್ನು ನೀಡಿದ್ದಾನೆ. ದಿನ ಕಳೆದಂತೆ ದಕ್ಷನ ಶಾಪದಿಂದ ಚಂದ್ರನ ಶಕ್ತಿ ಹಾಗೂ ಹೊಳಪು ಮಸುಕಾಗಲು ಆರಂಭವಾಯಿತು.

ಅವನು ಕ್ಷೀಣಿಸುವ ಕೊನೆಯ ಹಂತದಲ್ಲಿದ್ದಾಗ, ತನ್ನನ್ನು ರಕ್ಷಿಸಬೇಕು ಎಂದು ಶಿವನನ್ನು ಪ್ರಾರ್ಥಿಸಿದನು. ಚಂದ್ರನ ಪ್ರಾರ್ಥನೆಯಿಂದ ಸಂತಸಗೊಂಡ ಶಿವನು ಅವನನ್ನು ಶಾಪದಿಂದ ಮುಕ್ತಗೊಳಿಸಿದ್ದು ಮಾತ್ರವಲ್ಲ, ಅರ್ಧಚಂದ್ರಾಕೃತಿಯನ್ನು ಅವನ ತಲೆಯ ಮೇಲೆ ಇರಿಸಿದ್ದಾನೆ. ಇದೇ ಕಾರಣದಿಂದಲೇ ಅಂದಿನಿಂದ ಶಿವನನ್ನು “ಚಂದ್ರಮೌಳೀಶ್ವರ” ಅಥವಾ “ಸೋಮೇಶ್ವರ” ಎಂದು ಕರೆಯುತ್ತಾರೆ.

ಕಾರ್ತಿಕ ತಿಂಗಳ ಸೋಮವಾರದಂದು ಶಿವನು ಚಂದ್ರನನ್ನು ಶಾಪದಿಂದ ವಿಮೋಚನೆ ನೀಡಿ ವರವನ್ನು ಆಶೀರ್ವದಿಸಿದ್ದಾನೆನ್ನುವ ನಂಬಿಕೆಯಿದೆ. ಆದ್ದರಿಂದ, ಕಾರ್ತಿಕ ತಿಂಗಳ ಸೋಮವಾರ ಶಿವನನ್ನು ಆರಾಧಿಸಿ, ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಕಾರ್ತಿಕ ಸೋಮವಾರದಂದು ಸ್ನಾನ ಮಾಡಿದ ನಂತರ, ಶಿವ ದೇವಾಲಯಕ್ಕೆ ತೆರಳಿ ಅಲ್ಲಿರುವ ಶಿವಲಿಂಗಕ್ಕೆ ಹಾಲಿನ ಅಭಿಷೇಕವನ್ನು ಮಾಡಿಸಬೇಕು. ಅಲ್ಲದೇ ನಂತರ ಶ್ರೀಗಂಧ, ಅಕ್ಕಿ, ವೀಳ್ಯದೆಲೆ, ಬಿಲ್ವಪತ್ರೆ ಮತ್ತು ದಾತುರವನ್ನು ಅರ್ಪಿಸಿ. ನಂತರ ಶಿವನಿಗೆ ಆರತಿಯನ್ನು ಮಾಡಿ ಮತ್ತು ‘ಓಂ ನಮಃ ಶಿವಾಯ’ ಮಂತ್ರವನ್ನು ಪಠಿಸುವುದರಿಂದ ಆಯುಷ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಕಾರ್ತಿಕ ಸೋಮವಾರದಂದು “ಏಕಾದಶ ರುದ್ರಾಭಿಷೇಕ” ಮಾಡುವುದು ಸಹ ಅತ್ಯಂತ ಮಂಗಳಕರವಾಗಿದೆ. ತುಂಬಾ ಮಂಗಳಕರ. ಮನೆಯಲ್ಲಿ ಇದನ್ನು ಮಾಡಲು ಸಾಧ್ಯವಾಗದವರು ಈ ದಿನ ಶಿವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಬಿಲ್ವ ಪತ್ರೆಯಿಂದ ಅರ್ಚನೆ ಮಾಡಿಸುವುದು ಕೂಡ ಶಿವನ ಆರಾಧನೆಯಲ್ಲಿ ಅತ್ಯಂತ ಮಹತ್ವ ಪಡೆದಿದೆ. ಇನ್ನು ಹಲವೆಡೆ ಅಂದು ಹೆಂಗಳೆಯರು ತಮ್ಮ ಹಾಗೂ ಪತಿಯ ಆಯುಷ್ಯವೃದ್ಧಿಗಾಗಿ ಶಿವನಿಗೆ ಬೆಲ್ಲದ ಆರತಿ ಬೆಳಗುವ ಸಂಪ್ರದಾಯವಿದೆ. ಹಾಳೆಯ ಅಥವಾ ಸ್ಟೀಲ್ ನ ಬಟ್ಟಲಲ್ಲಿ ಅಕ್ಕಿ ಹರಡಿ ಅದರ ಮೇಲೆ ಬೆಲ್ಲದ ಅಚ್ಚನ್ನಿಟ್ಟು ಅದಕ್ಕೆ ಬಾಳೆಹಣ್ಣು, ವೀಳ್ಯದೆಲೆಯ ನೈವೇದ್ಯ ತೋರಿಸಿ ಬಳಿಕ ಎಳ್ಳೆಣ್ಣೆಯಲ್ಲಿ ದೀಪ ಹಚ್ಚಿ ಶಿವನಿಗೆ ಆರತಿ ಬೆಳಗುತ್ತಾರೆ. ಇದೇ ಆರತಿಯನ್ನು ದೇವಾಲಯದಲ್ಲಿ ಶಿವನ ಎದುರು ಇರುವ ನಂದಿಯ ಕೊಂಬಿನ ನಡುವೆಯಿಂದ ಬೆಳಗುವ ಶಾಸ್ತ್ರವೂ ಹಲವಡೆ ಅನುಕರಣೆಯಲ್ಲಿದೆ.

ಇದನ್ನೂ ಓದಿ : ನೀರಿನ ನಡುವೆಯೇ ಗುಹಾಂತರನಾಗಿ ನಿಂತಿದ್ದಾನೆ ಮೂಡಗಲ್ಲು ಶ್ರೀ ಕೇಶವ ನಾಥೇಶ್ವರ- ಇವನ ದರ್ಶನಕ್ಕೆ ಬಂದ್ರೆ ಇಲ್ಲಿ ಕಚ್ಚಲ್ಲ ಹಾವು

What is the significance of Karthika Masa celebration How to offer Shiva
Image Credit to Original Source

ಇನ್ನು ಕೆಲವು ಕಡೆ ಕಾರ್ತೀಕ ಮಾಸದ ಎಲ್ಲಾ ಸೋಮವಾರಗಳಲ್ಲಿ ಶಿವನಿಗೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಅವರು ಬೆಳಿಗ್ಗೆ ಬೇಗನೆ ಉಪವಾಸವನ್ನು ಪ್ರಾರಂಭಿಸುತ್ತಾರೆ ಮತ್ತು ಚಂದ್ರನನ್ನು ನೋಡಿದಾಗ ಅದನ್ನು ಮುರಿಯುತ್ತಾರೆ. ದಿನವಿಡೀ, ಅವರು ‘ಪಂಚಾಕ್ಷರಿ ಮಂತ್ರ’ ನಂತಹ ಶಿವ ಮಂತ್ರಗಳನ್ನು ಪಠಿಸುತ್ತಾರೆ ಮತ್ತು ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಅರ್ಪಣೆಗಳಲ್ಲಿ ಬೇಯಿಸಿದ ಅನ್ನ ಮತ್ತು ಹೂವುಗಳು ಸೇರಿವೆ. ಕಾರ್ತಿಗೈ ಸೋಮವಾರದಂದು ಶಿವನಿಗೆ ಬಿಲ್ವಪತ್ರೆಗಳಿಂದ ಅರ್ಚನವನ್ನು ಮಾಡುವುದರಿಂದ ಮಾನಸಿಕ ಶಕ್ತಿ ಮತ್ತು ಸ್ಪಷ್ಟತೆಯನ್ನು ನೀಡುತ್ತದೆ.

ಇದನ್ನೂ ಓದಿ : ಭಕ್ತರನ್ನು ಕಾಯುತ್ತಾಳೆ ಪೊಳಲಿ ರಾಜರಾಜೇಶ್ವರಿ : ಮಣ್ಣಿನ ವಿಗ್ರಹದಲ್ಲಿ ನೆಲೆಸಿದ್ದಾಳೆ ತಾಯಿ

ಈ ಮಾಸದಲ್ಲಿ ಶಿವನು ಅಗ್ನಿ ಅಥವಾ ಅಗ್ನಿಯ ರೂಪದಲ್ಲಿ ಕಾಣಿಸಿಕೊಂಡಿದ್ದರಿಂದ, ಅವನನ್ನು ತಂಪಾಗಿಸಲು ಮತ್ತು ಅವನನ್ನು ಮೆಚ್ಚಿಸಲು ಎಲ್ಲಾ ಶಿವ ದೇವಾಲಯಗಳಲ್ಲಿ ಸಂಗು ಅಭಿಷೇಕ (ಶಂಖದೊಂದಿಗೆ ಜಲಸಂಚಯನ ಪೂಜೆ) ಇರುತ್ತದೆ. ಇದರಿಂದ ಮನುಷ್ಯ ಗೊತ್ತೋ ಗೊತ್ತಿಲ್ಲದೆಯೋ ಮಾಡಿದ ಪಾಪದಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗುತ್ತದೆ. ಅಲ್ಲದೇ ಒಳ್ಳೆಯ ಸಂಗಾತಿಯನ್ನು ಪಡೆಯಲು, ಗಂಡನ ದೀರ್ಘಾಯುಷ್ಯಕ್ಕಾಗಿ, ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿ,ಸಾಲಗಳಿಂದ ಮುಕ್ತಿಗಾಗಿಯೂ ಶಿವನ ಆರಾಧನೆಯ ಪರಿಪಾಟವಿದೆ

What is the significance of Karthika Masa celebration? How to offer Shiva ?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular