ಭಕ್ತರನ್ನು ಕಾಯುತ್ತಾಳೆ ಪೊಳಲಿ ರಾಜರಾಜೇಶ್ವರಿ : ಮಣ್ಣಿನ ವಿಗ್ರಹದಲ್ಲಿ ನೆಲೆಸಿದ್ದಾಳೆ ತಾಯಿ

Polali Rajarajeshwari Temple : ಜಗನ್ಮಾತೆ ಅಂತ ಕರೆಸಿಕೊಳ್ಳೋ ಆ ತಾಯಿಯ ಲೀಲೆ ಅಪಾರ. ಆಕೆಯನ್ನು ನಾವು ನವರಾತ್ರೆಲ್ಲಿ ವಿವಿಧ ರೂಪಗಳಲ್ಲಿ ಪೂಜೆ ಮಾಡುತ್ತೇವೆ . ಆಕೆಯ ರೂಪಗಳಲ್ಲಿ ಅತ್ಯಂತ ಸುಂದರ ರೂಪ ಅಂದ್ರೆ ಅದು ರಾಜರಾಜೇಶ್ವರಿ ತಾಯಿ ರೂಪ.

Polali Rajarajeshwari Temple : ಜಗನ್ಮಾತೆ ಅಂತ ಕರೆಸಿಕೊಳ್ಳೋ ಆ ತಾಯಿಯ ಲೀಲೆ ಅಪಾರ. ಆಕೆಯನ್ನು ನಾವು ನವರಾತ್ರೆಲ್ಲಿ ವಿವಿಧ ರೂಪಗಳಲ್ಲಿ ಪೂಜೆ ಮಾಡುತ್ತೇವೆ . ಆಕೆಯ ರೂಪಗಳಲ್ಲಿ ಅತ್ಯಂತ ಸುಂದರ ರೂಪ ಅಂದ್ರೆ ಅದು ರಾಜರಾಜೇಶ್ವರಿ ತಾಯಿ ರೂಪ. ರಾಜ ಕುಲದ ತಾಯಿ ಅಂತಾನೇ ಈ ರೂಪವನ್ನು ಕರೆಯುತ್ತಾರೆ .

Polali Rajarajeshwari Temple Near Mangalore What is the story of polali rajarajeshwari temple
Image Credit to Original Source

ಸಾಮಾನ್ಯವಾಗಿ ಈ ರೂಪವನ್ನು ರಾಜ ಕುಟುಂಬಗಳೇ ಕಲ್ಲಿನಲ್ಲಿ ಅಥವಾ ಲೋಹದ ರೂಪದಲ್ಲಿ ಪ್ರತಿಷ್ಟಾಪಿಸಿ ಪೂಜಿಸುತ್ತಾರೆ . ಆದ್ರೆ ಈ ದೇವಾಲಯದಲ್ಲಿ ಹಾಗಲ್ಲ, ಬದಲಾಗಿ ಇಲ್ಲಿ ರಾಜರಾಜೇಶ್ವರಿ ನೆಲೆಸಿರೋದು ಮಣ್ಣಿನ ಮೂರ್ತಿಯಲ್ಲಿ ಅನ್ನೋದು ವಿಶೇಷ . ಹೌದು ಅನಾದಿ ಕಾಲದಿಂದಲೂ ಇಲ್ಲಿ ಸಿಂಹಾಸನ ರೂಢಳಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ ತಾಯಿ.

ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿಯಲ್ಲಿರುವ ರಾಜರಾಜೇಶ್ವರಿ ಕ್ಷೇತ್ರ . ಸುಮಾರು 2000 ವರ್ಷಗಳಿಂದ ಸಿಂಹಾಸನ ರೂಢಳಾಗಿ ನಿಂತು ತಾಯಿ ಇಲ್ಲಿಗೆ ಬರುವ ಭಕ್ತರನ್ನು ಕಾಯುತ್ತಿದ್ದಾಳೆ. ಪಲ್ಗುಣಿ ನದಿಯ ತೀರದಲ್ಲಿ ಪ್ರಕೃತಿಯ ನಡುವಿನಲ್ಲಿ ನೆಲೆ ನಿಂತ ಈ ತಾಯಿಯ ರೂಪವನ್ನು ನೋಡೋದೇ ಬಲು ಅಂದ ಅಂತಾರೆ ಇಲ್ಲಿಯ ಭಕ್ತರು .ಹೀಗಾಗಿ ಈ ತಾಯಿಯನ್ನು ನೋಡೋಕೆ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಈ ದೇವಾಲಯಕ್ಕೆ 2000  ವರ್ಷಗಳ ಇತಿಹಾಸವಿದಯಂತೆ. ಸ್ಕಂದ ಪುರಾಣ ಹಾಗೂ ಅಶೋಕ ಶಾಸನ ಗಳಲ್ಲಿ ಈ ದೇವಾಲಯವಿದ್ದ ಪುರಾವೆ ಸಿಗುತ್ತಂತೆ . ಸುಮಾರು 2 ಸಾವಿರ ವರ್ಷಗಳ ಹಿಂದೆ ಸುರತ ಎಂಬ ಮಹಾರಾಜನು ಹಲವಾರು ಯುದ್ಧಗಳನ್ನು ಮಾಡಿ ಖಜಾನೆ ಕಳೆದು ಕೊಂಡು ಕಾಡಿನ ದಾರಿ ಹಿಡಿದನಂತೆ. ಆಗ ಅಲ್ಲಿ ಆತನನ್ನು ಭೇಟಿಯಾದ ಸುಮೇಧಾ ಎಂಬ ಮಹಾ ಋಷಿಗಳು ರಾಜನಿಗೆ ರಾಜರಾಜೇಶ್ವರಿ ಮಂತ್ರವನ್ನು ಪ್ರತಿ ಪಾದಿಸಿದರಂತೆ.

ಇದನ್ನೂ ಓದಿ:  ಕೇರಳದಲ್ಲಿ ಕಟುಕ ದುರ್ಯೋಧನನಿಗೂ ಇದೆ ದೇವಾಲಯ – ಇಲ್ಲಿನ ಜನಾಂಗಕ್ಕೆ ಇವನೇ ಆರಾಧ್ಯ ದೈವ

ಆ ದಿನ ರಾತ್ರಿ ರಾಜ ಅಲ್ಲೇ ಮರದ ಕೆಳಗೆ ನಿದ್ರೆಗೆ ಜಾರಿದನಂತೆ. ಆಗ ಕನಸಿನಲ್ಲಿ ಸಿಂಹಾಸನ ರೂಢಳಾಗಿ ಕಾಣಿಸಿಕೊಂಡಳಂತೆ . ಅದನ್ನು ಋಷಿಗಳಿಗೆ ತಿಳಿಸಿದಾಗ ಅವರು ಆ ರೂಪದಂತೆ ವಿಗ್ರಹವನ್ನು ಸ್ಥಾಪಿಸಲು ಹೇಳಿದರಂತೆ. ಅದರಂತೆ ವಿಶೇಷ ಮಣ್ಣಿನಲ್ಲಿ ತಾಯಿಯ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲು ಆರಂಭಿಸಿದನಂತೆ . ಇದಾದ ಕೆಲವು ಸಮಯದ ನಂತರ ರಾಜನಿಗೆ ತಾನು ಕಳೆದು ಕೊಂಡ ಸಂಪತ್ತು ವಾಪಸ್ ದೊರಕಿತು ಅಂತ ಹೇಳಲಾಗುತ್ತೆ.

Polali Rajarajeshwari Temple Near Mangalore What is the story of polali rajarajeshwari temple
Image Credit to Original Source

ಇದಾದ ನಂತರ ರಾಜ ಅಲ್ಲೇ ದೇವಾಲಯವೊಂದನ್ನು ಸ್ಥಾಪಿಸಿ. ತಾಯಿಗೆ ತನ್ನ ವಜ್ರ ಖಚಿತ ಕಿರೀಟವನ್ನು ನೀಡಿದನಂತೆ . ಅದೇ ಇಂದಿಗೂ ತಾಯಿಯ ಕಿರೀಟವಾಗಿದೆ ಅನ್ನೋದು ಇಲ್ಲಿನ ನಂಬಿಕೆ . ಇನ್ನು ಈ ತಾಯಿಯ ಜೊತೆಯಲ್ಲೇ ಈಕೆಯ ಪರಿವಾರ ದೇವತೆಗಳಾಗಿ ಗಣೇಶ ಸುಬ್ರಹ್ಮಣ್ಯ , ಶಿವ , ದುರ್ಗೆ ಹೀಗೆ ಹಲವು ಪರಿವಾಗ ದೇವತೆಗಳನ್ನು ಸ್ಥಾಪಿಸಲಾಗಿದೆ. ಇನ್ನು ಈ ವಿಗ್ರಹ ಮಣ್ಣಿನಿಂದ ತಯಾರಾದ ಕಾರಣ ಇಲ್ಲಿ ತಾಯಿಗೆ ಯಾವುದೇ ಅಭಿಷೇಕ ನಡೆಯೋದಿಲ್ಲ.

12 ವರ್ಷಕೊಮ್ಮೆ ವಿವಿಧ ಸಾಮಾಗ್ರಿಗಳಿಂದ ತಾಯಿಗೆ ಲೇಪ

ಇಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಬ್ರಹ್ಮ ಕಲಶ ನಡೆಯುತ್ತೆ. ಆಗ ಈ ತಾಯಿಯ ವಿಗ್ರಹಕ್ಕೆ ಆಗ ದ್ವಾದಶ ಲೇಪಾಷ್ಟ ಗಂಧ ಅನ್ನೋ ಲೇಪನವನ್ನು ಮಾಡಲಾಗುತ್ತೆ. ಇದರಲ್ಲಿ ಖಡು ಶರ್ಕರ ಎಂಬ ೬೪ ಗಿಡ ಮೂಲಿಕೆ ಮಿಶ್ರಣ, 7 ತರಹದ ಮಣ್ಣಿನ ಮಿಶ್ರಣ , ಬೆಳ್ಳಿ , ಬಂಗಾರದ ಪುಡಿ ಹಾಗೂ ಪಾದರಸದ ಮಿಶ್ರಣ ಮಾಡಿ ಹಚ್ಚಲಾಗುತ್ತೆ . ಜೊತೆಯಲ್ಲೇ ಶಂಖವನ್ನು ಪುಡಿಮಾಡಿ ಎಳನೀರಿನ ಜೊತೆಯಲ್ಲಿ ಮಿಶ್ರಮಾಡಿ ಲೇಪವನ್ನು ಹಚ್ಚಲಾಗುತ್ತೆ . ನಂತರ ನೈಸರ್ಗಿಕ ಬಣ್ಣಗಳ ಲೇಪ ಹಚ್ಚಲಾಗುತ್ತೆ . ಇದನ್ನು ಪ್ರತಿ 12 ವರ್ಷಗಳಿಂದ ಮಾಡುವ ರೂಢಿ ಇಲ್ಲಿದೆ .

ಇದನ್ನೂ ಓದಿ: ಇದು ವಾಮನ ಮಹಿಮೆಯನ್ನು ಸಾರುವ ಕ್ಷೇತ್ರ : ಇಲ್ಲೇ ವಾಮನ ಬಲಿಚಕ್ರವರ್ತಿ ಪಾತಾಳಕ್ಕೆ ತುಳಿದಿದ್ದನಂತೆ

ಇನ್ನು ಇಲ್ಲಿ ರಾಜರಾಜೇಶ್ವರಿ ತಾಯಿ ದೇವಾಲಯದ ಅಧಿಪತಿಯಾದರೂ ಇಲ್ಲಿ ಜಾತ್ರೆ ನಡೆಯುವುದು ಮಾತ್ರ ಆಕೆಯ ಪುತ್ರ ಸುಬ್ರಹ್ಮಣ್ಯನಿಗೆ. ಇಲ್ಲಿ 1 ತಿಂಗಳ ಕಾಲ ಜಾತ್ರೆ ನಡೆಯುತ್ತೆ . ಇದನ್ನು ಭಾರತದ ಅತೀ ದೊಡ್ಡ ಕಾಲಾವಧಿಯ ಜಾತ್ರೆ ಅಂತಾನೂ ಕಳೆಯುತ್ತಾರೆ. ಈ ಜಾತ್ರೆಯ ವಿಶೇಷವೆಂದರೆ ಇಲ್ಲಿ ನಡೆಯುವ ಚೆಂಡಾಟ. ರಕ್ತ ಬೀಜಾಸುರನನ್ನು ಸಂಹಾರ ಮಾಡಿದರ ನೆನಪಿಗಾಗಿ ಇಲ್ಲಿ ಚರ್ಮ ಹಾಗೂ ಹುಲ್ಲಿನಿಂದ ನಿರ್ಮಿಸಲಾದ ಚೆಂಡನ್ನು ಉಪಯೋಗಿಸಿ ಚೆಂಡಾಟವನ್ನು ಆಡಲಾಗುತ್ತೆ.

Polali Rajarajeshwari Temple Near Mangalore What is the story of polali rajarajeshwari temple
Image Credit to Original Source

ಇನ್ನು ಇಲ್ಲಿನ ಮತ್ತೊಂದು ವಿಶೇಷವೆಂದರೆ ಇಲ್ಲಿ ದೊರೆಯುವ ಕಲ್ಲಂಗಡಿ ಹಣ್ಣು. ಹಿಂದೆ ರಕ್ತ ಬೀಜಾಸುರ ಸಂಹಾರ ಮಾಡಿದಾಗ ತನ್ನನ್ನು ಅಮರವಾಗಿಸು ಅಂತ ತಾಯಿಯನ್ನು ಕೇಳಿದ್ದನಂತೆ ಆಗ ತಾಯಿಯು ಕಲ್ಲಂಗಡಿಯಾಗಿ ಪೊಳಲಿ ಜಾತ್ರೆಯಲ್ಲಿ ಪ್ರಸಾದ ರೂಪದಲ್ಲಿ ನೀನು ದೊರೆಯುವಂತಾಗು ಎಂದು ಆಶೀರ್ವದಿಸಿದಳಂತೆ,

ಇದನ್ನೂ ಓದಿ : ಭಾರತದಲ್ಲೇ ಹುಟ್ಟಿದ್ದನಂತೆ ರಾವಣ – ರಾವಣನಿಗೂ ಭಾರತದಲ್ಲಿವೆ ಹಲವು  ದೇವಾಲಯಗಳು 

ಅಂದಿನಿಂದ ಪೊಳಲಿ ಸುತ್ತಮುತ್ತಲೂ ಬೆಳೆಯುವ ಕಲ್ಲಂಗಡಿಯನ್ನು ಪ್ರಸಾದ ರೂಪದಲ್ಲಿ ಜನರು ಮನೆಗೆ ಕೊಂಡೊಯ್ಯುತ್ತಾರೆ . ಒಟ್ಟಾರೆ ಇದು ಹಲವು ಭಕ್ತರ ಪಾಲಿಗೆ ಆರಾಧ್ಯ ಕ್ಷೇತ್ರವಾಗಿದ್ದು ಸಾವಿರಾರು ಭಕ್ತರು ಇಲ್ಲಿಗೆ ಬಂದು ತಾಯಿಯ ಬಳಿ ಆಶೀರ್ವಾದ ಪಡೆದು ಕೃತಾರ್ಥರಾಗುತ್ತಾರೆ,.

Polali Rajarajeshwari Temple : Near Mangalore What is the story of polali rajarajeshwari temple ?

Comments are closed.