Ram Navami 2023 : ರಾಮ ನವಮಿ ಯಾವಾಗ? ದಿನ, ಮಹೂರ್ತ, ಮತ್ತು ಮಹತ್ವ

ಹಿಂದೂಗಳು ಹೊಸ ವರ್ಷ ‘ಯುಗಾದಿ’ಯ ನಂತರ ಆಚರಿಸುವ ಮೊದಲ ಹಬ್ಬ ಶ್ರೀ ರಾಮನ ಜನ್ಮ ದಿನ. ಚೈತ್ರ ಮಾಸದ, ಶುಕ್ಲ ಪಕ್ಷದ ನವಮಿಯ ದಿನದಂದು ರಾಮ ನವಮಿಯನ್ನು (Ram Navami 2023) ಆಚರಿಸಲಾಗುತ್ತದೆ. ಈ ವರ್ಷ ರಾಮ ನವಮಿಯನ್ನು ಗುರುವಾರ, ಮಾರ್ಚ್‌ 30 ರಂದು ಆಚರಿಸಲಾಗುತ್ತಿದೆ. ಶ್ರೀ ರಾಮನ ಜನ್ಮದಿನವನ್ನು ಶೃದ್ದಾ, ಭಕ್ತಿಯಿಂದ ಆಚರಿಸಲಾಗುತ್ತದೆ. ಭಗವಾನ್‌ ವಿಷ್ಣುವು ತನ್ನ ಏಳನೇ ಅವತಾರ ರಾಮಾವತಾರದಲ್ಲಿ ರಾಮನಾಗಿ ಜನ್ಮ ತಾಳಿದನು. ಆ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ರಾಮ ನವಮಿಯ ದಿನ, ಶುಭ ಮಹೂರ್ತ, ಮತ್ತು ಮಹತ್ವ ಇಲ್ಲಿದೆ ಓದಿ.

ರಾಮ ನವಮಿ (Ram Navami 2023) ಎಂದು ಆಚರಿಸಲಾಗುತ್ತಿದೆ ?

ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾದ ರಾಮ ನವಮಿಯನ್ನು ಈ ವರ್ಷ ಮಾರ್ಚ್‌ 30, 2023, ಗುರುವಾರದಂದು ಆಚರಿಸಲಾಗುತ್ತಿದೆ. ಹಿಂದೂ ಪಂಚಾಗದ ಪ್ರಕಾರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷದ, ನವಮಿ ತಿಥಿಯು ರಾಮ ನವಮಿಯಾಗಿದೆ.

ಇದನ್ನೂ ಓದಿ: ನಿದ್ರಾಹೀನತೆಯೇ ? ಚೆನ್ನಾಗಿ ನಿದ್ದೆ ಮಾಡಲು ನಿತ್ಯದ ಆಹಾರದಲ್ಲಿ ಪಿಸ್ತಾ ಬಳಸಿ

ಮಹೂರ್ತ:
ನವಮಿ ತಿಥಿಯ 29 ಮಾರ್ಚ್‌ 2023 ರ ರಾತ್ರಿ 9 ಘಂಟೆ 7 ನಿಮಿಷಕ್ಕೆ ಪ್ರಾರಂಭವಾಗಿ, ಮರುದಿನ ಅಂದರೆ ಮಾರ್ಚ್‌ 30 ರ ರಾತ್ರಿ 11 ಘಂಟೆ 30 ನಿಮಿಷಕ್ಕೆ ಮುಕ್ತಾಯವಾಗಲಿದೆ. ಈ ಶುಭ ಮಹೂರ್ತದಲ್ಲಿ ದಾನ, ಧಾರ್ಮಿಕ ಕಾರ್ಯಗಳನ್ನು ಮಾಡಲಾಗುತ್ತದೆ. ರಾಮ ರಕ್ಷಾ ಸೂತ್ರದ ಪಠಣ ಮಾಡಲಾಗುತ್ತದೆ.

ರಾಮ ನವಮಿಯ ಮಹತ್ವ:
ರಾಮ ಭಕ್ತರಿಗೆ ರಾಮ ನವಮಿಯು ಮಹತ್ವದ್ದಾಗಿದೆ. ಜೀವನದಲ್ಲಿ ಸಹನೆ, ಧೈರ್ಯ ಸಿಗಲಿದೆ ಎಂಬ ನಂಬಿಕೆ ಇದೆ.
ಈ ದಿನ ವಿಷ್ಣುವಿನ ಅವತಾರವಾದ ಭಗವಾನ್ ಶ್ರೀರಾಮನನ್ನು ಪೂಜಿಸುವುದರಿಂದ ಭಕ್ತರ ಜೀವನದಿಂದ ಎಲ್ಲಾ ತೊಂದರೆಗಳು ದೂರವಾಗುತ್ತದೆ.
ಈ ದಿನ ಪೂಜಿಸುವುದರಿಂದ ಶ್ರೀ ರಾಮನ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ: Public Exam 2023: 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ಬೋರ್ಡ್‌ ಪರೀಕ್ಷೆ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

(When is Ram Navami 2023. Know the tithi, date, time and significance)

Comments are closed.