World Heritage Day : ಇತಿಹಾಸದ ಶ್ರೀಮಂತ ಪರಂಪರೆಯ ಕುರುಹುಗಳನ್ನು ರಕ್ಷಿಸುವ ಸಂಕಲ್ಪ ತೊಟ್ಟ ಸಿಎಂ ಬೊಮ್ಮಾಯಿ

(World Heritage Day) ನಾಡಿನಲ್ಲಿನ ಸ್ಮಾರಕಗಳು, ವೈವಿದ್ಯತೆಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ, ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್‌ 18 ರಂದು ವಿಶ್ವ ಪರಂಪರೆ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು ವಿಶ್ವದಾದ್ಯಂತ ಇರುವ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳನ್ನು ರಕ್ಷಿಸಿ ಕಾಪಾಡುವ ಉದ್ದೇಶದಿಂದ ಪಾರಂಪರಿಕ ಆಚರಣೆ ಮಾಡಲಾಗುತ್ತದೆ.

ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು, ಭೂಗೋಳಶಾಸ್ತ್ರಜ್ಞರು, ಸಿವಿಲ್ ಇಂಜಿನಿಯರ್‌ಗಳು, ಕಲಾವಿದರು ಮತ್ತು ಪುರಾತತ್ತ್ವ ಶಾಸ್ತ್ರಜ್ಞರು, ಪರಂಪರೆಯನ್ನು ಸಂರಕ್ಷಿಸಲು ಕೊಡುಗೆ ನೀಡುವ ಎಲ್ಲಾ ಜನರ ಪ್ರಯತ್ನಗಳನ್ನು ಈ ದಿನದಂದು ಗುರುತಿಸಲಾಗುತ್ತದೆ. ಈವರೆಗೆ ವಿಶ್ವದ 167 ರಾಷ್ಟ್ರಗಳ ಒಟ್ಟು 1,121 ತಾಣಗಳಿಗೆ ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಲಾಗಿದೆ. ಇವುಗಳ ಪೈಕಿ 869 ಸಾಂಸ್ಕೃತಿಕ ನೆಲೆಗಳಾಗಿದ್ದರೆ 213 ಪ್ರಾಕೃತಿಕ ತಾಣಗಳು ಮತ್ತು 39 ತಾಣಗಳು ಈ ಎರಡರ ಮಹತ್ವವನ್ನೂ ಹೊಂದಿವೆ.

ಈ ದಿನದಂದು ಸುತ್ತಮುತ್ತಲಿನ ಇತಿಹಾಸದ ಶ್ರೀಮಂತ ಪರಂಪರೆಯ ಪ್ರತಿಯೊಂದು ಕುರುಹುಗಳನ್ನು ಮತ್ತು ತಾಣಗಳನ್ನು ರಕ್ಷಿಸಿ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಹಾಗೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪದೊಂದಿಗೆ ಸಿಎಂ ಬೊಮ್ಮಾಯಿ ಜನತೆಗೆ ವಿಶ್ವ ಪಾರಂಪರಿಕ ದಿನದ ಶುಭಾಶಯವನ್ನು ಕೋರಿದ್ದಾರೆ.

ವಿಶ್ವ ಪರಂಪರೆ ದಿನದ ಇತಿಹಾಸ :
1982 ರಲ್ಲಿ, ಸ್ಮಾರಕಗಳು ಮತ್ತು ತಾಣಗಳ ಇಂಟರ್ನ್ಯಾಷನಲ್ ಕೌನ್ಸಿಲ್ (ICOMOS) ಏಪ್ರಿಲ್ 18 ಅನ್ನು ವಿಶ್ವ ಪರಂಪರೆಯ ದಿನವಾಗಿ ಆಚರಿಸಬೇಕೆಂದು ಪ್ರಸ್ತಾಪ ಮಾಡಿದೆ. ನಂತರ, ದಿನಾಂಕವನ್ನು ಯುನೆಸ್ಕೋ 1983 ರಲ್ಲಿ 22 ನೇ ಸಾಮಾನ್ಯ ಸಮ್ಮೇಳನದಲ್ಲಿ ಅನುಮೋದನೆ ಮಾಡಿತು. ಇದು ಸಾಂಸ್ಕೃತಿಕ ಪರಂಪರೆ ಮತ್ತು ಸ್ಮಾರಕಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸುವ ಮತ್ತು ಅವುಗಳನ್ನು ಸಂರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ, ಈ ದಿನವನ್ನು ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ದಿನ ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ : ರಾಜ್ಯದ ಅತ್ಯಂತ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ವಾರ್ಷಿಕ ಆದಾಯ 127 ಕೋಟಿ

ಮಹತ್ವ ;
ಪ್ರಾಚೀನ ಕಟ್ಟಡಗಳು ಮತ್ತು ಸ್ಮಾರಕಗಳು ಮಾನವ ಜನಾಂಗ ಮತ್ತು ಜಗತ್ತಿಗೆ ಆಸ್ತಿ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ಪೂರ್ವಜರು ನಮಗಾಗಿ ಹಲವಾರು ಪಾರಂಪರಿಕ ನೆಲೆಯನ್ನು ಬಿಟ್ಟುಹೋಗಿದ್ದಾರೆ. ವಿಶ್ವ ಪರಂಪರೆಯ ದಿನವು ಸ್ಮಾರಕಗಳು ಮತ್ತು ಐತಿಹಾಸಿಕ ತಾಣಗಳು ಮತ್ತು ಅವುಗಳಿಗೆ ಸಂಬಂಧಿಸಿದ ಶ್ರೀಮಂತ ಪರಂಪರೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ದಿನವಾಗಿದೆ. ದಿನದ ಗುರಿ ಮತ್ತು ಮಹತ್ವವು ಕೇವಲ ವಿವಿಧ ಐತಿಹಾಸಿಕ ಸ್ಮಾರಕಗಳು ಮತ್ತು ತಾಣಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಸಮುದಾಯದ ಸಾಂಸ್ಕೃತಿಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ.

World Heritage Day: CM Bommai determined to protect the rich heritage of history

Comments are closed.