World Ozone Day 2022 : ವಿಶ್ವ ಓಝೋನ್‌ ದಿನ 2022 : ಈ ಆಚರಣೆಯ ಹಿಂದಿನ ಉದ್ದೇಶ ನಿಮಗೆ ಗೊತ್ತಾ…

ಪ್ರತಿ ವರ್ಷ ಸೆಪ್ಟೆಂಬರ್‌ 16 ರಂದು ವಿಶ್ವ ಓಝೋನ್‌ ದಿನ (World Ozone Day 2022) ಎಂದು ಆಚರಿಸಲಾಗುತ್ತದೆ. ಈ ಆಚರಣೆಯ ಮೂಲ ಉದ್ದೇಶವೇನೆಂದರೆ ಓಝೋನ್‌ ಪದರದ ಸವಕಳಿ ಮತ್ತು ಅದರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈ ದಿನದಂದು ಹಲವಾರು ಸಂಘ–ಸಂಸ್ಥೆಗಳು ಸಾಮಾನ್ಯ ಜನರಿಗೆ ಇದರ ಅರಿವು ಮೂಡಿಸಲು ಸೆಮಿನಾರ್ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಓಝೋನ್‌ ಪದರವು ಭೂಮಿಗೆ ರಕ್ಷಣಾತ್ಮಾಕ ಪದರವಾಗಿದೆ. ಇದು ನಮ್ಮ ಭೂಮಿಯ ಮೇಲ್ಮೈಯಿಂದ 10 ರಿಂದ 50 ಕಿಲೋಮೀಟರ್‌ಗಳ ನಡುವೆ ವಾಯುಮಂಡಲದಲ್ಲಿ ನೆಲೆಗೊಂಡಿರುವ ಪದರವಾಗಿದೆ. ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಈ ಪದರವು ಹೀರಿಕೊಳ್ಳುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪದರವು ಹಾನಿಗೊಳಗಾಗುತ್ತಿದೆ. ಮಾನವ ನಿರ್ಮಿತ ಕ್ಲೋರೊಫ್ಲೋರೋಕಾರ್ಬನ್‌ಗಳು (CFC ಗಳು) ಮತ್ತು ಹೈಡ್ರೋಕ್ಲೋರೋಫ್ಲೋರೋಕಾರ್ಬನ್‌ (HCFCs) ನಂತಹ ಅನಿಲಗಳು ನಿರಂತರವಾಗಿ ಓಝೋನ್‌ ಪದರ ಸೇರಿ ಅದನ್ನು ಹಾಳು ಮಾಡಿತ್ತಿವೆ. ನಮ್ಮ ಪರಿಸರ ಸಮತೋಲನದಿಂದಿರಲು ಈ ಪದರವು ಬಹಳ ಮುಖ್ಯವಾಗಿದೆ. ಈ ಓಝೋನ್‌ ಪದರದ ಸವಕಳಿಯನ್ನು ಮೊದಲ ಬಾರಿಗೆ ಬ್ರಿಟೀಷ್‌ ಹವಾಮಾನ ಶಾಸ್ತ್ರಜ್ಞರು ಗಮನಿಸಿದರು. 1970 ರಲ್ಲಿ ಓಝೋನ್‌ ಮಟ್ಟವು ಕಳೆದ 20 ವರ್ಷಗಳ ಹಿಂದೆ ಇದ್ದಕ್ಕಿಂತ ಕಡಿಮೆಯಾಗಿದೆ ಎಂಬುದನ್ನು ಕಂಡು ಹಿಡಿದರು.

ವಿಶ್ವ ಓಝೋನ್‌ ದಿನದ ಇತಿಹಾಸ :
1987 ರಲ್ಲಿ ಜಾಗತಿಕವಾಗಿ ಒಟ್ಟು 46 ರಾಷ್ಟ್ರಗಳು ಸೇರಿ ಓಝೋನ್‌ ಪದರವನ್ನು ಸವಕಳಿ ಮಾಡುವ ವಸ್ತುಗಳ ಮೇಲೆ ಮಾಂಟ್ರಿಯಲ್‌ ಪ್ರೋಟೋಕಾಲ್‌ಗೆ ಸಹಿ ಹಾಕಿದವು. ಈ ದಿನದ ನೆನಪಿಗಾಗಿ 1994 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಓಝೋನ್‌ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವನ್ನು ಗೊತ್ತುಪಡಿಸಿತು. ಸೆಪ್ಟೆಂಬರ್‌ 16, 1995 ರಂದು ಮೊದಲ ಬಾರಿಗೆ ವಿಶ್ವ ಓಝೋನ್‌ ದಿನವನ್ನು ಆಚರಿಸಲಾಯಿತು.

ಥೀಮ್‌:
ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಓಝೋನ್‌ ದಿನಕ್ಕೆ ಥೀಮ್‌ ಅನ್ನು ಗೊತ್ತುಪಡಿಸಲಾಗಿದೆ. ಈ ವರ್ಷದ ವಿಶ್ವ ಓಝೋನ್‌ ದಿನ 2022 ರ ಥೀಮ್‌ ‘ಭೂಮಿಯ ಮೇಲಿನ ಜೀವಗಳನ್ನು ರಕ್ಷಿಸಲು ಜಾಗತಿಕ ಸಹಕಾರ’. ಈ ಘೋಷವಾಕ್ಯವು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದರ ಜೊತೆಗೆ ಮಾಂಟ್ರಿಯಲ್‌ ಪ್ರೋಟೋಕಾಲ್‌ ನ ಪ್ರಭಾವನ್ನು ಗುರುತಿಸುತ್ತದೆ.

ಇದನ್ನೂ ಓದಿ : Prime minister birthday: ಪ್ರಧಾನಿ ಹುಟ್ಟುಹಬ್ಬದಂದು ವಿಮಾನದ ಮೂಲಕ ಭಾರತಕ್ಕೆ ಬರಲಿವೆ ಎಂಟು ವಿಶೇಷ ಚಿರತೆ

ಇದನ್ನೂ ಓದಿ : Moonlight illegal : ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಅಪರಾಧವೇ ? ಏನಿದು ಮೂನ್‌ಲೈಟ್‌ ವಿವಾದ

(World Ozone Day 2022 is observed by people every year on September 16)

Comments are closed.