World’s Greatest Places 2022: ಟೈಮ್ ನ ‘ವಿಶ್ವದ ಶ್ರೇಷ್ಠ ಸ್ಥಳಗಳು 2022’ ಪಟ್ಟಿಯಲ್ಲಿ ಭಾರತದ ಕೇರಳ, ಅಹಮದಾಬಾದ್ ಗೆ ವಿಶೇಷ ಸ್ಥಾನ

ಪ್ರತಿಷ್ಠಿತ ಅಂತರಾಷ್ಟ್ರೀಯ ನಿಯತಕಾಲಿಕೆಯಾದ ಟೈಮ್ ಭಾರತದ ಕೇರಳ ರಾಜ್ಯ ಮತ್ತು ಗುಜರಾತ್ ರಾಜ್ಯದ ಅಹಮದಾಬಾದ್ ನಗರವನ್ನು “ವಿಶ್ವದ ಶ್ರೇಷ್ಠ ಸ್ಥಳಗಳು 2022” ಪಟ್ಟಿಯಲ್ಲಿ ಇರಿಸಿದೆ. ಪರಿಶೋಧನೆಗಾಗಿ ಅತ್ಯುತ್ತಮ ಅನುಭವಗಳನ್ನು ನೀಡುವ 50 ಅತ್ಯಂತ ಅಸಾಮಾನ್ಯ ಸ್ಥಳಗಳನ್ನು ಈ ಪಟ್ಟಿ ಉಲ್ಲೇಖಿಸುತ್ತದೆ(World’s Greatest Places 2022).

ಕೇರಳದ ಬಗ್ಗೆ, ಮ್ಯಾಗಜಿನ್ ನ ಲೇಖನವು ಹೀಗೆ ಹೇಳುತ್ತದೆ, “ಭಾರತದ ನೈಋತ್ಯ ಕರಾವಳಿಯಲ್ಲಿ,ಇರುವ ಕೇರಳವು ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ಅದ್ಭುತವಾದ ಕಡಲತೀರಗಳು ಮತ್ತು ಸೊಂಪಾದ ಹಿನ್ನೀರುಗಳು, ದೇವಾಲಯಗಳು ಮತ್ತು ಅರಮನೆಗಳೊಂದಿಗೆ, ಕೂಡಿರುವ ಇದನ್ನು “ದೇವರ ಸ್ವಂತ ದೇಶ” ಎಂದು ಕರೆಯಲಾಗುತ್ತದೆ.

ಅಭಿವೃದ್ಧಿ ಹೊಂದುತ್ತಿರುವ ಕೇರಳವು “ಪರಿಸರ-ಪ್ರವಾಸೋದ್ಯಮ ಹಾಟ್ ಸ್ಪಾಟ್” ಆಗಿ ಈ ಮ್ಯಾಗಜಿನ್ ನ ಪಟ್ಟಿಗೆ ಬರಲು ಅರ್ಹತೆ ಪಡೆದಿದೆ. ಲೇಖನವು ಅಮಲ್ ತಾರಾ, ಆಯುರ್ವೇದ ಆಹಾರ ,ಯೋಗದ ಮೇಲೆ ಒತ್ತು ನೀಡುವ ಯೋಗ ಜೀವನಶೈಲಿ ಮತ್ತು ಅಲೆಪೆ ಹಿನ್ನೀರಿನ್ನು ಉಲ್ಲೇಖಿಸುತ್ತದೆ. ಕೇರಳದ ಕಾರವಾನ್ ಮೆಡೋಸ್ವಾ, ಇದು ಗಮೋನ್ ಗಿರಿಧಾಮದಲ್ಲಿರುವ ರಾಜ್ಯದ ಮೊದಲ ಕಾರವಾನ್ ಪಾರ್ಕ್ ಆಗಿದು , ಇದು ಪ್ರಕೃತಿ ಪ್ರವಾಸೋದ್ಯಮ ಹಾಟ್-ಸ್ಪಾಟ್ ಮಾಡಿ ಕೇರಳವನ್ನು ಟೈಮ್ ಮ್ಯಾಗಜಿನ್ ನ ಪಟ್ಟಿಗೆ ಸೇರಲು ಸಹಾಯ ಮಾಡಿದೆ.

ಪ್ರಾಚೀನ ಮತ್ತು ಆಧುನಿಕ ಜ್ಞಾನ-ರೂಪಗಳೊಂದಿಗೆ ಅಹಮದಾಬಾದ್ ಅನ್ನು ಅದರ ಅತ್ಯಾಧುನಿಕ ಕಲಿಕೆಯ ಅವಕಾಶಗಳಿಗಾಗಿ ಆಯ್ಕೆಮಾಡಲಾಗಿದೆ. ಪತ್ರಿಕೆಯಲ್ಲಿನ ಲೇಖನವು ಹೀಗೆ ಹೇಳುತ್ತದೆ, “ಭಾರತದ ಮೊದಲ ಯುನೆಸ್ಕೋ ವಿಶ್ವ ಪರಂಪರೆಯ ನಗರವಾಗಿ, ಅಹಮದಾಬಾದ್ ಪ್ರಾಚೀನ ಹೆಗ್ಗುರುತುಗಳು ಮತ್ತು ಸಮಕಾಲೀನ ಆವಿಷ್ಕಾರಗಳನ್ನು ಹೊಂದಿದೆ. ಅದು ಸಾಂಸ್ಕೃತಿಕ ಪ್ರವಾಸೋದ್ಯಮದ ಮೆಕ್ಕಾವನ್ನಾಗಿ ಮಾಡುತ್ತದೆ. ಇದು ಸಾಬರಮತಿ ನದಿಯ ದಡದಲ್ಲಿ 36 ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಅಹಮದಾಬಾದ್ ಪ್ರಶಾಂತ ಗಾಂಧಿ ಆಶ್ರಮ, ನವರಾತ್ರಿ ( ಒಂಬತ್ತು ದಿನಗಳ ಆಚರಣೆ) (ಈ ವರ್ಷ ಸೆಪ್ಟೆಂಬರ್. 26 ರಿಂದ ಅಕ್ಟೋಬರ್. 5 ರವರೆಗೆ) ಮುಂತಾದ ಕಾರಣಗಳಿಂದ ಸಾಂಸೃತಿಕ ಪ್ರವಾಸೀ ತಾಣವಾಗಿ ಟೈಮ್ ಮ್ಯಾಗಝಿನ್ ನ ಪಟ್ಟಿಗೆ ಸೇರಿದೆ.

ವಿಜ್ಞಾನ ನಗರ ಮತ್ತು ಹೊಸ ಐಷಾರಾಮಿ ಹೋಟೆಲ್‌ಗಳಂತಹ ಆಧುನಿಕ ಬೆಳವಣಿಗೆಗಳೊಂದಿಗೆ ಸಂಪೂರ್ಣವಾಗಿ ಬೆಸೆಯುವ ಅಹಮದಾಬಾದ್‌ನ ಅನನ್ಯ ಸಾಂಸ್ಕೃತಿಕ ವೈವಿಧ್ಯತೆಯು ಅದನ್ನು ಪ್ರಧಾನ ಪಟ್ಟಿಗೆ ಸೇರಿಸಲು ಸಹಾಯ ಮಾಡಿದೆ. ಕತಾರ್‌ನ ದೋಹಾ, ಇಂಡೋನೇಷ್ಯಾದ ಬಾಲಿ, ಫಿಲಿಪೈನ್ಸ್‌ನ ಬೊರಾಕೆ ಕೂಡ ಪಟ್ಟಿಗೆ ಬಂದ ಇತರ ಕೆಲವು ಸ್ಥಳಗಳು.

ಇದನ್ನೂ ಓದಿ : Ladakh Tourism: ‘ಹೈ ಪಾಸ್‌ಗಳ ನಾಡು’ ಲಡಾಖ್ ಮಿಸ್ ಮಾಡದೇ ಭೇಟಿ ನೀಡಿ

(World’s Greatest Places 2022 Kerala and Ahmedabad in top 50)

Comments are closed.