ಭಾನುವಾರ, ಏಪ್ರಿಲ್ 27, 2025
HomeSportsCricket40 Overs ODI Cricket : ಏಕದಿನ ಕ್ರಿಕೆಟ್ ಬೋರಿಂಗ್ ಬೋರಿಂಗ್ ; 40 ಓವರ್‌ಗಳಿಗೆ...

40 Overs ODI Cricket : ಏಕದಿನ ಕ್ರಿಕೆಟ್ ಬೋರಿಂಗ್ ಬೋರಿಂಗ್ ; 40 ಓವರ್‌ಗಳಿಗೆ ಇಳಿಯಲಿದ್ಯಾ ಏಕದಿನ ಕ್ರಿಕೆಟ್.. ?

- Advertisement -

ಮುಂಬೈ: 40 Overs ODI Cricket : ಒಂದು ಕಡೆ ಟಿ20 ಕ್ರಿಕೆಟ್ ಅಬ್ಬರ… ಮತ್ತೊಂದು ಕಡೆ ರೋಚಕತೆ ಹೆಚ್ಚಿಸಿಕೊಳ್ಳುತ್ತಿರುವ ಟೆಸ್ಟ್ ಕ್ರಿಕೆಟ್. ಟೆಸ್ಟ್ ಹಾಗೂ ಟಿ20 ಮಧ್ಯೆ ಖದರ್ ಕಳೆದು ಕೊಳ್ಳುತ್ತಿರುವ ಏಕದಿನ ಕ್ರಿಕೆಟ್. ಇತ್ತೀಚಿನ ದಿನಗಳಲ್ಲಿ 50 ಓವರ್”ಗಳ ಕ್ರಿಕೆಟ್ ಫಾರ್ಮ್ಯಾಟ್ ಬಗ್ಗೆ ಜನರ ಆಸಕ್ತಿ ಕಡಿಮೆಯಾಗುತ್ತಿದೆ. ಐಪಿಎಲ್ ಪಂದ್ಯಗಳು, ಅಂತರಾಷ್ಟ್ರೀಯ ಟಿ20 ಮ್ಯಾಚ್’ಗಳು ರೋಚಕತೆ ಹೆಚ್ಚಿಸ್ತಾ ಇದ್ರೆ, ಟೆಸ್ಟ್ ಕ್ರಿಕೆಟ್ ಕೂಡ ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡುತ್ತಿವೆ. 2020-21ರ ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿ, 2021-22ರ ಭಾರತ Vs ಇಂಗ್ಲೆಂಡ್ ಟೆಸ್ಟ್ ಸರಣಿ, 2022ರ ಇಂಗ್ಲೆಂಡ್ Vs ನ್ಯೂಜಿಲೆಂಡ್ ಟೆಸ್ಟ್ ಸರಣಿ ಕ್ರಿಕೆಟ್ ಪ್ರಿಯರನ್ನು ಟೆಸ್ಟ್ ಕ್ರಿಕೆಟ್’ನತ್ತ ಸೂಜಿಗಲ್ಲಿನಂತೆ ಸೆಳೆದು ಬಿಟ್ಟಿವೆ.

ಟೆಸ್ಟ್, ಟಿ20 ಅಬ್ಬರದ ಮಧ್ಚೆ ಏಕದಿನ ಕ್ರಿಕೆಟ್ ಖದರ್ ಕಳೆದುಕೊಳ್ಳುತ್ತಿರುವ ಹೊತ್ತಲ್ಲೇ, 50 ಓವರ್’ಗಳ ಫಾರ್ಮ್ಯಾಟನ್ನು 40 ಓವರ್’ಗಳಿಗೆ ಇಳಿಸಿದರೆ ಹೇಗೆ ಎಂಬ ಚರ್ಚೆಗಳು ಶುರುವಾಗಿವೆ. ಪಾಕಿಸ್ತಾನದ ಮಾಜಿ ದಿಗ್ಗಜ ಆಲ್ರೌಂಡರ್ ಶಾಹೀದ್ ಅಫ್ರಿದಿ (Shahid Afridi) ಇಂಥದ್ದೊಂದು ಸಲಹೆ ನೀಡಿದ್ದಾರೆ. “ಏಕದಿನ ಕ್ರಿಕೆಟ್ ಇತ್ತೀಚಿನ ದಿನಗಳಲ್ಲಿ ನೀರಸವಾಗಿ ಕಂಡು ಬರುತ್ತಿದೆ. ಇದನ್ನು ಮನರಂಜನಾತ್ಮಕವಾಗಿ ಮಾಡುವ ನಿಟ್ಟಿನಲ್ಲಿ 50 ಓವರ್”ಗಳ ಫಾರ್ಮ್ಯಾಟನ್ನು 40 ಓವರ್’ಗಳಿಗೆ ಕಡಿತಗೊಳಿಸಬೇಕು”.

  • ಶಾಹೀದ್ ಅಫ್ರಿದಿ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ನೀಡಿರುವ ಸಲಹೆಗೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಧ್ವನಿಗೂಡಿಸಿದ್ದಾರೆ.

“ಏಕದಿನ ಕ್ರಿಕೆಟ್’ನಲ್ಲಿ 50 ಓವರ್’ಗಳನ್ನು 40 ಓವರ್’ಗಳಿಗೆ ಇಳಿಸುವುದರಲ್ಲಿ ತಪ್ಪೇನೂ ಇಲ್ಲ. ಏಕದಿನ ಕ್ರಿಕೆಟ್ ಆರಂಭವಾಗದ ಅದು 60 ಓವರ್’ಗಳ ಫಾರ್ಮ್ಯಾಟ್ ಆಗಿತ್ತು. ನಾವು 1983ರಲ್ಲಿ ವಿಶ್ವಕಪ್ ಗೆದ್ದಾಗ ಏಕದಿನ ಕ್ರಿಕೆಟ್ 60 ಓವರ್ ಇತ್ತು. ನಂತರದ ದಿನಗಳಲ್ಲಿ 60 ಓವರ್”ಗಳ ಆಟ ನೀರಸ ಎಂದು ಜನರಿಗೆ ಅನ್ನಿಸಲು ಶುರುವಾಯ್ತು. ಅದರಲ್ಲೂ ಮುಖ್ಯವಾಗಿ 20ರಿಂದ 40 ಓವರ್’ಗಳ ಆಟವನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ ಏಕದಿನ ಕ್ರಿಕೆಟನ್ನು 60 ಓವರ್’ಗಳಿಂದ 50 ಓವರ್’ಗಳಿಗೆ ಇಳಿಸಲಾಯ್ತು. ಆ ನಿರ್ಧಾರ ತೆಗೆದುಕೊಂಡು ವರ್ಷಗಳೇ ಉರುಳಿ ಹೋಗಿವೆ. ಈಗ ಏಕದಿನ ಕ್ರಿಕೆಟ್ ಫಾರ್ಮ್ಯಾಟನ್ನು 50ರಿಂದ 40 ಓವರ್’ಗಳಿಗೆ ಇಳಿಸಲು ಇದು ಸಕಾಲ”.

  • ರವಿ ಶಾಸ್ತ್ರಿ, ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್.

ಇತ್ತೀಚಿನ ದಿನಗಳಲ್ಲಿ ವಿಶ್ವದ ಪ್ರಮುಖ ಆಟಗಾರರೇ ಏಕದಿನ ಕ್ರಿಕೆಟ್’ನತ್ತ ನಿರಾಸಕ್ತಿ ತೋರಿಸುತ್ತಿರುವುದು ಗಮನಾರ್ಹ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇತ್ತೀಚೆಗಷ್ಟೇ ತಮ್ಮ 31ನೇ ವಯಸ್ಸಿಗೇ ಏಕದಿನ ಕ್ರಿಕೆಟ್”ಗೆ ನಿವೃತ್ತಿ ಘೋಷಿಸಿದ್ದರು. 2023ರ ವಿಶ್ವಕಪ್ ನಂತರ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಏಕದಿನ ಕ್ರಿಕೆಟ್’ಗೆ ಗುಡ್ ಬೈ ಹೇಳಲಿದ್ದಾರೆ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ : Avesh, Axar Recreates Yuzvendra Chahal pose : ವಿಂಡೀಸ್‌ನಲ್ಲಿ ಚಹಾಲ್ ಪೋಸ್ ರೀಕ್ರಿಯೇಟ್ ಮಾಡಿದ ಅಕ್ಷರ್ ಪಟೇಲ್, ಆವೇಶ್ ಖಾನ್

ಇದನ್ನೂ ಓದಿ : India Senior Women squad : ಬರ್ಮಿಂಗ್’ಹ್ಯಾಮ್ ತಲುಪಿದ ಭಾರತ ಮಹಿಳಾ ಕ್ರಿಕೆಟ್ ತಂಡ

40 Overs ODI Cricket To Be Reduced To 40 Overs

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular