severed snake : ವಿಮಾನಯಾನದ ಸಸ್ಯಾಹಾರಿ ಊಟದಲ್ಲಿತ್ತು ಹಾವಿನ ತಲೆ : ವಿಡಿಯೋ ವೈರಲ್​

severed snake : ರೆಸ್ಟಾರೆಂಟ್​ಗಳಲ್ಲಿ ಊಟ ಸೇವಿಸುವಾಗ ಅನೇಕರ ತಟ್ಟೆಯಲ್ಲಿ ಜಿರಳೆ, ಇಲಿ ಪತ್ತೆಯಾದ ಘಟನೆಗಳನ್ನು ನಾವು ಕಂಡಿದ್ದೇವೆ. ಇದೀಗ ಇದೇ ಸಾಲಿಗೆ ಟರ್ಕಿ ಮೂಲದ ವಿಮಾನಯಾನ ಕಂಪನಿಯೊಂದು ಸೇರಿದೆ. ಟರ್ಕಿ ಮೂಲದ ವಿಮಾನಯಾನ ಕಂಪನಿಯು ವಿತರಿಸಿದ್ದ ಸಸ್ಯಾಹಾರಿ ಊಟದಲ್ಲಿ ಹಾವಿನ ತಲೆ ಪತ್ತೆಯಾಗಿದ್ದ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಜುಲೈ 21ರಂದು ಟರ್ಕಿಯ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್​ಗೆ ಹಾರಾಟ ನಡೆಸುತ್ತಿದ್ದ ಸನ್​ ಎಕ್ಸ್​ಪ್ರೆಸ್​ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ.


ಟ್ವಿಟರ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಆಲೂಗಡ್ಡೆ ಹಾಗೂ ಇತರೆ ತರಕಾರಿಗಳ ಜೊತೆಯಲ್ಲಿ ಹಾವಿನ ತಲೆ ಇರುವುದನ್ನೂ ಕಾಣಬಹುದಾಗಿದೆ. ಈ ಹಾವಿನ ತಲೆಯನ್ನು ನೋಡಿದರೇ ಮೈ ಝುಂ ಎನ್ನುವಂತಿದ್ದು ಈ ಘಟನೆ ವೈರಲ್​ ಆಗುತ್ತಿದ್ದಂತೆಯೇ ವಿಮಾನಯಾನ ಸಂಸ್ಥೆಯು ಪ್ರತಿಕ್ರಿಯೆಯನ್ನು ನೀಡಿದೆ. ಈ ಘಟನೆಯನ್ನು ನಾವು ಸಂಪೂರ್ಣವಾಗಿ ಒಪ್ಪುತ್ತಿಲ್ಲ. ಆದರೆ ವಿಮಾನಯಾನ ಸಂಸ್ಥೆಯು ಆಹಾರ ಪೂರೈಕೆದಾರರ ಜೊತೆ ಇರುವ ಒಪ್ಪಂದವನ್ನು ತಡೆಹಿಡಿದ್ದೇವೆ. ಹಾಗೂ ಈ ಘಟನೆಯ ಸಂಬಂಧ ತನಿಖೆ ಆರಂಭಗೊಂಡಿದೆ ಎಂದು ಹೇಳಿದೆ.


ವಾಯುಯಾನ ಉದ್ಯಮದಲ್ಲಿ 30 ವರ್ಷಗಳ ಅನುಭವ ಹೊಂದಿರುವ ನಾವು ವಿಮಾನದಲ್ಲಿ ಅತಿಥಿಗಳಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದೇವೆ. ಪ್ರಯಾಣಿಕರು ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣವನ್ನು ಮಾಡುವಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ವಾಯುಯಾನ ಸಂಸ್ಥೆಯ ವಕ್ತಾರ ಹೇಳಿಕೆ ನೀಡಿದ್ದಾರೆ.


ಇತ್ತ ವಿಮಾನದಲ್ಲಿ ಊಟ ಸರಬರಾಜು ಮಾಡಿರುವ ಕ್ಯಾಟರಿಂಗ್​ ಕಂಪನಿ ತಮ್ಮ ಮೇಲೆ ಎದುರಾದ ಈ ಅಪವಾದವನ್ನು ತಳ್ಳಿ ಹಾಕಿದೆ. ನಮ್ಮ ಆಹಾರ ಪೂರೈಕೆಯಲ್ಲಿ ಇಂತಹ ಪ್ರಮಾದ ಉಂಟಾಗಲು ಸಾಧ್ಯವೇ ಇಲ್ಲ. ನಾವು ಆಹಾರವನ್ನು 280 ಡಿಗ್ರಿ ಸೆಲ್ಸಿಯಸ್​ ಶಾಖದಲ್ಲಿ ಬೇಯಿಸುತ್ತೇವೆ. ಹೀಗಿರುವಾಗ ಹಾವಿನ ತಲೆ ಹಸಿಯಾಗಿ ಇರಲು ಹೇಗೆ ಸಾಧ್ಯ..? ಹೀಗಾಗಿ ಇದು ನಮ್ಮಿಂದಾದ ತಪ್ಪಲ್ಲ ಎಂದು ಹೇಳಿದೆ.

ಇದನ್ನು ಓದಿ : Nathan Lyon : ಸಹ ಆಟಗಾರನ ಮಾಜಿ ಪ್ರೇಯಸಿಯನ್ನೇ ಮದುವೆಯಾದ ಆಸೀಸ್ ಕ್ರಿಕೆಟರ್ ನೇಥಲ್ ಲಯಾನ್

ಇದನ್ನೂ ಓದಿ : Neeraj Chopra : ಕಾಮನ್​ವೆಲ್ತ್​​ ಗೇಮ್ಸ್​ 2022ನಿಂದ ಹೊರಗುಳಿದ ಚಿನ್ನದ ಹುಡುಗ ನೀರಜ್​ ಚೋಪ್ರಾ : ಭಾರತಕ್ಕೆ ಭಾರಿ ಆಘಾತ

severed snake head found in a sunexpress in flight meal video gone viral

Comments are closed.