India Senior Women squad : ಬರ್ಮಿಂಗ್’ಹ್ಯಾಮ್ ತಲುಪಿದ ಭಾರತ ಮಹಿಳಾ ಕ್ರಿಕೆಟ್ ತಂಡ

ಲಂಡನ್: ಇದೇ ತಿಂಗಳ 29ನೇ ತಾರೀಕಿನಿಂದ ಆರಂಭವಾಗಲಿರುವ ಕಾಮನ್ವೆಲ್ತ್ ಗೇಮ್ಸ್”ನಲ್ಲಿ ಭಾಗವಹಿಸಲು ಭಾರತದ ಮಹಿಳಾ ಕ್ರಿಕೆಟ್ ತಂಡ (Team India Senior Women squad) ಬರ್ಮಿಂಗ್’ಹ್ಯಾಮ್ ತಲುಪಿದೆ. ಕಾಮನ್ವೆಲ್ತ್ ಗೇಮ್ಸ್”ನಲ್ಲಿ ಆಡಲಿರುವ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ ತಂಡವನ್ನು (Indian women’s cricket team), ಅನುಭವಿ ಆಲ್ರೌಂಡರ್ ಹರ್ಮನ್”ಪ್ರೀತ್ ಕೌರ್ (Harmanpreet Kaur) ತಂಡವನ್ನು ಮುನ್ನಡೆಸಲಿದ್ದಾರೆ. (Team India Senior Women squad for Birmingham 2022 Commonwealth Games) ಅನುಭವಿ ಎಡಗೈ ಓಪನರ್ ಸ್ಮೃತಿ ಮಂಧನ (Smriti Mandhana) ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. ಭಾರತ ಮಹಿಳಾ ತಂಡ ಇದೇ ಮೊದಲ ಬಾರಿ ಕಾಮನ್ವೆಲ್ತ್ ಗೇಮ್ಸ್”ನಲ್ಲಿ ಆಡಲಿದೆ.

ಕಾಮನ್ವೆಲ್ತ್ ಗೇಮ್ಸ್”ನಲ್ಲಿ ಭಾರತ ತಂಡ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ಬಾರ್ಬೆಡೋಸ್ ತಂಡಗಳ ಜೊತೆ ಗ್ರೂಪ್ ‘ಎ’ನಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಗ್ರೂಪ್ ‘ಬಿ’ನಲ್ಲಿ ಸ್ಥಾನ ಪಡೆದಿವೆ. ಎಂಟೂ ತಂಡಗಳು ಲೀಗ್ ಹಂತದಲ್ಲಿ ತಲಾ 3 ಪಂದ್ಯಗಳನ್ನು ಆಡಲಿದ್ದು, ಎರಡೂ ಗ್ರೂಪ್’ಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಜುಲೈ 29ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಹರ್ಮನ್’ಪ್ರೀತ್ ಕೌರ್ ಬಳಗ ತನ್ನ ಮೂರೂ ಲೀಗ್ ಪಂದ್ಯಗಳನ್ನು ಬರ್ಮಿಂಗ್’ಹ್ಯಾಮ್”ನ ಎಡ್ಜ್ ಬಾಸ್ಟನ್ ಮೈದಾನದಲ್ಲೇ ಆಡಲಿದೆ.

Team India Senior Women squad for Birmingham 2022 Commonwealth Games

ಕಾಮನ್ವೆಲ್ತ್ ಗೇಮ್ಸ್: ಭಾರತ ಮಹಿಳಾ ತಂಡದ ವೇಳಾಪಟ್ಟಿ
ಜುಲೈ 29 Vs ಆಸ್ಟ್ರೇಲಿಯಾ (ಎಡ್ಜ್’ಬಾಸ್ಟನ್)
ಜುಲೈ 31 Vs ಪಾಕಿಸ್ತಾನ (ಎಡ್ಜ್’ಬಾಸ್ಟನ್)
ಆಗಸ್ಟ್ 03 Vs ಬಾರ್ಬೆಡೋಸ್ (ಎಡ್ಜ್’ಬಾಸ್ಟನ್)
ಕಾಮನ್ವೆಲ್ತ್ ಗೇಮ್ಸ್: ಭಾರತ ಮಹಿಳಾ ತಂಡ
ಹರ್ಮನ್’ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಎಸ್.ಮೇಘನಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕಾರ್, ಮೇಘನಾ ಸಿಂಗ್, ರೇಣುಕಾ ಠಾಕೂರ್, ಜೆಮಿಮಾ ರಾಡ್ರಿಗ್ಸ್, ರಾಧಾ ಯಾಜವ್, ಹರ್ಲೀನ್ ಡಿಯೋಲ್, ಸ್ನೇಹ್ ರಾಣಾ. ಮೀಸಲು ಆಟಗಾರ್ತಿಯರು: ಸಿಮ್ರಾನ್ ದಿಲ್ ಬಹದ್ದೂರ್, ರಿಚಾ ಘೋಷ್, ಪೂನಂ ಯಾದವ್.

ಇದನ್ನೂ ಓದಿ : Avesh, Axar Recreates Yuzvendra Chahal pose : ವಿಂಡೀಸ್‌ನಲ್ಲಿ ಚಹಾಲ್ ಪೋಸ್ ರೀಕ್ರಿಯೇಟ್ ಮಾಡಿದ ಅಕ್ಷರ್ ಪಟೇಲ್, ಆವೇಶ್ ಖಾನ್

ಇದನ್ನೂ ಓದಿ : Neeraj Chopra : ಕಾಮನ್​ವೆಲ್ತ್​​ ಗೇಮ್ಸ್​ 2022ನಿಂದ ಹೊರಗುಳಿದ ಚಿನ್ನದ ಹುಡುಗ ನೀರಜ್​ ಚೋಪ್ರಾ : ಭಾರತಕ್ಕೆ ಭಾರಿ ಆಘಾತ

Team India Senior Women squad for Birmingham 2022 Commonwealth Games

Comments are closed.