1983ರ ವಿಶ್ವವಿಕ್ರಮಕ್ಕೆ 42 ವರ್ಷ, ಎರಡೇ ದಿನಗಳಲ್ಲಿ ಮತ್ತೆ ವಿಶ್ವಕಪ್ ಗೆಲ್ಲುತ್ತಾ ಭಾರತ ?

T20 World Cup 2024 finals : ಬೆಂಗಳೂರು: ಕಪಿಲ್ ದೇವ್ (Kapil Dev) ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ (indian Crickte team)  ದೇಶಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟು ಇಂದಿಗೆ ಭರ್ತಿ 42 ವರ್ಷ ತುಂಬಿದೆ. 1983ರ ಜೂನ್ 25ರಂದು ಕಪಿಲ್ ಡೆವಿಲ್ಸ್ ಪಡೆ ಕ್ರಿಕೆಟ್ ಕಾಶಿ ಇಂಗ್ಲೆಂಡ್’ನ ಲಾರ್ಡ್ಸ್ ಮೈದಾನದಲ್ಲಿ ಇತಿಹಾಸ ನಿರ್ಮಿಸಿತ್ತು.

T20 World Cup 2024 finals : ಬೆಂಗಳೂರು: ಕಪಿಲ್ ದೇವ್ (Kapil Dev) ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ (indian Crickte team)  ದೇಶಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟು ಇಂದಿಗೆ ಭರ್ತಿ 42 ವರ್ಷ ತುಂಬಿದೆ. 1983ರ ಜೂನ್ 25ರಂದು ಕಪಿಲ್ ಡೆವಿಲ್ಸ್ ಪಡೆ ಕ್ರಿಕೆಟ್ ಕಾಶಿ ಇಂಗ್ಲೆಂಡ್’ನ ಲಾರ್ಡ್ಸ್ ಮೈದಾನದಲ್ಲಿ ಇತಿಹಾಸ ನಿರ್ಮಿಸಿತ್ತು. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಂದಿನ ಅನಭಿಷಿಕ್ತ ಕ್ರಿಕೆಟ್ ದೊರೆ ವೆಸ್ಟ್ ಇಂಡೀಸ್ ತಂಡವನ್ನು 43 ರನ್’ಗಳಿಂದ ಬಗ್ಗು ಬಡಿದಿದ್ದ ಭಾರತ ಎಲ್ಲರ ನಿರೀಕ್ಷೆಗಳನ್ನು ತಲೆ ಕೆಳಗಾಗಿಸಿ ಚೊಚ್ಚಲ ಬಾರಿ ವಿಶ್ವಕಪ್ ಎತ್ತಿ ಹಿಡಿದಿತ್ತು. ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ 54.4 ಓವರ್’ಗಳಲ್ಲಿ ಕೇವಲ 183 ರನ್ನಿ ಆಲೌಟಾಗಿತ್ತು.

42 years after winning the 1983 World Cup, will Indian cricket team win the World Cup again Only 4 days left for the t20 World Cup 2024 finals
Image Credit to Original Source

ಹ್ಯಾಟ್ರಿಕ್ ವಿಶ್ವಕಪ್ ಮುಡಿಗೇರಿಸಿಕೊಳ್ಳಲು 184 ರನ್’ಗಳ ಸುಲಭ ಗುರಿ ಬೆನ್ನಟ್ಟಿದ್ದ ಕೆರಿಬಿಯನ್ ಪಡೆ ಕಪಿಲ್ ಡೆವಿಲ್ಸ್ ಪಡೆಯ ಕೆತ್ತನೆಯ ಬೌಲಿಂಗ್’ಗೆ ಧೂಳೀಪಟಗೊಂಡು 52 ಓವರ್’ಗಳಲ್ಲಿ ಕೇವಲ 140 ರನ್ನಿಗೆ ಆಲೌಟಾಗಿತ್ತು. ಆಲ್ರೌಂಡ್ ಪ್ರದರ್ಶನ ತೋರಿ ಭಾರತ ಚಾಂಪಿಯನ್ ಪಟ್ಟಕ್ಕೇರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮೊಹಿಂದರ್ ಅಮರನಾಥ ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಮೂಡಿ ಬಂದಿದ್ದರು.

https://x.com/bcci/status/1805435310219706767?s=46

ಭಾರತ ಮೊದಲ ವಿಶ್ವಕಪ್ ಗೆದ್ದು 42 ವರ್ಷ ತುಂಬಿದ ನಾಲ್ಕು ದಿನಗಳ ನಂತರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಈಗಾಗಲೇ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆೆ. ಗುರುವಾರ (ಜೂನ್ 27) ಗಯಾನದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆಯುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ ಸೆಮಿಫೈನಲ್’ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ಕಂಡಿತ್ತು. ಆ ಸೋಲಿಗೆ ವಿಶ್ವಕಪ್ ಸೆಮಿಫೈನಲ್’ನಲ್ಲೇ ಸೇಡು ತೀರಿಸಿಕೊಳ್ಳುವ ಸುವರ್ಣಾವಕಾಶ ರೋಹಿತ್ ಶರ್ಮಾ ಬಳಗಕ್ಕೆ ಒದಗಿ ಬಂದಿದೆ.

ಇದನ್ನೂ ಓದಿ : India Vs Zimbabwe Series : ಜಿಂಬಾಬ್ವೆ ವಿರುದ್ಧದ ಟಿ20 ಸರಣಿ : ಭಾರತ ತಂಡಕ್ಕೆ ಗಿಲ್ ನಾಯಕ

42 years after winning the 1983 World Cup, will Indian cricket team win the World Cup again Only 4 days left for the t20 World Cup 2024 finals
Image Credit to Original Source

ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಟೂರ್ನಿಯ ತನ್ನ ಅಂತಿಮ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 24 ರನ್’ಗಳ ಭರ್ಜರಿ ಗೆಲುವು ದಾಖಲಿಸಿದೆ. ಸೇಂಟ್ ಲೂಸಿಯಾದ ಡ್ಯಾರೆನ್ ಸಮಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಗ್ರೂಪ್-1ರಲ್ಲಿ ಆಡಿದ ಮೂರೂ ಸೂಪರ್-8 ಪಂದ್ಯಗಳನ್ನು ಗೆದ್ದ ಭಾರತ ಒಟ್ಟು 6 ಅಂಕಗಳೊಂದಿಗೆ ಅಜೇಯವಾಗಿ ಸೆಮಿಫೈನಲ್ ತಲುಪಿತು.

ಇದನ್ನೂ ಓದಿ : ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಕೌಂಟ್‌ಡೌನ್: ಭಾರತಕ್ಕೆ ಕಾಡುತ್ತಿದೆ ನಾಕೌಟ್ ಫೋಬಿಯಾ

42 years after winning the 1983 World Cup, will Indian cricket team win the World Cup again ? Only 4 days left for the t20 World Cup 2024 finals

Comments are closed.