ACC Men’s Emerging Asia Cup 2023: ಭಾರತ ಎ’ ತಂಡದಲ್ಲಿ ಕನ್ನಡಿಗ ನಿಕಿನ್ ಜೋಸ್’ಗೆ ಚಾನ್ಸ್ ಕೊಡಿಸಿದ ತಿಲಕ್ ನಾಯ್ಡು

ಬೆಂಗಳೂರು: Nikin Jose : ಜುಲೈ 13ರಂದು ಶ್ರೀಲಂಕಾದಲ್ಲಿ ಆರಂಭವಾಗಲಿರುವ ಎಸಿಸಿ ಪುರುಷರ ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಗೆ (ACC Men’s Emerging Asia Cup 2023) ಭಾರತ ಎ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಮಧ್ಯಮ ಕ್ರಮಾಂಕದ ಯುವ ಬ್ಯಾಟ್ಸ್’ಮನ್ ನಿಕಿನ್ ಜೋಸ್ (Nikin Jose) ಅವಕಾಶ ಪಡೆದಿದ್ದಾರೆ. ಕರ್ನಾಟಕದ ಮಾಜಿ ಕ್ರಿಕೆಟಿಗ ತಿಲಕ್ ನಾಯ್ಡು (Tilak Naidu) ನೇತೃತ್ವದ ಬಿಸಿಸಿಐ ಕಿರಿಯರ ಕ್ರಿಕೆಟ್ ಸಮಿತಿ (BCCI Junior Cricket Committee) ಈ ತಂಡವನ್ನು ಆಯ್ಕೆ ಮಾಡಿದ್ದು, ತಮ್ಮ ತವರು ರಾಜ್ಯದ ಪ್ರತಿಭಾವಂತ ಆಟಗಾರನಿಗೆ ಭಾರತ ಎ ತಂಡದಲ್ಲಿ ಅವಕಾಶ ಕಲ್ಪಿಸುವಲ್ಲಿ ತಿಲಕ್ ನಾಯ್ಡು ಯಶಸ್ವಿಯಾಗಿದ್ದಾರೆ.

ಎಸಿಸಿ ಪುರುಷರ ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿ ಜುಲೈ 13ರಿಂದ 23ರವರೆಗೆ ಶ್ರೀಲಂಕಾದ ಕೊಲಂಬೋದಲ್ಲಿ ನಡೆಯಲಿದೆ. 50 ಓವರ್’ಗಳ ಮಾದರಿಯ ಟೂರ್ನಿಯಲ್ಲಿ ಭಾರತ ‘ಎ’, ಪಾಕಿಸ್ತಾನ ಎ’, ಶ್ರೀಲಂಕಾ ಎ’, ಅಫ್ಘಾನಿಸ್ತಾನ ಎ’, ಬಾಂಗ್ಲಾದೇಶ ಎ’, ಓಮನ್ ಎ’, ನೇಪಾಳ ಮತ್ತು ಯುಎಇ ಎ’ತಂಡಗಳು ಭಾಗವಹಿಸಲಿವೆ.

ಎಸಿಸಿ ಪುರುಷರ ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಗೆ ಭಾರತ ಎ ತಂಡ ಹೀಗಿದೆ :

ಸಾಯಿ ಸುದರ್ಶನ್, ಅಭಿಷೇಕ್ ಶರ್ಮಾ (ಉಪನಾಯಕ), ನಿಕಿನ್ ಜೋಸ್, ಪ್ರದೋಶ್ ರಂಜನ್ ಪಾಲ್, ಯಶ್ ಧುಲ್ (ನಾಯಕ), ರಿಯಾನ್ ಪರಾಗ್, ನಿಶಾಂತ್ ಸಿಂಧು, ಪ್ರಭ್ ಸ್ರಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಧ್ರುವ್ ಜೊರೆಲ್ (ವಿಕೆಟ್ ಕೀಪರ್), ಮಾನವ್ ಸುಥರ್, ಯುವರಾಜ್ ಸಿಂಗ್ ದೋಡಿಯಾ, ಹರ್ಷಿತ್ ರಾಣಾ, ಆಕಾಶ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಜವರ್ಧನ್ ಹಂಗರ್ಗೇಕರ್.

ಸ್ಟ್ಯಾಂಡ್ ಬೈ ಆಟಗಾರರು: ಹರ್ಷ್ ದುಬೇ, ನೇಹಲ್ ವಧೇರಾ, ಸ್ನೆಲ್ ಪಟೇಲ್, ಮೋಹಿತ್ ರೆಡ್ಕರ್.

ಕೋಚಿಂಗ್ ಸ್ಟಾಫ್: ಸಿತಾಂಶು ಕೋಟಕ್ (ಹೆಡ್ ಕೋಚ್, ಸಾಯಿರಾಜ್ ಬಹುತುಲೆ (ಬೌಲಿಂಗ್ ಕೋಚ್). ಮುನಿಶ್ ಬಾಲಿ (ಫೀಲ್ಡಿಂಗ್ ಕೋಚ್).

ಇದನ್ನೂ ಓದಿ : Yuzvendra Chahal : ದಕ್ಷಿಣ ಆಫ್ರಿಕಾ ಯುವತಿ ಜೊತೆ ಟೀಮ್ ಇಂಡಿಯಾ ಸ್ಪಿನ್ನರ್ ಚಹಲ್, ಯಾರೂ ಈ ತರುಣಿ?

ಇದನ್ನೂ ಓದಿ : Amol Majumdar : ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಅಮೋಲ್ ಮಜುಮ್ದಾರ್, ಶೀಘ್ರವೇ ಘೋಷಣೆ

Comments are closed.