Amol Majumdar : ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಅಮೋಲ್ ಮಜುಮ್ದಾರ್, ಶೀಘ್ರವೇ ಘೋಷಣೆ

ಬೆಂಗಳೂರು : ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈನ ದಿಗ್ಗಜ ಕ್ರಿಕೆಟಿಗನಾಗಿರುವ ಅಮೋಲ್ ಮಜುಮ್ದಾರ್ (Amol Majumdar) ಭಾರತ ಮಹಿಳಾ ಕ್ರಿಕೆಟ್ ತಂಡದ (India Women’s Cricket Team) ನೂತನ ಹೆಡ್ ಕೋಚ್ ಆಗಿ ನೇಮಕಗೊಳ್ಳಲಿದ್ದು, ಶೀಘ್ರದಲ್ಲೇ ಬಿಸಿಸಿಐ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ.

ಜುಲೈ 9ರಿಂದ ಆರಂಭವಾಗಲಿರುವ ಭಾರತ ಮಹಿಳಾ ತಂಡದ ಬಾಂಗ್ಲಾದೇಶ ಪ್ರವಾಸದಲ್ಲಿಯೇ ಅಮೋಲ್ ಮಜುಮ್ದಾರ್ ಟೀಮ್ ಇಂಡಿಯಾದ ಕೋಚಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ಭಾರತ 3 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಟಿ20 ಸರಣಿಗಳನ್ನಾಡಲಿದೆ. 48 ವರ್ಷದ ಅಮೋಲ್ ಮಜುಮ್ದಾರ್ ಮುಂಬೈ ತಂಡದ ಕೋಚ್ ಆಗಿದ್ದರು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ದೇಶೀಯ ಕ್ರಿಕೆಟ್‌ನ ದಿಗ್ಗಜನಾಗಿರುವ ಅಮೋಲ್ ಮಜುಮ್ದಾರ್ ಅವರ ಹೆಸರನ್ನು ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ (Cricket advisory committee) ಅಂತಿಮಗೊಳಿಸಿದೆ. ಭಾರತ ಮಹಿಳಾ ತಂಡದ ಹೆಡ್ ಕೋಚ್ ಆಗಿದ್ದ ಮುಂಬೈನ ಮತೊಬ್ಬ ಮಾಜಿ ಕ್ರಿಕೆಟಿಗ ರಮೇಶ್ ಪೊವಾರ್ ಅವರನ್ನು ಕೋಚ್ ಹುದ್ದೆಯಿಂದ ಕಳೆದ ವರ್ಷ ಕೆಳಗಿಳಿಸಲಾಗಿತ್ತು.

ಭಾರತ ಮಹಿಳಾ ಕ್ರಿಕೆಟ್ ತಂಡದ ಕಳೆದ ಕೆಲ ವರ್ಷಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಸತತವಾಗಿ ಮುಗ್ಗರಿಸುತ್ತಾ ಬಂದಿದೆ. 2017ರ ಏಕದಿನ ವಿಶ್ವಕಪ್, ನಂತರ ನಡೆದ ಟಿ20 ವಿಶ್ವಕಪ್ ಹಾಗೂ ಕಾಮನ್ವೆಲ್ತ್ ಗೇಮ್ಸ್‌ನಲ್ಲೂ ಟೀಮ್ ಇಂಡಿಯಾ ಫೈನಲ್‌ನಲ್ಲಿ ಸೋಲು ಕಂಡಿದೆ. ಭಾರತ ತಂಡದ ಆಟಗಾರ್ತಿಯರ ಫಿಟ್ನೆಸ್ ಮತ್ತು ಫೀಲ್ಡಿಂಗ್ ಬಗ್ಗೆ ವ್ಯಾಪಕ ಟೀಕೆಗಳಿದ್ದು, ಇದನ್ನು ಸರಿಪಡಿಸುವ ದೊಡ್ಡ ಜವಾಬ್ದಾರಿ ನೂತನ ಕೋಚ್ ಆಗಲಿರುವ ಅಮೋಲ್ ಮಜುಮ್ದಾರ್ ಅವರ ಮೇಲಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಅಮೋಲ್ ಮಜುಮ್ದಾರ್ ಭಾರತ ಮಹಿಳಾ ಸೀನಿಯರ್ ಕ್ರಿಕೆಟ್ ತಂಡದ ಕೋಚ್ ಆಗಿರಲಿದ್ದಾರೆ.

ಇದನ್ನೂ ಓದಿ : KL Rahul meets friends : ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಹಳೇ ಗೆಳೆಯರನ್ನು ಭೇಟಿ ಮಾಡಿದ ರಾಹುಲ್

ಇದನ್ನೂ ಓದಿ : Rajeshwari Gayakwad: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್

1993-94ನೇ ಸಾಲಿನಲ್ಲಿ ಮುಂಬೈ ಪರ ಮೊದಲ ಪಂದ್ಯವಾಡಿದ್ದ ಅಮೋಲ್ ಮಜುಮ್ದಾರ್ ವೃತ್ತಿಜೀವನದಲ್ಲಿ ಒಟ್ಟು 171 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದು, 30 ಶತಕ ಹಾಗೂ 60 ಅರ್ಧಶತಕಗಳ ನೆರವಿನಿಂದ 48.13ರ ಸರಾಸರಿಯಲ್ಲಿ 11,167 ರನ್ ಕಲೆ ಹಾಕಿದ್ದಾರೆ. 113 ಲಿಸ್ಟ್ ಎ ಪಂದ್ಯಗಳಿಂದ 3286 ರನ್ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರಿದರು ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಅಮೋಲ್ ಮಜುಮ್ದಾರ್ ಅವರಿಗೆ ಕೊನೆಯವರೆಗೂ ಸಿಗಲೇ ಇಲ್ಲ.

Amol Majumdar set to become new coach

Comments are closed.