Yuzvendra Chahal : ದಕ್ಷಿಣ ಆಫ್ರಿಕಾ ಯುವತಿ ಜೊತೆ ಟೀಮ್ ಇಂಡಿಯಾ ಸ್ಪಿನ್ನರ್ ಚಹಲ್, ಯಾರೂ ಈ ತರುಣಿ?

ಬೆಂಗಳೂರು : ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲ, ಮೈದಾನದ ಹೊರಗೂ ತಮ್ಮ ವಿಭಿನ್ನ ಚಟುವಟಿಕೆಗಳಿಂದ ತುಂಬಾನೇ ಫೇಮಸ್. ಸೋಷಿಯಲ್ ಮೀಡಿಯಾದಲ್ಲಂತೂ ಯುಜ್ವೇಂದ್ರ ಚಹಲ್ (Yuzvendra Chahal) ತುಂಬಾನೇ ಆಕ್ಟಿವ್. ಅದೇ ಸೋಷಿಯಲ್ ಮೀಡಿಯಾದಲ್ಲೊಂದು ಫೋಟ್ ವೈರಲ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಯುವತಿ ಜೊತೆ ಚಹಲ್ ಕಾಣಿಸಿಕೊಂಡಿದ್ದಾರೆ.

32 ವರ್ಷದ ಯುಜ್ವೇಂದ್ರ ಚಹಲ್ 2020ರಲ್ಲಿ ಡ್ಯಾನ್ಸರ್, ನಟಿ ಧನಶ್ರೀ ವರ್ಮಾ ಅವರನ್ನು ಮದುವೆಯಾಗಿದ್ದರು. ನಂತರ ಇಬ್ಬರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ಇದೀಗ ಚಹಲ್ ಸೌತ್ ಆಫ್ರಿಕಾ ಯುವತಿ ಜೊತೆ ಕಾಣಿಸಿಕೊಂಡಿದ್ದಾರೆ.

ಅಂದ ಹಾಗೆ ಯುಜ್ವೇಂದ್ರ ಚಹಲ್ ಅವರ ಜೊತೆ ಕಾಣಿಸಿಕೊಂಡಿರುವ ಯುವತಿಯ ಹೆಸರು ಜೆಸ್ ಫೆಬ್ರವರಿ (Jess February).ಈಕೆ ದಕ್ಷಿಣ ಆಫ್ರಿಕಾದ ಖ್ಯಾತ ಚೆಸ್ ಆಟಗಾರ್ತಿ. ಜೆಸ್ ಫೆಬ್ರವರಿ 2 ಬಾರಿ (2017 ಮತ್ತು 2019) ದಕ್ಷಿಣ ಆಫ್ರಿಕಾ ಮಹಿಳಾ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಚಹಲ್ ಜೊತೆಗಿನ ಭೇಟಿಯ ಚಿತ್ರವನ್ನು ಸ್ವತಃ ಜೆಸ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, “ಕೊನೆಗೂ ಚಹಲ್ ಅವರನ್ನು ಭೇಟಿಯಾದೆ” ಎಂದು ಬರೆದುಕೊಂಡಿದ್ದಾರೆ.

ಸ್ಟಾರ್ ಕ್ರಿಕೆಟಿಗನಾಗಿರುವ ಯುಜ್ವೇಂದ್ರ ಚಹಲ್ ಕ್ರಿಕೆಟ್‌ಗೆ ಕಾಲಿಡುವುದಕ್ಕೂ ಮುನ್ನ ಚೆಸ್ ಆಟಗಾರನಾಗಿದ್ದವರು. ಎಸ್ಟೀಮ್ಡ್ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಹಲ್ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಗ್ಲೋಬಲ್ ಚೆಸ್ ಲೀಗ್‌ನಲ್ಲಿ ಎಸ್‌ಜಿ ಅಲ್‌ಪೈನ್ ವಾರಿಯರ್ಸ್ ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿರುವ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ವಿಂಡೀಸ್ ವಿರುದ್ಧದ ಏಕದಿನ ಸರಣಿ ಜುಲೈ 27ರಂದು ಆರಂಭವಾಗಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜೈದೇವ್ ಉನಾದ್ಕಟ್, ಉಮ್ರಾನ್ ಮಲಿಕ್.

ಇದನ್ನೂ ಓದಿ : KL Rahul meets friends : ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಹಳೇ ಗೆಳೆಯರನ್ನು ಭೇಟಿ ಮಾಡಿದ ರಾಹುಲ್

ಇದನ್ನೂ ಓದಿ : Amol Majumdar : ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಅಮೋಲ್ ಮಜುಮ್ದಾರ್, ಶೀಘ್ರವೇ ಘೋಷಣೆ

ಭಾರತ Vs ವೆಸ್ಟ್ ಇಂಡೀಸ್ ಏಕದಿನ ಸರಣಿಯ ವೇಳಾಪಟ್ಟಿ (India tour of West Indies 2023 Fixtures) :
ಮೊದಲ ಏಕದಿನ: ಜುಲೈ 27 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಎರಡನೇ ಏಕದಿನ: ಜುಲೈ 29 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಮೂರನೇ ಏಕದಿನ: ಆಗಸ್ಟ್ 01 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)

Yuzvendra Chahal : Team India spinner Chahal with South Africa young woman, no one this babe?

Comments are closed.