Andy Flower RCB coach : ರಾಯಲ್ ಚಾಲೆಂಜರ್ಸ್‌ಗೆ ಮೇಜರ್ ಸರ್ಜರಿ, ಆರ್‌ಸಿಬಿ ಹೊಸ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ

ಬೆಂಗಳೂರು: Andy Flower RCB coach : ಸತತ 16 ವರ್ಷಗಳಿಂದ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ (RCB head coach) ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ (Roayl Challengers Bangalore), ತನ್ನ ತಂಡಕ್ಕೆ ಮೇಜರ್ ಸರ್ಜರಿ ಮಾಡಿದೆ.

ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಡ್ ಕೋಚ್ ಆಗಿದ್ದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸಂಜಯ್ ಬಾಂಗರ್ ಅವರನ್ನು ಪ್ರಧಾನ ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಬಾಂಗರ್ ಬದಲು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ಕೋಚ್ ಜಿಂಬಾಬ್ವೆಯ ಆ್ಯಂಡಿ ಫ್ಲವರ್ (Andy Flower) ಅವರನ್ನು ಆರ್’ಸಿಬಿ ತಂಡದ ನೂತನ ಪ್ರಧಾನ ಕೋಚ್ ಆಗಿ ನೇಮಕ ಮಾಡಲಾಗಿದೆ.

ಸಂಜಯ್ ಬಾಂಗರ್ ಅವನ್ನಷ್ಟೇ ಅಲ್ಲದೆ, ಆರ್’ಸಿಬಿಯ ಕ್ರಿಕೆಟ್ ಆಪರೇಷನ್ಸ್ ಡೈರೆಕ್ಟರ್ ಆಗಿದ್ದ ಮೈಕ್ ಹಸನ್ ಅವರನ್ನೂ ಕೂಡ ತಂಡದಿಂದ ಕೈಬಿಡಲಾಗಿದೆ. ಬಾಂಗರ್ ಮತ್ತು ನ್ಯೂಜಿಲೆಂಡ್’ನ ಮೈಕ್ ಹಸನ್ ಮಾರ್ಗದರ್ಶನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತ್ತೀಚಿನ ವರ್ಷಗಳಲ್ಲಿ ಸತತ ವೈಫಲ್ಯ ಎದುರಿಸಿತ್ತು. ಹೀಗಾಗಿ ತಂಡಕ್ಕೆ ಮೇಜರ್ ಸರ್ಜರಿ ಮಾಡಿರುವ ಆರ್’ಸಿಬಿ ಫ್ರಾಂಚೈಸಿ, ಇಂಗ್ಲೆಂಡ್’ನ ಮಾಜಿ ಕೋಚ್ ಕೂಡ ಆಗಿರುವ ಆ್ಯಂಡಿ ಫ್ಲವರ್ ಅವರಿಗೆ ಮಣೆ ಹಾಕಿದೆ.

55 ವರ್ಷದ ಆ್ಯಂಡಿ ಫ್ಲವರ್ 2022 ಮತ್ತು 2023ನೇ ಸಾಲಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೆಡ್ ಕೋಚ್ ಆಗಿದ್ದರು. ಆ್ಯಂಡಿ ಫ್ಲವರ್ ಮಾರ್ಗದರ್ಶನದಲ್ಲಿ ಎಲ್’ಎಸ್’ಜಿ ತಂಡ 2022ರಲ್ಲಿ ಐಪಿಎಲ್’ನಲ್ಲಿ ಆಡಿದ ಚೊಚ್ಚಲ ಟೂರ್ನಿಯಲ್ಲೇ ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ 2023ರ ಟೂರ್ನಿಯ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಆ್ಯಂಡಿ ಫ್ಲವರ್ ಅವರನ್ನು ಪ್ರಧಾನ ಕೋಚ್ ಹುದ್ದೆಯಿಂದ ಬಿಡುಗಡೆಗೊಳಿಸಿತ್ತು. ಇದನ್ನೂ ಓದಿ : India vs West Indies Live 1st t20 : ಭಾರತ – ವೆಸ್ಟ್‌ ಇಂಡೀಸ್‌ 1 ನೇ ಟಿ20 : ಟಾಸ್‌ ಗೆದ್ದ ವೆಸ್ಟ್‌ ಇಂಡಿಸ್‌ ಬೌಲಿಂಗ್‌ ಆಯ್ಕೆ

ಲಕ್ನೋ ತಂಡದ ಜೊತೆಗಿನ 2 ವರ್ಷಗಳ ಪ್ರಯಾಣದ ನಂತರ ಇದೀಗ ಆ್ಯಂಡಿ ಫ್ಲವರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಹೊಸ ಪ್ರಯಾಣ ಶುರು ಮಾಡಲಿದ್ದಾರೆ. ಐಪಿಎಲ್ ಆರಂಭವಾದಂದಿನಿಂದಲೂ ಐಪಿಎಲ್’ನಲ್ಲಿ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 16 ವರ್ಷಗಳಿಂದ ಪ್ರಶಸ್ತಿ ಗೆಲ್ಲಲು ವಿಫಲವಾಗುತ್ತಾ ಬಂದಿದೆ. ಐಪಿಎಲ್’ನಲ್ಲಿ ಆರ್’ಸಿಬಿ ಇದುವರೆಗೆ 3 ಬಾರಿ ಫೈನಲ್ ಪ್ರವೇಶಿಸಿದೆ. 2009ರಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ, 2011ರಲ್ಲಿ ಡೇನಿಯೆಲ್ ವೆಟ್ಟೋರಿ ನಾಯಕತ್ವದಲ್ಲಿ ಮತ್ತು 2016ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್’ಸಿಬಿ ಐಪಿಎಲ್’ನಲ್ಲಿ ಫೈನಲ್ ಪ್ರವೇಶಿಸಿತ್ತು.

Andy Flower RCB coach : Major surgery for Royal Challengers, RCB appoints Andy Flower as new coach

Comments are closed.