Shaheen Shah Afridi : ಏಷ್ಯಾ ಕಪ್’ಗೆ ಕೌಂಟ್’ಡೌನ್: ಭಾರತಕ್ಕೆ ಬಿಗ್ ವಾರ್ನಿಂಗ್ ಕೊಟ್ಟ ಪಾಕ್ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ

ಲಂಡನ್: ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿ (Asia Cup 2023) ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಸೆಪ್ಟೆಂಬರ್ 22ರಿಂದ 27ವರೆಗೆ ನಡೆಯಲಿದೆ. ಏಷ್ಯಾ ಕಪ್ ಏಕದಿನ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಮುಖಾಮುಖಿಯನ್ನು ಇಡೀ ಕ್ರಿಕೆಟ್ ಜಗತ್ತೇ ಎದುರು ನೋಡುತ್ತಿದೆ. ಏಷ್ಯಾ ಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಪಾಕಿಸ್ತಾನ ತಂಡದ ಯುವ ಎಡಗೈ ವೇಗದ ಬೌಲರ್ (Shaheen Shah Afridi) ಶಾಹೀನ್ ಶಾ ಅಫ್ರಿದಿ, ಟೀಮ್ ಇಂಡಿಯಾಗೆ ಬಿಗ್ ವಾರ್ನಿಂಗ್ ಕೊಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಾಹೀನ್ ಶಾ ಅಫ್ರಿದಿ, ತಮ್ಮ ಆರಂಭಿಕ ಸ್ಪೆಲ್’ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್’ಮನ್’ಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ದುಬೈನಲ್ಲಿ ನಡೆದ 2021ರ ಟಿ20 ವಿಶ್ವಕಪ್ ಮುಖಾಮುಖಿಯ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್’ಮನ್’ಗಳಾದ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಶಾಹೀನ್ ಶಾ ಅಫ್ರಿದಿ ಮಿಂಚಿದ್ದರು. ಇದನ್ನೂ ಓದಿ : Andy Flower RCB coach : ರಾಯಲ್ ಚಾಲೆಂಜರ್ಸ್‌ಗೆ ಮೇಜರ್ ಸರ್ಜರಿ, ಆರ್‌ಸಿಬಿ ಹೊಸ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ

ಶಾಹೀನ್ ಶಾ ಅಫ್ರಿದಿ ಆರಂಭಿಕ ಸ್ಪೆಲ್’ನಲ್ಲಿ ತಮ್ಮ ಡೆಡ್ಲಿ ಯಾರ್ಕರ್’ಗಳಿಂದ ಎದುರಾಳಿ ತಂಡದ ಬ್ಯಾಟ್ಸ್’ಮನ್’ಗಳಿಗೆ ಭಯ ಹುಟ್ಟಿಸಬಲ್ಲ ಬೌಲರ್. ಇದೀಗ ಇಂಗ್ಲೆಂಡ್’ನ “ಹಂಡ್ರೆಡ್” ಟೂರ್ನಿಯಲ್ಲಿ ವೆಲ್ಶ್ ಫೈಯರ್ ತಂಡದ ಆಡುತ್ತಿರುವ ಶಾಹೀನ್ ಅಫ್ರಿದಿ, ಮ್ಯಾಚೆಂಸ್ಟರ್ ಒರಿಜಿನಲ್ಸ್ ವಿರುದ್ಧ ಇನ್ನಿಂಗ್ಸ್’ನ ಮೊದಲ ಎಸೆತದಲ್ಲೇ ಭರ್ಜರಿ ಯಾರ್ಕರ್ ಮೂಲಕ ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲ, ಪ್ರಥಮ ಓವರ್’ನಲ್ಲಿ 2 ಯಾರ್ಕರ್ ಎಸೆತಗಳಲ್ಲಿ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಹಂಡ್ರೆಡ್ ಲೀಗ್’ನಲ್ಲಿ ಶಾಹೀನ್ ಶಾ ಅಫ್ರಿದಿ ಅವರ ಬೆಂಕಿ ಬೌಲಿಂಗ್ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ.

Shaheen Shah Afridi: Countdown to Asia Cup: Pakistan left-arm pacer Shaheen Shah Afridi gave big warning to India

Comments are closed.