Anil Kumble : ನಾಗರಹೊಳೆ ನ್ಯಾಷನಲ್ ಪಾರ್ಕ್’ನಲ್ಲಿ ಪತ್ನಿ-ಪುತ್ರನ ಜೊತೆ ಜಂಬೋ ಸಫಾರಿ

ಬೆಂಗಳೂರು: Anil Kumble : ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಮಾಂತ್ರಿಕರಲ್ಲಿ ಒಬ್ಬರಾಗಿರುವ ಅನಿಲ್ ಕುಂಬ್ಳೆ ವನ್ಯಜೀವಿ ಪ್ರೇಮಿ. ಅದ್ಭುತ ಫೋಟೋಗ್ರಾಫರ್ ಕೂಡ ಆಗಿರುವ “ಜಂಬೋ” ಖ್ಯಾತಿಯ ಅನಿಲ್ ಕುಂಬ್ಳೆ, ಬಿಡುವು ಸಿಕ್ಕಾಗಲೆಲ್ಲಾ ವನ್ಯಜೀವಿಗಳನ್ನು ಹುಡುಕಿ ಹೊರಡುತ್ತಾರೆ. ಪ್ರಾಣಿ-ಪಕ್ಷಿಗಳನ್ನು ಇಷ್ಟ ಪಡುವ ಕುಂಬ್ಳೆ ಕುಟುಂಬ ಸದಸ್ಯರ ಜೊತೆ ಸಾಕಷ್ಟು ಬಾರಿ ಸಫಾರಿಗೆ ಹೋಗಿದ್ದಾರೆ.

ಇದೀಗ ಅನಿಲ್ ಕುಂಬ್ಳೆ ಪತ್ನಿ ಚೇತನಾ ಹಾಗೂ ಪುತ್ರನ ಜೊತೆ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ. ಸಫಾಲಿಯ ಚಿತ್ರಗಳನ್ನು ತಮ್ಮ ಫೇಸ್’ಬುಕ್ ಖಾತೆಯಲ್ಲಿ ಪ್ರಕಟಿಸಿರುವ ಅನಿಲ್ ಕುಂಬ್ಳೆ ” ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದಲ್ಲಿ ಕುಟುಂಬದ ಜೊತೆ ಅದ್ಭುತ ಸಮಯಗಳನ್ನು ಕಳೆದೆ” ಎಂದು ಬರೆದುಕೊಂಡಿದ್ದಾರೆ.


52 ವರ್ಷದ ಅನಿಲ್ ಕುಂಬ್ಳೆ ವನ್ಯಜೀವಿ ಫೋಟೋಗ್ರಾಫರ್ ಕೂಡ ಹೌದು. ತಮ್ಮ ಬಳಿ ವನ್ಯಜೀವಿಗಳ ದೊಡ್ಡ ಫೋಟೋ ಕಲೆಕ್ಷನ್ ಅನ್ನೇ ಹೊಂದಿದ್ದಾರೆ. ಕ್ರಿಕೆಟ್’ನಿಂದ ನಿವೃತ್ತಿಯಾದ ನಂತರ ವನ್ಯಜೀವಿ ಫೋಟೋಗ್ರಫಿಯನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಕ್ರಿಕೆಟ್ ಆಡುತ್ತಿದ್ದಾಗಲೂ ಕುಂಬ್ಳೆ ಅವರ ಕಿಟ್ ಬ್ಯಾಗ್’ನಲ್ಲೊಂದು ಕ್ಯಾಮರಾ ಸದಾ ಇರುತ್ತಿತ್ತು. ದೇಶ-ವಿದೇಶಗಳಿಗೆ ಕ್ರಿಕೆಟ್ ಪ್ರವಾಸ ಹೋದಾಗಲೆಲ್ಲಾ ತಾವೆಲ್ಲಿ ಕ್ರಿಕೆಟ್ ಆಡುತ್ತಿದ್ದರೋ, ಅಲ್ಲೇ ಪಕ್ಕದಲ್ಲಿ ಅಭಯಾರಣ್ಯಗಳು, ನ್ಯಾಷನಲ್ ಪಾರ್ಕ್’ಗಳಿದ್ದರೆ ಅನಿಲ್ ಕುಂಬ್ಳೆ ತಪ್ಪದೆ ಭೇಟಿ ಕೊಡುತ್ತಿದ್ದರು.

ಟೆಸ್ಟ್ ಕ್ರಿಕೆಟ್’ನಲ್ಲಿ ಭಾರತೀಯ ಕ್ರಿಕೆಟ್ ತಂಡ ಅದ್ಭುತ ಮ್ಯಾಚ್ ವಿನ್ನರ್ ಆಗಿದ್ದ ಅನಿಲ್ ಕುಂಬ್ಳೆ, ಟೆಸ್ಟ್’ನ ಒಂದೇ ಇನ್ನಿಂಗ್ಸ್’ನಲ್ಲಿ ಎಲ್ಲಾ ಹತ್ತು ವಿಕೆಟ್’ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ. ವೃತ್ತಿಜೀವನದಲ್ಲಿ ಆಡಿರುವ 132 ಟೆಸ್ಟ್ ಪಂದ್ಯಗಳಿಂದ 619 ವಿಕೆಟ್ ಉರುಳಿಸಿ ಭಾರತ ಪರ ಟೆಸ್ಟ್’ನಲ್ಲಿ ಅತೀ ಹೆಚ್ಚು ವಿಕೆಟ್ಸ್ ಪಡೆದ ದಾಖಲೆ ಬರೆದಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ 74 ರನ್ನಿಗೆ 10 ವಿಕೆಟ್ ಪಡೆದಿರುವುದು ಅನಿಲ್ ಕುಂಬ್ಳೆ ಅವರ ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್. ಅಷ್ಟೇ ಅಲ್ಲದೆ ಇನ್ನಿಂಗ್ಸ್ ಒಂದರಲ್ಲಿ 35 ಬಾರಿ 5 ವಿಕೆಟ್’ಗಳ ಗೊಂಚಲುಗಳನ್ನೂ ಪಡೆದಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಸೇರಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅನಿಲ್ ಕುಂಬ್ಳೆ, 403 ಪಂದ್ಯಗಳಿಂದ 956 ವಿಕೆಟ್ ಉರುಳಿಸಿದ್ದಾರೆ.

ಇದನ್ನೂ ಓದಿ : India tour of West Indies : ಪ್ರಥಮ ಟೆಸ್ಟ್ ಪಂದ್ಯಕ್ಕೆ ಡೊಮಿನಿಕಾ ತಲುಪಿದ ಟೀಮ್ ಇಂಡಿಯಾ, ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ ಆಟಗಾರರು

ಇದನ್ನೂ ಓದಿ : BCCI Apex Council meeting : ಇಂಪ್ಯಾಕ್ಟ್ ಆಟಗಾರನ ನಿಯಮದಲ್ಲಿ ಮಹತ್ವದ ಬದಲಾವಣೆ ತಂದ ಬಿಸಿಸಿಐ

Comments are closed.