ಸೋಮವಾರ, ಏಪ್ರಿಲ್ 28, 2025
HomeSportsAnju Bobby George : ವಿಶ್ವ ಅಥ್ಲೆಟಿಕ್ಸ್​​ನಿಂದ ‘ವರ್ಷದ ಮಹಿಳೆ’ ಪ್ರಶಸ್ತಿ ಪಡೆದ ಅಂಜು ಬಾಬಿ...

Anju Bobby George : ವಿಶ್ವ ಅಥ್ಲೆಟಿಕ್ಸ್​​ನಿಂದ ‘ವರ್ಷದ ಮಹಿಳೆ’ ಪ್ರಶಸ್ತಿ ಪಡೆದ ಅಂಜು ಬಾಬಿ ಜಾರ್ಜ್​

- Advertisement -

ವಿಶ್ವ ಅಥ್ಲೆಟಿಕ್ಸ್​​​ ಭಾರತ್ ಹಿರಿಯ ಅಥ್ಲೀಟ್​​ ಅಂಜು ಬಾಬಿ ಜಾರ್ಜ್​ಗೆ ವರ್ಷದ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತದಲ್ಲಿ ಕ್ರೀಡೆಗೆ ಉತ್ತೇಜನ ನೀಡುವುದರ ಜೊತೆಗೆ ಮಹಿಳಾ ಆಟಗಾರರಿಗೂ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುವಂತೆ ಪ್ರೇರೆಪಿಸಿದ ಅಂಜು ಬಾಬಿ ಜಾರ್ಜ್ (Anju Bobby George) ಸಾಧನೆಗಳನ್ನು ಗಮನಿಸಿ ಈ ಅತ್ಯುನ್ನತ ಪ್ರಶಸ್ತಿಯನ್ನು ಮುಡಿಗೇರಿಸಲಾಗಿದೆ.

ಅಂಜು ಬಾಬಿ ಜಾರ್ಜ್ 2003ನೇ ಇಸ್ವಿಯಲ್ಲಿ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಉದ್ದ ಜಿಗಿತ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕವನ್ನು ಸಂಪಾದಿಸಿದ್ದರು. ಈ ಮೂಲಕ 2003ರ ಆವೃತ್ತಿಯ ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಕಂಚಿನ ಪದಕ ಗೆದ್ದ ಏಕೈಕ ಭಾರತೀಯ ಆಟಗಾರ್ತಿ ಎಂಬ ಹಿರಿಮೆ ಸಂಪಾದಿಸಿದ್ದಾರೆ.

ಕ್ರೀಡಾ ವಿಭಾಗದಲ್ಲಿ ಭಾರತಕ್ಕೆ ವಿಶ್ವ ಮಟ್ಟದ ಗೌರವ ತಂದುಕೊಟ್ಟ ಈ ಹಿರಿಯ ಆಟಗಾರ್ತಿ ಇನ್ನೂ ಕ್ರೀಡಾ ಲೋಕಕ್ಕೆ ತಮ್ಮ ಸೇವೆಯನ್ನು ಮುಂದುವರಿಸುತ್ತಲೇ ಇದ್ದಾರೆ. 2016ರಲ್ಲಿ ಅಂಜು ಬಾಬಿ ಜಾರ್ಜ್​ ಯುವತಿಯರಿಗೆ ಕ್ರೀಡೆಯಲ್ಲಿ ತರಬೇತಿ ನೀಡಲೆಂದೇ ಅಕಾಡೆಮಿಯನ್ನು ಆರಂಭಿಸಿದ್ದರು. ಇಲ್ಲಿ ತರಬೇತಿ ಪಡೆದ ಮಹಿಳಾ ಆಟಗಾರರು 20 ವರ್ಷದೊಳಗಿನ ವಿಭಾಗದಲ್ಲಿ ಪ್ರಶಸ್ತಿ ಸಂಪಾದಿಸಿದ್ದಾರೆ. ಭಾರತೀಯ ಅಥ್ಲೆಟಿಕ್​ ಫೆಡರೇಷನ್​​ನ ಹಿರಿಯ ಉಪಾಧ್ಯಕ್ಷೆಯಾಗಿ ಕೂಡ ಅಂಜುಬಾಬಿ ಜಾರ್ಜ್​ ಸೇವೆ ಗಮನಾರ್ಹವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಲಿಂಗ ಸಮಾನತೆಗಾಗಿ ಅಂಜು ನಿರಂತರವಾಗಿ ಧ್ವನಿ ಎತ್ತಿದ್ದಾರೆ ಎಂದು ವಿಶ್ವ ಅಥ್ಲೆಟಿಕ್ಸ್​ ಹೇಳಿದೆ .

ಇನ್ನು ಈ ವಿಚಾರವಾಗಿ ಮಾತನಾಡಿದ ಅಂಜು ವಿಶ್ವ ಅಥ್ಲೆಟಿಕ್ಸ್​​ನಿಂದ ಇಂತಹದ್ದೊಂದು ಪ್ರಶಸ್ತಿ ಪಡೆದಿರೋದು ನಿಜಕ್ಕೂ ನನಗೆ ಗೌರವ ಹೆಚ್ಚಿಸಿದೆ. ಪ್ರತಿದಿನ ಎದ್ದು ಕ್ರೀಡೆಗಾಗಿ ದುಡಿಯವುದಕ್ಕಿಂತ ಉತ್ತಮವಾದ ಭಾವನೆ ನನಗೆ ಬೇರೊಂದಿಲ್ಲ. ಯುವತಿಯರು ಕ್ರೀಡೆಯಲ್ಲಿ ಸಕ್ರಿಯರಾಗುತ್ತಿದ್ದಾರೆ. ನನ್ನ ಈ ಎಲ್ಲಾ ಪ್ರಯತ್ನಗಳನ್ನು ಗುರುತಿಸಿದ ನಿಮಗೆಲ್ಲ ನನ್ನ ಧನ್ಯವಾದ ಎಂದಿದ್ದಾರೆ.

ಇದನ್ನು ಓದಿ : KL RAHUL : ಪಂಜಾಬ್ ಕಿಂಗ್ಸ್‌ನಿಂದ ಹೊರಬಂದ ಕೆ.ಎಲ್.ರಾಹುಲ್‌ : ಕೊನೆಗೂ ಮೌನ ಮುರಿದ ಕನ್ನಡಿಗ

(Anju Bobby George wins woman of year award from world athletics)

RELATED ARTICLES

Most Popular